• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೀಜಿಂಗ್ ಹೊಸ ಕೋವಿಡ್ ಪ್ರಕರಣ ಪತ್ತೆ; ಮಾಲ್‌ಗಳು ಬಂದ್

|
Google Oneindia Kannada News

ಬೀಜಿಂಗ್, ನವೆಂಬರ್ 12; ಚೀನಾದ ಬೀಜಿಂಗ್ ಸುತ್ತಮತ್ತ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಇದರಿಂದಾಗಿ ಶಾಪಿಂಗ್ ಮಾಲ್ ಮತ್ತು ಹಲವು ವಸತಿ ಪ್ರದೇಶಗಳಿಗೆ ಜನರ ಸಂಚಾರ ನಿರ್ಬಂಧಿಸಲಾಗಿದೆ.

ಬೀಜಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಥಳೀಯ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಅಂಗಡಿ, ಮಾಲ್‌ಗಳನ್ನು ಮುಚ್ಚಿಸಲಾಗಿದೆ. ಕೋವಿಡ್ ಹರಡುವಿಕೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸಾಮೂಹಿಕ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ.

ಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ, ಗ್ಯಾಸ್, ಪೆಟ್ರೋಲ್ ಇಲ್ಲಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ, ಗ್ಯಾಸ್, ಪೆಟ್ರೋಲ್ ಇಲ್ಲ

ಗುರುವಾರ ಬೆಳಗ್ಗೆ ಬೀಜಿಂಗ್ ಮಧ್ಯ ಭಾಗದಲ್ಲಿ 6 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾದವು. ತಕ್ಷಣ ಸೋಂಕು ಬೇರೆ ಪ್ರದೇಶಗಳಿಗೆ ಹರಡದಂತೆ ತಡೆಯಲು ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ.

 ಬಸ್‌, ರೈಲು ನಿಲ್ದಾಣದಲ್ಲೂ ಕೋವಿಡ್‌ ಲಸಿಕೆ: ಕೇಂದ್ರದಿಂದ ಸೂಚನೆ ಬಸ್‌, ರೈಲು ನಿಲ್ದಾಣದಲ್ಲೂ ಕೋವಿಡ್‌ ಲಸಿಕೆ: ಕೇಂದ್ರದಿಂದ ಸೂಚನೆ

ಕೋವಿಡ್ ಸೋಂಕಿತ ವ್ಯಕ್ತಿ ಮಾಲ್‌ಗೆ ಭೇಟಿ ನೀಡಿದ್ದ ಎಂಬ ಮಾಹಿತಿ ಸಿಕ್ಕಿತ್ತು. ಆದ್ದರಿಂದ ತಕ್ಷಣ ಮಾಲ್‌ಗಳನ್ನು ಬಂದ್ ಮಾಡಿಸಲಾಗಿದೆ. ಮಾಲ್‌ನಲ್ಲಿದ್ದ ಸಿಬ್ಬಂದಿ ಮತ್ತು ಜನರನ್ನು ಕೋವಿಡ್ ಪರೀಕ್ಷೆ ವರದಿ ಬರುವ ತನಕ ಹೊರಗೆ ಬಿಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಚೀನಾ ಅಧ್ಯಕ್ಷರಿಂದ ಶೀತಲ ಸಮರ ಎಚ್ಚರಿಕೆಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಚೀನಾ ಅಧ್ಯಕ್ಷರಿಂದ ಶೀತಲ ಸಮರ ಎಚ್ಚರಿಕೆ

ಸಾಮೂಹಿಕ ಪರೀಕ್ಷೆ ಮತ್ತು ಪ್ರಯಾಣ ನಿರ್ಬಂಧಗಳನ್ನು ಹೇರುವ ಮೂಲಕ ಚೀನಾ ಕೋವಿಡ್ ಸೋಂಕು ನಿಯಂತ್ರಿಸಿದೆ. ಆದರೆ ಈಗ ದೇಶಿಯ ಪ್ರಯಾಣದಿಂದಲೇ ಸೋಂಕು ಪತ್ತೆಯಾಗಿದೆ. ಆದ್ದರಿಂದ ಅಧಿಕಾರಿಗಳು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ.

ಬೀಜಿಂಗ್‌ನ ಚಾಯಾಂಗ್ ಮತ್ತು ಹೈಡಿಯನ್‌ನಲ್ಲಿ ಗುರುವಾರ ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಈ ಹೊಸ ಪ್ರಕರಣ ಪತ್ತೆಯಾದ ವ್ಯಕ್ತಿ ಈಶಾನ್ಯ ಜಿಲಿನ್ ಪ್ರಾಂತ್ಯದಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ.

ಸೋಂಕಿತನ ಸಂಪರ್ಕಕ್ಕೆ ಬಂದಿದ್ದ 280 ಜನರನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಚಾಯಾಂಗ್ ಮತ್ತು ಹೈಡಿಯನ್‌ನಲ್ಲಿ 12 ಸಾವಿರ ಜನರಿಗೆ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೀನಾದಲ್ಲಿ ಹೊಸ ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ. 24 ಗಂಟೆಯಲ್ಲಿ ಕೇವಲ 61 ಹೊಸ ಪ್ರಕರಣಗಳು ಪತ್ತೆಯಾಗಿವೆ. ಸೋಂಕು ಬೇರೆ ಪ್ರಾಂತ್ಯಗಳಿಗೆ ಹರಡದಂತೆ ತಡೆಯಲು ಬೇರೆ ಪ್ರಾಂತ್ಯಗಳ ಭೇಟಿಗೆ ಸಹ ಸ್ಥಳೀಯ ಆಡಳಿತಗಳು ನಿರ್ಬಂಧ ಹೇರುತ್ತಿವೆ.

ಬುಧವಾರ ಬೀಜಿಂಗ್‌ನಲ್ಲಿ 100 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಆಗ ಅಧಿಕಾರಿಗಳು ವಿವಿಧ ಪ್ರಾಂತ್ಯಗಳಿಗೆ ಪ್ರಯಾಣ ಮಾಡುವುದಕ್ಕೆ ನಿರ್ಬಂಧ ವಿಧಿಸಿದ್ದರು. ದೇಶದ 93 ನಿವಾಸಿಗಳು, ವಿದೇಶದಿಂದ ಆಗಮಿಸಿದ ಕೆಲವರಲ್ಲಿ ಹೊಸ ಸೋಂಕು ಪತ್ತೆಯಾಗಿತ್ತು.

ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿತ್ತು. ರಷ್ಯಾ ಗಡಿಯಲ್ಲಿರುವ ಹೀಲಾಂಗ್ ಜಿಯಾಂಗ್ ಪ್ರಾಂತ್ಯದಲ್ಲಿ 35 ಹೊಸ ಪ್ರಕರಣ ಪತ್ತೆಯಾದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.

ಹೈಬೈ ಪ್ರಾಂತ್ಯದಲ್ಲಿ 14, ಗನ್ಸುವಿನಲ್ಲಿ 14, ಇನ್ನರ್ ಮಂಗೋಲಿಯಾದಲ್ಲಿ 6, ಚಾಂಗ್‌ಕಿಂಗ್‌ ಮತ್ತು ಕಿಂಗ್‌ಹೈನಲ್ಲಿ 4, ನಿಂಗ್‌ಕ್ಸಿಯಾ ಮತ್ತು ಸಿಚುವಾನ್‌ನಲ್ಲಿ 1 ಹೊಸ ಕೋವಿಡ್ ಪ್ರಕರಣ ದಾಖಲಾಗಿತ್ತು.

ನವೆಂಬರ್ 14ರ ತನಕ ಶಾಪಿಂಗ್ ಮಾಲ್ ಮುಚ್ಚಲು ಆದೇಶ ನೀಡಲಾಗಿದೆ. ಶಾಂಪಿಂಗ್ ಮಾಲ್ ಸಿಬ್ಬಂದಿಗೆ ಕೋವಿಡ್ ಸೋಂಕು ಪತ್ತೆಯಾದರೆ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಬೇಕು ಎಂದು ಸೂಚನೆ ಕೊಡಲಾಗಿದೆ.

ಕೋವಿಡ್ ಸೋಂಕಿತ ವ್ಯಕ್ತಿ ಸ್ನೇಹಿತರಿಗೆ ಉಡುಗೊಡೆಗಳನ್ನು ಖರೀದಿ ಮಾಡಲು ಶಾಪಿಂಗ್ ಮಾಲ್‌ಗೆ ಬಂದಿದ್ದ. ಕೋವಿಡ್ ಸೋಂಕು ಪತ್ತೆಯಾಗದಿದ್ದರೆ ಆತ ಇನ್ನಷ್ಟು ಜನರನ್ನು ಭೇಟಿ ಮಾಡುವ ಸಾಧ್ಯತೆ ಇತ್ತು.

   David Warner ಹೀಗೆ ವಿಚಿತ್ರವಾಗಿ ನಡೆದುಕೊಂಡಿದ್ದೇಕೆ | Oneindia Kannada

   ಸೆಪ್ಟೆಂಬರ್ 5ರ ಬಳಿಕ ಚೀನಾದ ಯಾವುದೇ ಪ್ರಾಂತ್ಯದಲ್ಲಿ 100ಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ ಬುಧವಾರ ಬೀಜಿಂಗ್‌ನಲ್ಲಿ 100 ಹೊಸ ಪ್ರಕರಣ ದಾಖಲಾಗಿತ್ತು. ಇದರಿಂದಾಗಿ ಸೋಂಕು ಬೇರೆ ಪ್ರಾಂತ್ಯಗಳಿಗೆ ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

   English summary
   Authorities in Beijing sealed off a mall and locked down several residential compounds. The move comes after 6 new cases were detected in Beijing’s central districts.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X