ಎಲ್ಲದಕ್ಕೂ ತಯಾರಾಗಿರಿ: ಪಾಕ್ ಜನತೆಗೆ ಇಮ್ರಾನ್ ಖಾನ್ ಕರೆ
ಇಸ್ಲಾಮಾಬಾದ್, ಫೆಬ್ರವರಿ 26: ಭಾರತವು ಪಾಕಿಸ್ತಾನ ಗಡಿಯೊಳ್ಳಕ್ಕೆ ನುಗ್ಗಿ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೆ ಹಲವು ತುರ್ತು ಸಭೆಗಳನ್ನು ನಡೆಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ 'ಯಾವುದೇ ಘಟನೆ ನಡೆದರೂ ಎಲ್ಲದಕ್ಕೂ ತಯಾರಾಗಿರಿ' ಎಂದು ಪಾಕ್ ಜನರಿಗೆ ಕರೆ ಕೊಟ್ಟಿದ್ದಾರೆ.
ಸೈನ್ಯಕ್ಕೂ ತಯಾರಾಗಿರಿ ಎಂದು ಹೇಳಿರುವ ಇಮ್ರಾನ್ ಖಾನ್, ಭಾರತದ ವಿರುದ್ಧ ಪ್ರತೀಕಾರಕ್ಕೆ ಯತ್ನಿಸುವ ಮುನ್ಸೂಚನೆ ನೀಡಿದ್ದಾರೆ.
ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿಗೆ ಸಮನ್ಸ್ ಸಹ ಪಾಕಿಸ್ತಾನ ಸರ್ಕಾರದಿಂದ ವಿತರಣೆ ಆಗಿದ್ದು, ಭಾರತದ ಜೆಟ್‌ಗಳು ಪಾಕಿಸ್ತಾನದ ಗಡಿಯನ್ನು ಉಲ್ಲಂಘಿಸಿದೆ ಎಂದು ಸಮನ್ಸ್‌ನಲ್ಲಿ ಹೇಳಲಾಗಿದೆ.

ಭಾರತವು ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿರುವುದನ್ನು ಸಮನ್ಸ್‌ನಲ್ಲಿ ತೀವ್ರವಾಗಿ ಖಂಡಿಸಿರುವ ಪಾಕಿಸ್ತಾನವು, 'ರಕ್ಷಿಸಿಕೊಳ್ಳುವ ಹಕ್ಕಿ'ನ ಪ್ರಯೋಗ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.












Click it and Unblock the Notifications