ಹ್ಯೂಮನ್ ರೈಟರಿಗೆ 3.2 ಕೋಟಿ ಸಂಬಳದ ಆಫರ್ : ಕೆಲಸಕ್ಕೆ ಅರ್ಜಿ ಆಹ್ವಾನಿಸಿದ AI ಕಂಪನಿ

Anthropic Human Writer Job : ಇದು ಎಐ ಯುಗ. ಗಂಟೆಗಳಲ್ಲಿ ಮುಗಿಯುವ ಕೆಲಸವನ್ನು ಎಐ ನಿಮಿಷಗಳಲ್ಲಿ ಮುಗಿಸುತ್ತದೆ. ಇದರಿಂದಾಗಿಯೇ ಅದೆಷ್ಟೋ ಜನರ ಕೆಲಸವನ್ನು ಈ ಎಐ ನುಂಗಿ ಹಾಕಿದೆ. ಆದರೂ AI ಅನ್ನುವುದು ಎಷ್ಟಿದ್ದರೂ ಮೆಷಿನ್. ಅದರ ಸೃಷ್ಟಕರ್ತ ಮನುಷ್ಯನೇ. ಹಾಗಾಗಿ ಅದರ ಕೆಲಸಕ್ಕೆ ಫೈನಲ್ ಟಚ್ ಮನುಷ್ಯನೇ ಕೊಡಬೇಕು. ಎಐ ಮಾಡಿರುವ ಕೆಲಸವನ್ನು ಕಣ್ಣುಮುಚ್ಚಿ ನಂಬುವುದು ಖಂಡಿತಾ ಸಾಧ್ಯವಿಲ್ಲ.

Anthropic Human Writer Job ಅರ್ಜಿ ಆಹ್ವಾನ :

AI ಬರೀ ಸೆಕೆಂಡುಗಳಲ್ಲಿ ದೊಡ್ಡ ದೊಡ್ಡ ಭಾಷಣ, ಆರ್ಟಿಕಲನ್ನು ಬರೆಯಬಹುದು. ಆದರೆ ಅದು ಪರಿಪೂರ್ಣ ಅನ್ನಿಸಿಕೊಳ್ಳಬೇಕಾದರೆ ಅದಕ್ಕೆ ಹ್ಯೂಮನ್ ಟಚ್ ಬೇಕೇ ಬೇಕು. ಪ್ರಮುಖ ಎಐ ಸಂಸ್ಥೆ ಅಂಥ್ರೋಪಿಕ್ ಕೂಡಾ ಇದನ್ನೇ ಹೇಳಿದೆ. ಕಂಪನಿಯು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಫುಲ್ ಟೈಂ ಎಕ್ಸಿಕ್ಯೂಟಿವ್ ಕಮ್ಯುನಿಕೇಷನ್ಸ್ ರೈಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಉತ್ತಮ ಕ್ಯಾಂಡಿಡೇಟಿಗೆ 295,000 ಡಾಲರಿನಿಂದ 345,000 ಡಾಲರ್ ಅಂದರೆ 2.78 ಕೋಟಿಯಿಂದ 3.25 ಕೋಟಿ ವರೆಗೆ ಸಂಬಳ ಎಂದು ಕೂಡಾ ಹೇಳಿದೆ.

Anthropic Human Writer Job Ai company posts adds including on linkedin for human writers for crore of package

ಲಿಂಕ್ಡ್ ಇನ್ ನಲ್ಲಿ ಕೆಲಸದ ಜಾಹೀರಾತು :

ಲಿಂಕ್ಡ್ ಇನ್ ನಲ್ಲಿ ಈ ಉದ್ಯೋಗದ ಜಾಹೀರಾತು ಕೊಡಲಾಗಿದೆ. ಇದರ ಪ್ರಕಾರ, ಕಂಪನಿಯು ಕನಿಷ್ಠ ಎಂಟು ವರ್ಷಗಳ ಅನುಭವವನ್ನು ಹೊಂದಿರುವ ಅಭ್ಯರ್ಥಿಗಳನ್ನು ಈ ಹುದ್ದೆಗೆ ಹುಡುಕುತ್ತಿದೆ. ಟೆಕ್ ಕಾನ್ಸೆಪ್ಟನ್ನು ಸರಿಯಾಗಿ ಮತ್ತು ಬಹಳ ವೇಗವಾಗಿ ಅರ್ಥ ಮಾಡಿಕೊಂಡು ಬದಲಾಗುತ್ತಿರುವ ಬೆಳವಣಿಗೆಗಳ ಜೊತೆಗೆ ತಾಳ್ಮೆಯಿಂದ ಕೆಲಸ ಮಾಡುವ ಮತ್ತು ಹೊಸ ಐಡಿಯಾವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಬಹುದಾದ ಕ್ಯಾಂಡಿಡೇಟನ್ನು ಹುಡುಕುತ್ತಿದೆ.

ಕೆಲಸದ ವಿವರಣೆ:

ಜಾಹೀರಾತಿನಲ್ಲಿ ಈ ಉದ್ಯೋಗದ (jobs) ವಿವರಣೆಯನ್ನು ಕೂಡಾ ನೀಡಲಾಗಿದೆ. ಈ ಹುದ್ದೆಯಲ್ಲಿ ಕೆಲಸ ಮಾಡುವವರು ಹೆಡ್ ಆಫ್ ಎಕ್ಸಿಕ್ಯೂಟಿವ್ ಕಮ್ಯುನಿಕೇಷನ್ಸ್ ಮತ್ತು ಸಂಸ್ಥೆಯ ಬೇರೆ ಬೇರೆ ಹೆಡ್ ಗಳ ಜೊತೆ ಕೆಲಸ ಮಾಡಬೇಕಾಗುತ್ತದೆ. ಹಿರಿಯ ಅಧಿಕಾರಿಗಳ ಆಲೋಚನೆ ಅಥವಾ ಐಡಿಯಾಗೆ ಸೂಕ್ತ ರೂಪ ನೀಡಬಲ್ಲ ಸಾಮರ್ಥ್ಯ ಇರಬೇಕಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಯು ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡಬೇಕಾಗುತ್ತದೆ. ಕಂಟೆಂಟ್ ಬರೆಯುವುದು, ಎಡಿಟ್ ಮಾಡುವುದು, ಹೊಸ ಐಡಿಯಾಗಳ ಚಿಂತನ-ಮಂಥನ, ಈವೆಂಟ್ ಗಳ ಸಮಯದಲ್ಲಿ ಸ್ಥಳದಲ್ಲಿರುವುದು ಮತ್ತು ಬ್ರೇಕಿಂಗ್ ನ್ಯೂಸ್ ಗೆ ಕಂಪನಿಯ ಪ್ರತಿಕ್ರಿಯೆ ಸಂಘಟಿಸಲು ಕಮ್ಯುನಿಕೇಷನ್ ಟೀಂ ಮತ್ತು ಬೇರೆ ಬೇರೆ ಲೀಡ್ ಗಳ ಜೊತೆ ಕೆಲಸ ಮಾಡುವುದು ಹೀಗೆ ಅನೇಕ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ರೆಡಿ ಇರಬೇಕು.

ಟೆಕ್ ಕ್ಷೇತ್ರದಲ್ಲಿ ತುಂಬಾ ಅನುಭವ ಹೊಂದಿರುವವರನ್ನ ಪರಿಣಾಮಕಾರಿಯಾಗಿ ತಲುಪುವ ನಿಟ್ಟಿನಲ್ಲಿ ಟೆಕ್ನಿಕಲ್ ಮಟಿರಿಯಲನ್ನು ತಯಾರಿಸುವ ಜವಾಬ್ದಾರಿಯನ್ನು ಕೂಡಾ ಅಗತ್ಯ ಬಿದ್ದರೆ ತೆಗೆದುಕೊಳ್ಳಬೇಕಾಗುತ್ತದೆ. ಅಂಥ್ರೋಪಿಕಿನಂಥಹ ಅಡ್ವಾನ್ಸ್ಡ್ ಎಐನಂತಹ ಟೆಕ್ನಿಕ್ ಸಂಪೂರ್ಣ ಹೊಸತು ಮತ್ತು ವಿಶೇಷವಾಗಿದೆ. ಆದ್ದರಿಂದ ಈ ಎಐ ಯುಗದಲ್ಲಿ ಎಕ್ಸಿಕ್ಯೂಟಿವ್ ಕಮ್ಯುನಿಕೇಷನ್ಸ್ ನಲ್ಲಿ ಹೊಸ ಆಯಾಮಗಳನ್ನು ಕೊಡುವ ಮತ್ತು ದೂರದೃಷ್ಟಿಯನ್ನು ಇಟ್ಟುಕೊಂಡು ಐಡಿಯಾ ಜಾರಿಗೆ ತರುವ ಅಭ್ಯರ್ಥಿಗಳನ್ನು ಹುಡುಕುತ್ತಿರುವುದಾಗಿ ಕಂಪನಿ ಹೇಳಿದೆ.

ಅಭ್ಯರ್ಥಿಗಳಿಗೆ ವೀಸಾ :

ವೀಸಾಗಳಿಗೆ ಸಂಬಂಧಿಸಿದ ಪ್ರಸ್ತುತ ಅನಿಶ್ಚಿತತೆಗಳಿಂದಾಗಿ, ಕಂಪನಿಯು ಸ್ಪಾನ್ಸರ್ ಮಾಡುತ್ತಿದೆ. ಆದರೆ ಎಲ್ಲಾ ಕ್ಯಾಂಡಿಡೇಟಿಗೂ ವೀಸಾ ( visa) ಸಿಕ್ಕೇ ಸಿಗುತ್ತದೆ ಎನ್ನುವ ಗ್ಯಾರಂಟಿ ನೀಡುವುದಿಲ್ಲ ಎಂದು ಕೂಡಾ ಕಂಪನಿ ಸ್ಪಷ್ಟವಾಗಿ ಹೇಳಿದೆ. ಒಂದು ವೇಳೆ ಅರ್ಜಿ ಹಾಕಿದವರಿಗೆ ಕೆಲಸದ ಆಫರ್ ಸಿಕ್ಕರೆ ಅವರ ವೀಸಾ ಸಿಗುವಂತೆ ನೋಡಿಕೊಳ್ಳುವ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳೀದೆ.

ಈ ಕೆಲಸಕ್ಕೆ ಸೇರಬೇಕಾದರೆ ಇರುವ ಅರ್ಹತೆ :

1.ಎಂಟು ವರ್ಷ ಅಥವಾ ಹೆಚ್ಚಿನ ಅನುಭವ ಇರಬೇಕು.
2.ಉತ್ತಮ ಬರವಣಿಗೆ ಮತ್ತು ಕಮ್ಯುನಿಕೇಷನ್ ಸ್ಕಿಲ್ ಇರಬೇಕು.
3.ತುಂಬಾ ಒತ್ತಡದ ಮತ್ತು ವೇಗವಾಗಿ ಬದಲಾಗುವ ವಾತಾವರಣದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇರಬೇಕು.

ಈ ಹುದ್ದೆಯ ಮುಖ್ಯ ಜವಾಬ್ದಾರಿಗಳು :

1.ಉನ್ನತ ಮಟ್ಟದ ಕ್ಯುನಿಕೇಷನ್ ರೆಡಿ ಮಾಡುವುದು.
2.ಹೊರಗಿನ ಕಮ್ಯುನಿಕೇಷನ್ ಟೀಂ ಮತ್ತು ಇತರ ವಿಷಯ ತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡುವುದು
3.ಟೀಮ್ ವರ್ಕ್ ನೈತಿಕತೆ ಮತ್ತು ಕಾರ್ಯತಂತ್ರ ವಿಧಾನದ ನಡುವೆ ಸಮತೋಲನ ಕಾಪಾಡಿಕೊಳ್ಳುವುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+