ಮ್ಯಾನ್ಮಾರ್‌ನಲ್ಲಿ ಮತ್ತೊಮ್ಮೆ ಕಂಪಿಸಿದ ಭೂಮಿ: ವಿನಾಶದ ಸೂಚನೆ!
ಮ್ಯಾನ್ಮಾರ್‌ನಲ್ಲಿ ಇಂದು ಬೆಳಿಗ್ಗೆ ಮತ್ತೊಮ್ಮೆ ಭೂಮಿ ಕಂಪಿಸಿದೆ. ಮೈಕ್ಟಿಲಾ ಎಂಬ ಸಣ್ಣ ಪಟ್ಟಣದ ಬಳಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ. ಮಾರ್ಚ್ 28 ರಂದು ಮಂಡಲೆದಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದಿಂದ ಮ್ಯಾನ್ಮಾರ್ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಪರಿಹಾರ ಕಾರ್ಯ ಇನ್ನೂ ನಡೆಯುತ್ತಿದೆ. ಈ ನಡುವೆ ಇಂದು ಮತ್ತೆ ಭೂಕಂಪನ ಸಂಭವಿಸಿದ್ದು ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ.
ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೆ ಭೂಕಂಪದ ಕೇಂದ್ರಬಿಂದುವಾಗಿದೆ. ಮಾರ್ಚ್ 28ರಂದು ಸಂಭವಿಸಿದ ಮಂಡಲೆ ಭೂಕಂಪದಿಂದ ಜನ ಇನ್ನೂ ಹೊರಬಂದಿಲ್ಲ. ಇದೀಗ ಇಂದು ಸಂಭವಿಸಿದ ಭೂಕಂಪನಕ್ಕೆ ಜನ ಬೆಚ್ಚಿಬಿದ್ದಾರೆ. ಇದರಿಂದಾಗಿ ಮನೆ, ದೊಡ್ಡ ದೊಡ್ಡ ಕಟ್ಟಡಗಳು ಸೇರಿದಂತೆ ಸರ್ಕಾರಿ ಕಚೇರಿಗಳು ಸಹ ಹಾನಿಗೊಳಗಾಗಿವೆ.

ಭೂಕಂಪದಿಂದ ಗಂಭೀರ ಹಾನಿ ಅಥವಾ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ. ಆದರೆ ಮಾರ್ಚ್‌ನಲ್ಲಿ ಸಂಭವಿಸಿದ ದುರಂತದ ನಂತರ ಸಂಭವಿಸಿದ ನೂರಾರು ಕಂಪನಗಳಲ್ಲಿ ಮಾರ್ಚ್ 28ರಂದು ಸಂಭವಿಸಿದ ಭೂಕಂಪನ ಅತ್ಯಂತ ಶಕ್ತಿಶಾಲಿ ಭೂಕಂಪವಾಗಿದೆ. ಸೇನಾ ವಕ್ತಾರ ಮೇಜರ್ ಜನರಲ್ ಜಾವ್ ಮಿನ್ ತುನ್ ಅವರ ಪ್ರಕಾರ ಆ ಭೂಕಂಪದಲ್ಲಿ ಇದುವರೆಗೆ 3,649 ಜನರು ಪ್ರಾಣ ಕಳೆದುಕೊಂಡಿದ್ದಾರೆ. 5,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮ್ಯಾನ್ಮಾರ್ ಹವಾಮಾನ ಇಲಾಖೆ ಭಾನುವಾರ (13 april) ಭೂಕಂಪನ ಮಂಡಲೆಯಿಂದ ದಕ್ಷಿಣಕ್ಕೆ 97 ಕಿಲೋಮೀಟರ್ (60 ಮೈಲಿ) ದೂರದಲ್ಲಿರುವ ವುಂಡ್ವಿನ್ ಟೌನ್‌ಶಿಪ್ ಪ್ರದೇಶದಲ್ಲಿ 20 ಕಿಲೋಮೀಟರ್ (12 ಮೈಲಿ) ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ತಿಳಿಸಿದೆ. ವುಂಡ್ವಿನ್‌ನ ಇಬ್ಬರು ನಿವಾಸಿಗಳು ಭೂಕಂಪ ತುಂಬಾ ಪ್ರಬಲವಾಗಿದ್ದು, ಜನರು ಕಟ್ಟಡಗಳಿಂದ ಹೊರಗೆ ಓಡಿ ಬಂದರು. ಕೆಲವು ಮನೆಗಳ ಛಾವಣಿಗಳು ಹಾನಿಗೊಳಗಾಗಿವೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಮಾರ್ಚ್ 28 ರಂದು ಸಂಭವಿಸಿದ ಭೂಕಂಪದಿಂದ ಉಂಟಾದ ಹಾನಿಯು ಮ್ಯಾನ್ಮಾರ್‌ನಲ್ಲಿ ಆರ್ಥಿಕ ಸ್ಥಿತಿಯನ್ನು ಹದಗೆಡಿಸುತ್ತದೆ ಎಂದು ವಿಶ್ವಸಂಸ್ಥೆ ಕಳೆದ ವಾರ ಎಚ್ಚರಿಸಿತ್ತು. ಇಲ್ಲಿನ ಅಂತರ್ಯುದ್ಧವು ಈಗಾಗಲೇ 3 ದಶಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ. ಭೂಕಂಪ ಕೃಷಿಗೆ ಅಡ್ಡಿಪಡಿಸಿದೆ. ಭೂಕಂಪದಿಂದ ವೈದ್ಯಕೀಯ ಸೌಲಭ್ಯಗಳು ನಾಶವಾಗಿವೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೂ ಸಾಧ್ಯವಾಗುತ್ತಿಲ್ಲ.












Click it and Unblock the Notifications