ಎವರೆಸ್ಟ್ ಏರಿದ ಆಂಧ್ರದ ಕಿರಿಯ ಸಾಹಸಿ
ಹೈದರಾಬಾದ್, ಮೇ.25: ವಿಶ್ವದ ಅತಿ ಎತ್ತರದ ಪರ್ವತ ಶ್ರೇಣಿಯ ಮೇಲೆ ಕಾಲಿಟ್ಟ ಅತಿ ಕಿರಿಯ ಭಾರತೀಯೆ ಎಂಬ ಸಾಧನೆಗೆ ಆಂಧ್ರಪ್ರದೇಶ ಮೂಲದ ಮಳಾವತ್ ಪೂರ್ಣ ಪಾತ್ರರಾಗಿದ್ದಾರೆ. 13 ವರ್ಷದ ಪೂರ್ಣ ಅವರು ಭಾನುವಾರ ಬೆಳಗ್ಗೆ ತಮ್ಮ ಸಮೀಟ್ ಪೂರ್ಣಗೊಳಿಸಿದ್ದಾರೆ.
ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯ 9ನೇ ತರಗತಿಯ ವಿದ್ಯಾರ್ಥಿನಿ 13 ವರ್ಷ ವಯಸ್ಸಿನ ಪೂರ್ಣ ಹಾಗೂ ಸಾಧನಪಲ್ಲಿ ಆನಂದ್ ಕುಮಾರ್ (16) ಅವರು ಈ ಸಾಧನೆ ಮಾಡಿದ್ದಾರೆ. ಇಬ್ಬರು ಆಂಧ್ರಪ್ರದೇಶ ಸೋಷಿಯಲ್ ವೆಲ್ ಫೇರ್ ಎಜುಕೇಷನ್ ಸೊಸೈಟಿ ಶಾಲೆ ವಿದ್ಯಾರ್ಥಿಗಳಾಗಿದ್ದಾರೆ. ನಿಜಾಮಾಬಾದಿನ ಸಿರಿಕೊಂಡಾ ಮಂಡಲದ ಕಾಳಿವೇರಿ ಗ್ರಾಮದ ದೇವಿದಾಸ್ ಹಾಗೂ ಲಕ್ಷ್ಮಿ ದಂಪತಿ ಪುತ್ರಿ ಪೂರ್ಣ ಜಗತ್ತಿನ ಗಮನ ತಮ್ಮತ್ತ ಸೆಳೆದಿದ್ದಾರೆ.

ಸುಮಾರು 52 ದಿನಗಳ ಕಾಲದ ಎವರೆಸ್ಟ್ ಪರ್ವತಾರೋಹಣ ಪರ್ಯಟನೆಗೆ ಶನಿವಾರ 6 ಗಂಟೆಗೆ ಸಾರ್ಥಕತೆ ಸಿಕ್ಕಿದೆ ಎಂದು ಶಾಲೆ ಪ್ರಕಟಿಸಿದೆ. ಸುಮಾರು 150 ವಿದ್ಯಾರ್ಥಿಗಳನ್ನು ಸಾಹಸ ಕ್ರೀಡೆ, ಪರ್ವತಾರೋಹಣಕ್ಕಾಗಿ ಶಾಲೆ ಆಯ್ಕೆ ಮಾಡಿತ್ತು. ಇವರಲ್ಲಿ 20 ಜನರಿಗೆ ಡಾರ್ಜಲಿಂಗ್ ನಲ್ಲಿ ಪರ್ವತಾರೋಹಣ ತರಬೇತಿ ನೀಡಲಾಗಿತ್ತು. 9 ಜನರಿಗೆ ಇಂಡೋ-ಚೈನಾ ಗಡಿಭಾಗದಲ್ಲಿ ವಿಶೇಷ ತರಬೇತಿ ಸಿಕ್ಕಿತ್ತು. ಇವರಲ್ಲಿ ಆಯ್ಕೆಯಾದ ಪೂರ್ಣ ಹಾಗೂ ಆನಂದ್ ಅವರು ಈಗ ಎವರೆಸ್ಟ್ ತುದಿ ಮುಟ್ಟಿ, ಬೇಸ್ ಕ್ಯಾಂಪಿಗೆ ಹಿಂತಿರುಗುತ್ತಿದ್ದಾರೆ.
ಈ ಹಿಂದಿನ ಕಿರಿಯ ಸಾಧಕರು: 2009ರಲ್ಲಿ 19ನೇ ವಯಸ್ಸಿನ ಮಹಾರಾಷ್ಟ್ರದ ಕೃಷ್ಣಾ ಪಾಟೀಲ್ ಅವರು ಎವರೆಸ್ಟ್ ಹತ್ತಿದ್ದರು. 90ರ ದಶಕದಲ್ಲಿ ಡಿಕ್ಕಿ ದೊಲ್ಮಾ 19ನೇ ವಯಸ್ಸಿನಲ್ಲಿ ಎವರೆಸ್ಟ್ ಹತ್ತಿ ಇಳಿದಿದ್ದರು. ಅರ್ಜುನ್ ವಾಜಪೇಯಿ, ರಾಘವ್ ಜೊನೇಜಾ(15) ಅವರು ಸಾಧನೆ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. (ಪಿಟಿಐ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications