ಯಲ್ಲಮ್ಮ ಟ್ಯಾಟೂ ಹಾಕಿಸಿಕೊಂಡ ಪ್ರಕರಣದ ಎರಡು ಮುಖ

ಬೆಂಗಳೂರು, ಅಕ್ಟೋಬರ್. 20: ಕಾಲಿನ ಮೇಲೆ ಹಿಂದೂ ದೇವತೆ ಟ್ಯಾಟೂ ಹಾಕಿಸಿಕೊಂಡ ಮ್ಯಾಥ್ಯೂ ಗೋರ್ಡನ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮ್ಯಾಥ್ಯೂ ಗೋರ್ಡನ್ ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಹಾಕಿರುವ ಅಪ್ ಡೇಟ್ಸ್ ಬೇರೆಯದೇ ಕತೆಯನ್ನು ಹೇಳುತ್ತದೆ.

ಕಾಲಿನ ಮೇಲೆ ಯಲ್ಲಮ್ಮ ದೇವತೆ ಟ್ಯಾಟೂ ಹಾಕಿಸಿಕೊಂಡಿದ್ದ ಮ್ಯಾಥ್ಯೂ ತನ್ನ ಪ್ರಿಯತಮೆ ಜತೆ ಬೆಂಗಳೂರು ರೆಸಿಡೆನ್ಸಿ ರಸ್ತೆಯ ಹೋಟೆಲ್ ವೊಂದಕ್ಕೆ ಭೇಟಿ ನೀಡಿದ್ದ. ಈ ವೇಳೆ ಗೋರ್ಡನ್ ಕಾಲಿನ ಮೇಲೆ ದೇವತೆಯ ಚಿತ್ರ ಗಮನಿಸಿದ ರಮೇಶ್ ಯಾದವ್ ಮತ್ತು ಅವರ ಬೆಂಬಲಿಗರು' ಇದು ಸರಿಯಲ್ಲ, ಕಾಲು ಮುಚ್ಚುವಂತೆ ಬಟ್ಟೆ ಧರಿಸಿ ಓಡಾಡಿ, ಇಲ್ಲ ಕೂಡಲೇ ಇಲ್ಲಿಂದ ತೆರಳಿ, ಗೊಂದಲಕ್ಕೆ ಆಸ್ಪದ ನೀಡಬೇಡಿ ಎಂದು ತಿಳಿಹೇಳಿದ್ದಾರೆ.

bengaluru

ನಂತರ ಹೋಟೇಲ್ ಗೆ ಆಗಮಿಸಿದ ಮತ್ತೊಂದು ತಂಡ ಟ್ಯಾಟೋ ಕಂಡು ವಾಗ್ವಾದಕ್ಕೆ ಇಳಿದಿದೆ. ನಂತರ ಆಸ್ಟ್ರೇಲಿಯಾ ಪ್ರಜೆ ಮತ್ತು ಆತನ ಪ್ರೇಯಸಿಯನ್ನು ಅಶೋಕ ನಗರ ಠಾಣೇಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಗೋರ್ಡನ್ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಆದರೆ ಇದು ಘಟನೆಯ ಒಂದು ಮುಖ ಅಷ್ಟೇ, ಗೋರ್ಡನ್ ಇದೀಗ ಫೇಸ್ ಬುಕ್ ನಲ್ಲಿ ತಮ್ಮದೇ ಆದ ಆರೋಪಗಳನ್ನು ಮುಂದಿಟ್ಟಿದ್ದಾರೆ.[ಯುವತಿ ತೊಡೆ ಮೇಲಿದ್ದ ಟ್ಯಾಟೂ ಕ್ಲಿಕ್ಕಿಸಿದ ಮ್ಯಾನೇಜರ್]

'ನನ್ನಿಂದ ಬಲವಂತವಾಗಿ ಕ್ಷಮಾಪಣೆ ಪತ್ರ ಬರೆಸಿಕೊಳ್ಳಲಾಗಿದೆ. ನನ್ನ ಮೇಲೆ ಹಲ್ಲೆಗೂ ಯತ್ನ ಮಾಡಲಾಗಿದೆ. ಹಿಂದೂ ದೇವತೆಗಳ ಮೇಲೆ ನನಗೆ ಅಪಾರ ಗೌರವವಿದೆ. ಇದಕ್ಕಾಗಿಯೇ 35 ತಾಸುಗಳ ಕಾಲ ಶ್ರಮವಹಿಸಿ ನನ್ನ ಬೆನ್ನಮೇಲೆ ಗಣೇಶನ ಚಿತ್ರ ಹಾಕಿಸಿಕೊಂಡಿದ್ದೇನೆ.

ಪ್ರಕರಣದಲ್ಲಿ ನಾನು ಅಪರಾಧಿಯಲ್ಲ, ನನ್ನ ಗೆಳತಿಯ ಮೇಲೂ ದೌರ್ಜನ್ಯ ಎಸಗಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ನಮ್ಮನ್ನು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಲಾಗಿದ್ದು ಹೋರಾಟಕ್ಕೆ ನಿಮ್ಮ ಬೆಂಬಲ ಕೇಳುತ್ತಿದ್ದೇನೆ' ಎಂದು ಗೋರ್ಡನ್ ಕೇಳಿಕೊಂಡಿದ್ದಾನೆ. ಆದರೆ ಪೊಲೀಸರು ನಾವು ಬಲಾತ್ಕಾರಯುತವಾಗಿ ಕ್ಷಮಾಪಣೆ ಪತ್ರ ಬರೆಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Australian harassed in Bengaluru over tattoo?

ಆಸ್ಟ್ರೇಲಿಯಾ ಪ್ರಜೆ ಫೇಸ್ ಬುಕ್ ಖಾತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+