ಹದಿನಾರು ಸರ್ಜರಿಗಳ ನಂತರ ಸರಿಹೋಯ್ತು 'ಟ್ರೀ ಮ್ಯಾನ್' ಕೈ!

Posted By: Chethan
Subscribe to Oneindia Kannada

ಢಾಕಾ, ಜ. 6: 'ಎಪಿಡರ್ಮೋಡೈಸ್ ಪ್ಲಾಸಿಯಾ ವೆರುಸಿಫಾರ್ಮ್' (ಟ್ರೀ ಮ್ಯಾನ್ ರೋಗ) ಎಂಬ ವಿಚಿತ್ರವಾದ ಚರ್ಮದ ಕಾಯಿಲೆಗೆ ತುತ್ತಾಗಿ ಕಳೆದ ನಾಲ್ಕು ವರ್ಷಗಳಿಂದ ಕೈಯ್ಯಾರೆ ಊಟ ಅಥವಾ ಮತ್ಯಾವುದೇ ದೈನಂದಿನ ಕಾರ್ಯಗಳನ್ನೂ ಮಾಡಲಾಗದೇ ಪರಿತಪಿಸುತ್ತಿದ್ದ ಬಾಂಗ್ಲಾದೇಶದ 27 ವರ್ಷದ ರಿಕ್ಷಾ ಚಾಲಕ ಅಬುಲ್ ಬಜಂದಾರ್ ಈಗ ನಿರಾಳರಾಗಿದ್ದಾರೆ.

ಈ ರೋಗದ ಪರಿಣಾಮವಾಗಿ ಆತ ಎರಡೂ ಕೈಗಳ ಬೆರಳುಗಳ ತುದಿ ಹಾಗೂ ಉಗುರು ಯದ್ವಾತದ್ವಾ ಬೆಳೆದು ಮರದ ತೊಗಟೆಯ ರೂಪ ಪಡೆದುಕೊಂಡಿದ್ದಲ್ಲದೆ ಪರಸ್ಪರ ಸುತ್ತಿಕೊಂಡು ಗೆಡ್ಡೆಯಂತೆ ಅಂಟಿಕೊಂಡಿದ್ದವು. ವೈದ್ಯರಿಗೆ ಸವಾಲಾಗಿದ್ದ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಢಾಕಾ ವೈದ್ಯಕೀಯ ಕಾಲೇಜಿನ ವೈದ್ಯ ಹಾಗೂ ಪ್ಲಾಸ್ಟಿಕ್ ಸರ್ಜರಿ ಪರಿಣಿತ ಸಮಂತಾ ಲಾಲ್ ಸೇನ್ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಕಳೆದ ನಾಲ್ಕು ವರ್ಷಗಳಲ್ಲಿ 16 ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಬೇಕಾಯಿತೆಂದು ಸಮಂತಾ ತಿಳಿಸಿದ್ದಾರೆ.

Bangladesh 'Tree Man' recovered after 16 Surgeries

ತಮ್ಮ ಸಮಸ್ಯೆ ನಿವಾರಣೆಯಾಗಿ ಸಂತುಷ್ಟರಾಗಿರುವ ಅಬುಲ್, ವಿಚಿತ್ರವಾದ ರೋಗದಿಂದಾಗಿ ನನ್ನ ಮೂರು ವರ್ಷದ ಮಗಳನ್ನು ಎತ್ತಿಕೊಂಡು ಮುದ್ದು ಮಾಡದೇ ಇರಬೇಕಾಗಿತ್ತು. ಇದರಿಂದ ನಾನು ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದೆ ಎಂದಿದ್ದಾರಲ್ಲದೆ, ಹೊಸ ಜೀವನ ಕೊಟ್ಟ ವೈದ್ಯರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಏನಿದು ಪ್ಲಾಸಿಯಾ ವೆರಸಿಫಾರ್ಮ್?: ಎಪಿಡರ್ಮೋಡೈಸ್ ಪ್ಲಾಸಿಯಾ ವೆರುಸಿಫಾರ್ಮ್ ಎಂಬುದು ವರ್ಣತಂತುಗಳಲ್ಲಾಗುವ ಏರುಪೇರುಗಳಿಂದಾಗುವ ಸಮಸ್ಯೆಯಾಗಿದೆ. ಇದರ ಫಲವಾಗಿ ಉಗುರು, ಬೆರಳಿನ ತುದಿಗಳು ಮಿತಿಮೀರಿ ಬೆಳೆದು ಮರದ ತೊಗಟೆಯಂತೆ ಬೆಳೆಯುತ್ತವೆ. ಈವರೆಗೆ ವಿಶ್ವದಲ್ಲಿಈವರೆಗೆ ಕೇವಲ ನಾಲ್ಕು ವ್ಯಕ್ತಿಗಳಲ್ಲಿ ಮಾತ್ರ ಈ ರೋಗ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ರೋಗಕ್ಕೆ ತುತ್ತಾದವರನ್ನು ಟ್ರೀ ಮ್ಯಾನ್ ಎಂದು ಕರೆಯಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 27-year-old former rickshaw driver, Abul Bajandar as suffering from a special disease epidermodysplasia verruciformis. After 16 successful surgeries he has been recovered.
Please Wait while comments are loading...