ಪಾಕಿಸ್ತಾನ ಛಿದ್ರ ಛಿದ್ರವಾಗಿ ಹೋಗುವುದು ಗ್ಯಾರಂಟಿ, ಹೆಂಗೆ ಗೊತ್ತಾ?
ಪಾಪಿ ಪಾಕಿಸ್ತಾನ ತಾನೇ ಮಾಡಿಕೊಂಡ ತಪ್ಪುಗಳಿಂದ ಇವತ್ತು ಈ ಸ್ಥಿತಿಗೆ ಬಂದಿದ್ದು, ಈಗ ನರಳಿ ನರಳಿ ಸಾಯುತ್ತಿದೆ. ಪಾಪಿ ಪಾಕಿಸ್ತಾನದ ರಾಜಕೀಯ ನಾಯಕರ ಹೀನಾಯ ಪರಿಸ್ಥಿತಿ ಕಾರಣಕ್ಕೆ ಪಾಕಿಸ್ತಾನದ ಜನರು ಕೂಡ ಒದ್ದಾಡುತ್ತಿದ್ದಾರೆ. ಪಾಕ್ ಜನರಿಗೆ ಸರಿಯಾಗಿ ಊಟ & ವಸತಿ ಸೌಲಭ್ಯ ಕೂಡ ಸಿಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ ಭಾರಿ ಸ್ಫೋಟಕ ಸುದ್ದಿಯೊಂದು ಪಾಕ್ ಜನರು ಹಾಗೂ ಸರ್ಕಾರದ ನಿದ್ದೆಗೆಡಿಸಿದೆ.
ಭಾರತದ ಶತ್ರು ಪಾಕಿಸ್ತಾನ, ತನ್ನ ಗುಂಡಿ ತಾನೇ ತೋಡಿಕೊಂಡು ಕೂತಿದೆ ಎನ್ನಬಹುದು. ಪಾಕಿಸ್ತಾನದ ಒಳಗೆ ನೂರಾರು ಹುಳುಕು ಇದ್ದು, ಪದೇ ಪದೇ ಆಂತರಿಕ ಯುದ್ಧ ಪರಿಣಾಮ ಪಾಪಿ ಪಾಕಿಸ್ತಾನ ಒದ್ದಾಡಿ ಹೋಗಿದೆ. ಪಾಕಿಸ್ತಾನದ ಅಧ್ಯಕ್ಷರು, ಪ್ರಧಾನಿಗೆ ಸರಿಯಾದ ಭದ್ರತೆ ಇರುವುದಿಲ್ಲ ಎಂಬ ಆರೋಪ ಕೂಡ ಇದೆ. ಅದರಲ್ಲೂ ಪಾಪಿ ಪಾಕಿಸ್ತಾನದ ಈ ಹೀನಾಯ ಪರಿಸ್ಥಿತಿ ಜಾಗತಿಕ ಮಟ್ಟದಲ್ಲಿ ಕೂಡ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಇಂತಹ ಸಮಯದಲ್ಲೇ, ಪಾಕಿಸ್ತಾನ ಛಿದ್ರ ಛಿದ್ರವಾಗಿ ಹೋಗುವುದು ಗ್ಯಾರಂಟಿ ಆಗಿದೆ, ಹೆಂಗೆ ಗೊತ್ತಾ?

ಪಾಕಿಸ್ತಾನ ಛಿದ್ರವಾಗಿ ಹೋಗುವುದು ಗ್ಯಾರಂಟಿ!
ಹೌದು, ಪಾಕಿಸ್ತಾನಕ್ಕೆ ಇದೀಗ ಬಲೂಚಿಸ್ತಾನ ಬಂಡುಕೋರರು ದೊಡ್ಡ ತಲೆನೋವು ತಂದು ಇಟ್ಟಿದ್ದಾರೆ. ಭಾರಿ ದೊಡ್ಡ ಮಟ್ಟದಲ್ಲಿ ಇದೀಗ ಆ ಭಾಗದಲ್ಲಿ ಹಿಂಸಾಚಾರ ನಡೆಯುತ್ತಿದೆ. ಹೀಗಿದ್ದಾಗ ಬಲೂಚಿಸ್ತಾನ ಬಂಡುಕೋರರು ಮತ್ತೊಂದು ಆಘಾತವನ್ನು ಪಾಪಿ ಪಾಕಿಸ್ತಾನದ ರಾಜಕಾರಣಿಗಳಿಗೆ ನೀಡಿದ್ದು, ದಿಢೀರ್ ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಣೆ ಮಾಡಿದ್ದಾರೆ ಬಲೂಚಿಸ್ತಾನ ಬಂಡುಕೋರರು. ಈ ಮೂಲಕ ಭಾರತದ ವಿರುದ್ಧ ಉಗ್ರರನ್ನು ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿದ್ದ ಪಾಕಿಸ್ತಾನಕ್ಕೆ ತನ್ನದೇ ನೆಲದಲ್ಲಿ ಮುಖಭಂಗ ಶುರುವಾಗಿದೆ.












Click it and Unblock the Notifications