Syrian Civil War: ಅರಮನೆಗೆ ನುಗ್ಗಿದ ವಿರೋಧಿಗಳು, ಸಿರಿಯಾ ಬಿಟ್ಟು ಓಡಿ ಹೋದ ಅಧ್ಯಕ್ಷ!
ಸಿರಿಯಾ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪಿದೆ, ಒಂದು ಕಡೆ ಆಂತರಿಕ ಕಲಹದ ಕಾರಣಕ್ಕೆ ಕಳೆದ 13 ವರ್ಷಗಳಿಂದ ನರಳಿತ್ತು ಸಿರಿಯಾ. ಆದರೆ ಇದೀಗ ನಾಗರಿಕ ಯುದ್ಧಕ್ಕೆ ಅಂತ್ಯವನ್ನ ಹಾಡಿದ್ದರೂ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗಿದೆ, ಅದರಲ್ಲೂ ಸಿರಿಯಾ ರಾಜಧಾನಿ ಕಡೆಗೆ ನುಗ್ಗಿ ನುಗ್ಗಿ ಬರುತ್ತಿರುವ ಬಂಡುಕೋರರ ಪಡೆ ಹಿಂಸಾಚಾರ ಜೋರು ಮಾಡಿದೆ. ಹೀಗಾಗಿ, ಇಡೀ ಸಿರಿಯಾ & ಪ್ರಮುಖವಾಗಿ ಸಿರಿಯಾ ರಾಜಧಾನಿ ಧಗಧಗ ಹೊತ್ತಿ ಉರಿಯುತ್ತಿದೆ. ಈ ಸಮಯದಲ್ಲೇ ರಷ್ಯಾ ಕೂಡ ಸ್ಫೋಟಕ ಸತ್ಯ ಹಂಚಿಕೊಂಡಿದೆ.
ಹೌದು, 2011ರ ಸಮಯದಲ್ಲಿ ಶುರುವಾಗಿದ್ದ ಸಿರಿಯಾ ಆಂತರಿಕ ದಂಗೆ ಇದೀಗ ಕೊನೆಗೂ ಮುಕ್ತಾಯದ ಹಂತಕ್ಕೆ ಬಂದಿದೆ. ಸಿರಿಯಾ ಅಧ್ಯಕ್ಷ ದೇಶವನ್ನೇ ಬಿಟ್ಟು ಓಡಿ ಹೋಗಿದ್ದಾರೆ. ಹೀಗಿದ್ದಾಗ ದಂಗೆಕೋರರು ನೇರವಾಗಿ ಸಿರಿಯಾ ಒಳಗೆ ನುಗ್ಗಿದ್ದು, ಸಿರಿಯಾ ರಾಜಧಾನಿಯನ್ನ ತಮ್ಮ ವಶಕ್ಕೆ ಪಡೆದಿದ್ದಾರೆ ದಂಗೆಕೋರರು. ಅತ್ತ, ಸಿರಿಯಾ ಅಧ್ಯಕ್ಷರು ರಷ್ಯಾ ದೇಶಕ್ಕೆ ಓಡಿ ಹೋಗಿದ್ದರೆ ಮತ್ತೊಂದು ಕಡೆ ಸಿರಿಯಾ ಅಧ್ಯಕ್ಷರ ಅರಮನೆಗೆ ದಂಗೆಕೋರರು ನುಗ್ಗಿ, ದರೋಡೆ ಶುರು ಮಾಡಿದ್ದಾರೆ.

ಅರಮನೆಗೆ ನುಗ್ಗಿದ ದಂಗೆಕೋರರಿಂದ ಲೂಟಿ
ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್ ಪ್ರದೇಶದಲ್ಲಿ ಸಿರಿಯಾ ಅಧ್ಯಕ್ಷ ಅಸಾದ್ ಅವರಿಗೆ ಸೇರಿದ ಭವ್ಯ ಅರಮನೆ ಇದ್ದು, ಇದೇ ಅರಮನೆ ಮೇಲೆ ಇದೀಗ ಲಕ್ಷಾಂತರ ದಂಗೆಕೋರರ ಕಣ್ಣು ಬಿದ್ದಿದೆ. ಹೀಗಾಗಿ, ಅವರೆಲ್ಲಾ ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್ ಪ್ರದೇಶಕ್ಕೆ ನುಗ್ಗಿದ್ದಾರೆ. ಅಲ್ಲದೆ ಅಸಾದ್ ಅರಮನೆಯನ್ನ ಲೂಟಿ ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ & ಫೋಟೋಗಳು ಫುಲ್ ವೈರಲ್ ಆಗುತ್ತಿವೆ. ಅಲ್ಲದೆ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಕೂಡ ನಡೆಯುತ್ತಿದೆ.
ಇಸ್ರೇಲ್ ಮಿಲಿಟರಿಯಿಂದ ಭರ್ಜರಿ ಅಟ್ಯಾಕ್!
ಸಿರಿಯಾ ಮೇಲೆ ದಿಢೀರ್ ಇಸ್ರೇಲ್ ಘೋರ ದಾಳಿ ಆರಂಭ ಮಾಡಿದೆ. ಯಾಕಂದ್ರೆ ಒಂದು ಕಡೆ ಸಿರಿಯಾ ಅಧ್ಯಕ್ಷ ಸ್ಥಾನ ಬಿಟ್ಟು & ದೇಶವನ್ನೇ ಬಿಟ್ಟು ಅಸ್ಸಾದ್ ಎಸ್ಕೇಪ್ ಆಗಿದ್ದು, ಹೀಗಿದ್ದಾಗ ದಂಗೆಕೋರರು ಸಿರಿಯಾ ರಾಜಧಾನಿಗೆ ನುಗ್ಗಿ ಅಧಿಕಾರ ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಈ ಸಮಯದಲ್ಲೇ ಇಸ್ರೇಲ್ ಕೂಡ ಎದ್ದು ಕೂತಿದ್ದು, ಸಿರಿಯಾ ನೆಲದ ಮೇಲೆ ದಾಳಿ ಮಾಡುತ್ತಾ ಸಿರಿಯಾ ನೆಲವನ್ನು ಇಸ್ರೇಲ್ ತನ್ನ ವಶಕ್ಕೆ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ.
1974ರ ಕದನ ವಿರಾಮ ಒಪ್ಪಂದ ಉಲ್ಲಂಘನೆ?
ಗೋಲನ್ ಹೈಟ್ಸ್ ಎಂಬ ಪ್ರದೇಶ ಸಿರಿಯಾ ಸೇನೆಯ ಹಿಡಿತದಲ್ಲಿ ಇತ್ತು. ಇದೀಗ ಇಸ್ರೇಲ್‌ನ ಸೇನೆ ಈ ಭಾಗಕ್ಕೆ ನುಗ್ಗಿ 'ಗೋಲನ್ ಹೈಟ್ಸ್' ಪ್ರದೇಶವನ್ನು ತನ್ನ ವಶಕ್ಕೆ ಪಡೆದಿದೆ ಅಂತಾ ಮಾಹಿತಿ ಹರಿದಾಡುತ್ತಿದೆ. ಇದಿಷ್ಟೇ ಅಲ್ಲದೆ ಇನ್ನಷ್ಟು ಸಿರಿಯಾ ನಿಯಂತ್ರಿತ ಭಾಗಗಳು ಈಗ ಇಸ್ರೇಲ್ ಮಿಲಿಟರಿ ವಶಕ್ಕೆ ಸಿಗುತ್ತಿವೆ. ಈ ಭಾಗದಲ್ಲಿ ಭಾರಿ ಘೋರ ದಾಳಿ ನಡೆಯುವ ಆತಂಕ ಆವರಿಸಿದೆ. 1974ರ ಕದನ ವಿರಾಮ ಒಪ್ಪಂದದ ಪ್ರಕಾರ 'ಗೋಲನ್ ಹೈಟ್ಸ್' ಪ್ರದೇಶವನ್ನು ಬಫರ್ ಝೋನ್ ಎಂದು ಪರಿಗಣಿಸಲಾಗಿತ್ತು. ಆದರೆ, ಇದೀಗ ಈ ಪ್ರದೇಶಕ್ಕೆ ನುಗ್ಗಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ.












Click it and Unblock the Notifications