2500 ವರ್ಷದ ಹಿಂದಿನ ಸಂಸ್ಕೃತ ಸಮಸ್ಯೆ ಬಗೆಹರಿಸಿದ ಭಾರತೀಯ ವಿದ್ಯಾರ್ಥಿ
ಲಂಡನ್, ಡಿಸೆಂಬರ್ 16: ಹತ್ತಾರು ಶತಮಾನಗಳಷ್ಟು ಹಳೆಯದಾದ ಹಾಗೂ ಸಾಕಷ್ಟು ವಿದ್ವಾಂಸರಿಂದ ಬಿಡಿಸಲಾಗದ ಸಂಸ್ಕೃತ ವ್ಯಾಕರಣದ ಸಮಸ್ಯೆ ಒಂದನ್ನು ಭಾರತೀಯ ಪಿಎಚ್‌ಡಿ ವಿದ್ಯಾರ್ಥಿಯೊಬ್ಬರು ಬಗೆಹರಿಸಿದ ಅಪರೂಪದಲ್ಲೇ ಅಪರೂಪದ ಪ್ರಸಂಗ ನಡೆದಿದೆ.
ಸಂಸ್ಕೃತವನ್ನು ಸುಮಾರು ಕ್ರಿಸ್ತ ಪೂರ್ವ 5ನೇ ಶತಮಾನದಿಂದಲೂ ಅನೇಕ ವಿದ್ವಾಂಸರನ್ನೇ ದಿಗ್ಬ್ರಮೆಗೊಳಿಸಿದ್ದ 2,500 ವರ್ಷಗಳಷ್ಟು ಹಳೆಯದಾದ ಸಂಸ್ಕೃತ ವ್ಯಾಕರಣದ ಸಮಸ್ಯೆಯೊಂದಿತ್ತು. ಆದರೆ ಸಮಸ್ಯೆ ಈವರೆಗೂ ಬಗೆಹರಿದಿರಲಿಲ್ಲ. ಇದೀಗ ಅದನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಓದುತ್ತಿರುವ ಭಾರತೀಯ ಮೂಲದ ರಿಷಿ ಅತುಲ್ ರಾಜ್ ಪೋಪಟ್ ಅವರು ಬಗೆಹರಿಸಿದ್ದಾರೆ. ಸದ್ಯ ಅತುಲ್ ಅವರು ಕೇಂಬ್ರಿಡ್ಜ್ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಏಷ್ಯನ್ ಮತ್ತು ಮಧ್ಯಪ್ರಾಚ್ಯ ಅಧ್ಯಯನಗಳ ವಿಷಯದ ಮೇಲೆ ಪಿಎಚ್‌ಡಿ ಮಾಡುತ್ತಿದ್ದಾರೆ.
ಎರಡೂವರೆ ಸಾವಿರ ವರ್ಷದ ಹಿಂದೆ ವಾಸಿಸುತ್ತಿದ್ದ ಪ್ರಾಚೀನ ಸಂಸ್ಕೃತ ಭಾಷೆಯ ಪಾಣಿನಿ ಅವರು ಬರೆದಿದ್ದ ಪಠ್ಯವನ್ನು 27 ವರ್ಷದ ಈ ರಿಷಿ ಅತುಲ್ ರಾಜ್ ಪೋಪಟ್ ಅವರು ಡಿಕೋಡ್ ಮಾಡಿದ್ದಾರೆ.ಈ ಕುರಿತು ಬಿಬಿಸಿ ವಾಹಿನಿ ವರದಿ ಪ್ರಕಟಿಸಿದೆ.

ಪಾಣಿನಿಯವರು 'ಮೆಟಾರೋಲ್' ಪಠ್ಯ ಬರೆದು ಕಲಿಸಿದ್ದರು. ಅದನ್ನು ಸಾಮಾನ್ಯವಾಗಿ ವಿದ್ವಾಂಸರು 'ಸಮಾನ ಸಾಮರ್ಥ್ಯದ 2 ನಿಯಮಗಳ ಮಧ್ಯದ ಸಂಘರ್ಷದ ವೇಳೆ ವ್ಯಾಕರಣ ಸರಣಿ ಕ್ರಮದಲ್ಲಿ ನಂತರ ಬರುವ ನಿಯಮ ಗೆಲ್ಲುತ್ತದೆ' ಎಂದು ಅರ್ಥೈಸಿದ್ದರು. ಇದು ವ್ಯಾಕರಣದ ತಪ್ಪು ಫಲಿತಾಂಶಗಳಿಗೆ ಕಾರಣವಾಯಿತು ಎಂದು ಪ್ರತಿಪಾದಿಸಲಾಗಿದೆ.
ಅತುಲ್‌ರ ವ್ಯಾಖ್ಯಾನ ಹೀಗಿದೆ
ಇದನ್ನೆ ಪಿಎಚ್‌ಡಿ ವಿದ್ಯಾರ್ಥಿ ಅತುಷ್ ಅವರು, 'ಮೆಟಾರೋಲ್' ಸಾಮಾನ್ಯ ವ್ಯಾಖ್ಯಾನವನ್ನು ಒಪ್ಪಲಿಲ್ಲ. ಪದದ ಎಡ ಮತ್ತು ಬಲ ಬದಿಗಳಿಗೆ ಸರಣಿಯಾಗಿ ಅನ್ವಯವಾಗುವ ನಿಯಮಗಳ ಮಧ್ಯೆ, ಬಲಭಾಗಕ್ಕೆ ಅನ್ವಯಾಗುವ ನಿಯವನ್ನು ನಾವು ತಿಳಿದುಕೊಳ್ಳಬೇಕು ಎಂದು ಪಾಣಿನಿಯವರು ಬಯಸಿದ್ದರು ಎಂದು ವ್ಯಾಖ್ಯಾನಿಸಿದ್ದಾರೆ.
ನಾನು ಈ ಸಮಸ್ಯೆ ಬಗೆಹರಿಸಲು ಸುಮಾರು ಒಂಬತ್ತು ತಿಂಗಳು ತೆಗೆದುಕೊಳ್ಳಲು ಸಿದ್ದನಿದ್ದೆ. ಆದರೆ ಆ ಪ್ರಯತ್ನ ಸಾಧ್ಯವಾಗಲಿಲ್ಲ. ನಂತರ ಒಂದು ತಿಂಗಳು ರಜೆಯಲ್ಲಿ ಮನರಂಜನೆ, ಇಷ್ಟದ ಚಟುವಟಿಕೆಗಳನ್ನು ಮಾಡಿದೆ. ನಂತರ ಕಲಿಕೆ ಮರಳಿದಾಗ ಪಾಣಿನಿಯವರು ಪಠ್ಯ ಬಿಡಿಸಲು ಮುಂದಾದೆ. ಆಗ ಒಂದೋ ಸಾಲುಗಳು ಬಗೆಹರಿಯುವುದು ಗೊತ್ತಾಯಿತು. ನಿಧಾನವಾಗಿ ಸಮಸ್ಯೆ ಅರ್ಥವಾಯಿತು. ಒಟ್ಟು ಸಮಸ್ಯೆ ಬಗೆಹರಿಯಲು ಎರಡು ವರ್ಷ ಬೇಕಾಯಿತು ಎಂದು ಪಿಎಚ್‌ಡಿ ವಿದ್ಯಾರ್ಥಿ ಅತುಲ್ ಹೇಳಿಕೊಂಡಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications