• search
For Quick Alerts
ALLOW NOTIFICATIONS  
For Daily Alerts

  ಈತನಿಗೆ ಸಲಿಂಗ ಕಾಮ ಹೆಮ್ಮೆ ಪಡುವ ವಿಷಯǃ

  |
    ಪ್ರತಿಷ್ಠಿತ ಆ್ಯಪಲ್ ಕಂಪನಿಯ ಸಿಇಓ ಟಿಮ್ ಕುಕ್ ಗೆ ಸಲಿಂಗ ಕಾಮ ಹೆಮ್ಮೆಯ ವಿಚಾರವಂತೆ | Oneindia Kannada

    ವಾಷಿಂಗ್ ಟನ್, ಅ. 31 : 'ನಾನು ಸಲಿಂಗಿ , ಈ ಬಗ್ಗೆ ನನಗೆ ಹೆಮ್ಮೆಯಿದೆ. ಒಬ್ಬ ತಾನು ಹೇಗೆ ಇಂಜಿನಿಯರ್, ಡಾಕ್ಟರ್ ಎಂದು ಹೇಳಿಕೊಳ್ಳುತ್ತಾನೋ ಹಾಗೆ ನಾನು ಸಲಿಂಗಿ ಎಂದು ಹೇಳಿಕೊಳ್ಳುತ್ತೇನೆ', ಹೀಗೆ ಹೇಳಿಕೊಂಡವರು ಅತಿ ಹೆಚ್ಚಿನ ವೇತನ ಪಡೆಯುತ್ತಿರುವ ಪ್ರತಿಷ್ಠಿತ ಆಪಲ್ ಸಿಇಒ ಟಿಮ್ ಕುಕ್.

    ತಮ್ಮ 54ನೇ ಹುಟ್ಟುಹಬ್ಬದ ಪ್ರಯುಕ್ತ ಪತ್ರಿಕೆಯೊಂದಕ್ಕೆ ಬರೆದ ಲೇಖನಲ್ಲಿ ಟಿಮ್ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದೇವರು ನೀಡಿದ ವಿಶೇಷ ಕೊಡುಗೆಗಳಲ್ಲಿ ಇದು ಒಂದು. ನಾನು ಸಲಿಂಗಿಯಾಗಿರುವುದರಲ್ಲಿ ನಾಚಿಕೆ ಪಟ್ಟುಕೊಳ್ಳುವಂಥದ್ದು ಏನೂ ಇಲ್ಲ. ಇದು ನನ್ನ ಆತ್ಮ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಕುಕ್ ಹೇಳಿದ್ದಾರೆ.[ಸಲಿಂಗಕಾಮ ನಿಷೇಧಕ್ಕೆ ಮತ್ತೊಮ್ಮೆ ಚಿಂತನೆ]

    ಸಲಿಂಗಿಯಾದ ಕಾರಣ ನಾನು ಜನ ನನ್ನನ್ನು ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಗುರುತಿಸಬಹುದು. ಹೀಗಾಗಿ ಅಲ್ಪಸಂಖ್ಯಾತರ ಸಮಸ್ಯೆ ಏನು? ಎಂಬುದನ್ನು ಅರಿಯಲು ಇದು ಸಾಧ್ಯವಾಗಿದೆ. ಕೇಲವ ನಾನೊಬ್ಬನೇ ಅಲ್ಲ ಅನೇಕ ರಾಜಕಾರಣಿಗಳು, ಚಿಂತಕರು ಸಲಿಂಗಿಗಳಾಗಿದ್ದರು ಆದರೆ ಬಹಿರಂಗ ಮಾಡಿಕೊಂಡಿರಲಿಲ್ಲ ಎಂದು ಕುಕ್ ಹೇಳಿದ್ದಾರೆ.

    ನಾನೇನು ಕ್ರಾಂತಿಕಾರಕನಲ್ಲ. ಇದ್ದ ಸಂಗತಿಯನ್ನು ಬಹಿರಂಗ ಪಡಿಸಿದ್ದೇನೆ ಅಷ್ಟೇ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಮನದ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಮಾಜ ಅವಕಾಶ ನೀಡಬೇಕು ಎಂದು ಟಿಮ್ ಕುಕ್ ಹೇಳಿದ್ದಾರೆ.[ಸಲಿಂಗರತಿ : ಕೋರ್ಟ್ ತೀರ್ಪಿಗೆ ಕೇಂದ್ರ ಬದ್ಧ]

    ಹಲವು ದೇಶಗಳಲ್ಲಿ ಸಲಿಂಗ ಕಾಮಕ್ಕೆ ಅವಕಾಶವಿಲ್ಲ. ಇತ್ತೀಚೆಗೆ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಅಮೆರಿಕದಲ್ಲಿ 2003ರ ನಂತರ ಸಲಿಂಗ ಕಾಮಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೇ 32 ರಾಷ್ಟ್ರಗಳು ಸಲಿಂಗ ಕಾಮವನ್ನು ಕಾನೂನು ಬದ್ಧ ಎಂದು ಒಪ್ಪಿಕೊಂಡಿವೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    It has not been a secret in the discerning tech world or in the gay-lesbian community, but Apple CEO Tim Cook has made his homosexuality public in a powerful essay in which he said he considers being gay "among the greatest gifts God has given me."

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more