Bangladesh: ಬಾಂಗ್ಲಾದೇಶ ಮಾಜಿ ಪ್ರಧಾನಿ ಭಾರತದಿಂದ ವಾಪಸ್?
ಭಾರತದ ಕೃಪೆಯಿಂದ ಬದುಕಿ ಉಳಿದ ಬಾಂಗ್ಲಾದೇಶದ ಕಿರಿಕ್ ಕಡಿಮೆ ಆಗುತ್ತಿಲ್ಲ. ಯಾಕಂದ್ರೆ ಬಾಂಗ್ಲಾದೇಶದ ಒಳಗೆ ಬೆಂಕಿ ಹೊತ್ತಿಕೊಂಡ ನಂತರ, ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಓಡಿ ಬಂದಿದ್ದಾರೆ. ಹೀಗೆ ಬಾಂಗ್ಲಾ ಮಾಜಿ ಪ್ರಧಾನಿ ಭಾರತಕ್ಕೆ ಓಡಿ ಬಂದಿದ್ದಾರೆ ಎಂಬ ಕಾರಣಕ್ಕೆ ಅಲ್ಲಿನ ರಾಜಕಾರಣಿಗಳು ಈಗಲೂ ಕೊತ ಕೊತ ಅಂತಿದ್ದಾರೆ. ಇಷ್ಟು ಮಾತ್ರ ಅಲ್ಲ ಇದೀಗ ಶೇಖ್ ಹಸೀನಾ ವಾಪಸ್ ಬರಬೇಕು ಎಂಬ ಪಟ್ಟು ಹಿಡಿದಿದ್ದು, ಹಸೀನಾ ರೀ ಎಂಟ್ರಿಗೆ ಬೇಕಾದ ತಯಾರಿಗಳನ್ನ ಕೂಡ ಮಾಡಿಕೊಳ್ಳುತ್ತಿದ್ದಾರೆ!
ಭಾರತ ಜಾಗತಿಕ ಮಟ್ಟದಲ್ಲಿ ಬಾಂಗ್ಲಾದೇಶಕ್ಕೆ ಸಾಕಷ್ಟು ಸಹಾಯವನ್ನು ಮಾಡುತ್ತಾ ಬಂದಿದೆ. ಪಾಕಿಸ್ತಾನದ ಕೈಯಲ್ಲಿ ಸಿಲುಕಿ ನರಳಾಡುತ್ತಿದ್ದ ಬಾಂಗ್ಲಾದೇಶ ಇಂದು ಸ್ವತಂತ್ರವಾಗಿ ಮತ್ತು ನೆಮ್ಮದಿಯಾಗಿ ಉಸಿರಾಡುತ್ತಿದೆ ಅಂದ್ರೆ ಅದಕ್ಕೆ ಭಾರತವೇ ಕಾರಣ. ಯಾಕಂದ್ರೆ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಭಾರತ ಕೂಡ ಸಹಾಯ ಮಾಡಿತ್ತು. ಅಲ್ಲದೆ ಬಾಂಗ್ಲಾ ಸ್ವತಂತ್ರವಾದ ನಂತರ ಸಾಕಷ್ಟು ಸಮಸ್ಯೆ ಎದುರಿಸಿದೆ, ಹೀಗಿದ್ದಾಗ ಭಾರತವೇ ಮುಂದೆ ಬಂದು ಸಾಕಷ್ಟು ಬೆಂಬಲ ನೀಡಿ ಸಹಾಯ ಕೂಡ ಮಾಡಿದೆ.

ಬೆನ್ನಿಗೆ ಚೂರಿ ಹಾಕುತ್ತಿದ್ದಾರಾ?
ಬಾಂಗ್ಲಾದೇಶ ಇದೀಗ ಕೈಗಾರಿಕೆಗಳ ಅಭಿವೃದ್ಧಿಗೆ ಮುಂದಾಗಿದೆ ಎಂದರೆ ಭಾರತವೇ ಕಾರಣ. ಅಲ್ಲದೆ, ಬಾಂಗ್ಲಾದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿ ಮಾಡಲು ಭಾರತ ಸಹಾಯ ಮಾಡಿದೆ. ಇಷ್ಟಾದರೂ ಬಾಂಗ್ಲಾ ರಾಜಕಾರಣಿಗಳು ಮಾತ್ರ ತಮ್ಮ ಬುದ್ಧಿ ಬಿಡುತ್ತಿಲ್ಲ. ಹೀಗಾಗಿ, ಬಾಂಗ್ಲಾದೇಶ ಹೊತ್ತಿ ಉರಿದಿದೆ. ಈ ನಡುವೆ ಭಾರತಕ್ಕೆ ಓಡಿ ಬಂದಿರುವ ಬಾಂಗ್ಲಾ ಪ್ರಧಾನಿ ಅಂದರೆ ಮಾಜಿ ಪ್ರಧಾನಿ ಹಸೀನಾ ಅವರು ಮತ್ತೆ ಬಾಂಗ್ಲಾಗೆ ವಾಪಸ್ ಹೋಗುತ್ತಾರಾ? ಆ ರೀತಿ ವಾಪಸ್ ಹೋಗುವಂತೆ ಮಾಡಲು ಬಾಂಗ್ಲಾದೇಶ ಯಾವೆಲ್ಲಾ ರೀತಿಯಲ್ಲಿ ಒತ್ತಡವನ್ನ ಹಾಕುತ್ತಿದೆ? ಈ ಬಗ್ಗೆ ತಿಳಿಯೋಣ ಬನ್ನಿ.
ವಾಪಸ್ ಕರೆಸಿಕೊಳ್ಳುವ ಚಾಲೆಂಜ್!
ಅಷ್ಟಕ್ಕೂ ಬಾಂಗ್ಲಾದೇಶ ಹಿಂಸಾಚಾರಕ್ಕೆ ಹೆದರಿ ದೇಶಬಿಟ್ಟು ಓಡಿ ಬಂದಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನ ಮತ್ತೆ ಮರಳಿ ದೇಶಕ್ಕೆ ಕರೆಸಿಕೊಳ್ಳಬೇಕು ಎಂದು ಇದೀಗ ಅಲ್ಲಿನ ರಾಜಕಾರಣಿಗಳು ಪಣತೊಟ್ಟಿದ್ದಾರೆ. ಹೀಗಿದ್ದಾಗ, ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯ ಮಂಡಳಿಯಲ್ಲಿ ಬಾಂಗ್ಲಾ ಪರ ವಕಾಲತ್ತು ವಹಿಸುವ ವಕೀಲ ಮೊಹಮ್ಮದ್ ತಾಜುಲ್ ಇಸ್ಲಾಂ ಇದೀಗ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆ ಪ್ರಕಾರ ಶೇಖ್ ಹಸೀನಾ ಅವರನ್ನು ಭಾರತದಿಂದ ವಾಪಸ್ ಕರೆಯಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಸೀನಾ ಜೊತೆ ಬಾಂಗ್ಲಾದೇಶ ಬಿಟ್ಟು ಓಡಿ ಹೋದ ಎಲ್ಲರನ್ನೂ ಕರೆಸಿಕೊಳ್ಳುತ್ತೇವೆ ಎಂದಿದ್ದಾರೆ ಇದೇ ವಕೀಲ ಮೊಹಮ್ಮದ್ ತಾಜುಲ್ ಇಸ್ಲಾಂ. ಹೀಗಾಗಿ ತಿಕ್ಕಾಟ ಕೂಡ ಜೋರಾಗಿದೆ.












Click it and Unblock the Notifications