ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್‌ ಬೆಲೆ ಏರಿಕೆ ನಡುವೆ ಸಾರ್ವಜನಿಕ ಸಾರಿಗೆ ದರ ಅರ್ಧದಷ್ಟು ಕಡಿತ ಮಾಡಿದ ನ್ಯೂಜಿಲೆಂಡ್‌

|
Google Oneindia Kannada News

ವೆಲ್ಲಿಂಗ್ಟನ್‌, ಮಾರ್ಚ್ 14: ಉಕ್ರೇನ್‌ನ ರಷ್ಯಾ ಆಕ್ರಮಣದ ನಂತರ ಇಂಧನ ತೈಲ ಬೆಲೆಗಳು ಗಗನಕ್ಕೇರುತ್ತಿದೆ. ಈ ನಡುವೆ ತೀವ್ರವಾಗಿ ಏರುತ್ತಿರುವ ಪೆಟ್ರೋಲ್ ಬೆಲೆಯ ಹೊರೆಯನ್ನು ಕಡಿಮೆ ಮಾಡಲು ನ್ಯೂಜಿಲೆಂಡ್‌ ಸರ್ಕಾರ ನಿರ್ಧಾರ ಮಾಡಿದೆ. ನ್ಯೂಜಿಲೆಂಡ್ ಸಾರ್ವಜನಿಕ ಸಾರಿಗೆ ದರಗಳನ್ನು ಅರ್ಧದಷ್ಟು ಕಡಿಮೆ ಮಾಡಿದೆ.

ಜೀವನ ವೆಚ್ಚದಲ್ಲಿ ತೀಕ್ಷ್ಣವಾದ ಏರಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇತರ ಬದಲಾವಣೆಗಳ ನಡುವೆ ನ್ಯೂಜಿಲೆಂಡ್‌ ದೇಶವು ಸಾರಿಗೆ ದರವನ್ನು ಶೇಕಡ 50ರಷ್ಟಿ ಕಡಿತಗೊಳಿಸುವುದಾಗಿ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಘೋಷಿಸಿದರು. ಸರ್ಕಾರವು ಪೆಟ್ರೋಲ್ ಅಬಕಾರಿ ಸುಂಕ ಮತ್ತು ರಸ್ತೆ ಬಳಕೆದಾರರ ಶುಲ್ಕವನ್ನು ಲೀಟರ್‌ಗೆ 25 ಸೆಂಟ್‌ ಕಡಿಮೆ ಮಾಡುತ್ತದೆ ಎಂದು ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ತಿಳಿಸಿದ್ದಾರೆ.

ಹಿರೋಶಿಮಾ ಮಾರಣಹೋಮ: ಪರಮಾಣು ಶಸ್ತ್ರಾಸ್ತ್ರಗಳಿಂದ ಆಗುವ ಅನಾಹುತ ಒಂದೆರಡಲ್ಲ!ಹಿರೋಶಿಮಾ ಮಾರಣಹೋಮ: ಪರಮಾಣು ಶಸ್ತ್ರಾಸ್ತ್ರಗಳಿಂದ ಆಗುವ ಅನಾಹುತ ಒಂದೆರಡಲ್ಲ!

ಸೋಮವಾರ ಮಧ್ಯರಾತ್ರಿಯಲ್ಲಿ ಬದಲಾವಣೆಗಳು ಜಾರಿಗೆ ಬರಲಿವೆ. ವಿತ್ತ ಸಚಿವ ಗ್ರಾಂಟ್ ರಾಬರ್ಟ್‌ಸನ್, ಬದಲಾವಣೆಗಳು ಆರಂಭಿಕ ಮೂರು ತಿಂಗಳವರೆಗೆ ಇರುತ್ತದೆ ಮತ್ತು ನಂತರ ಪರಿಶೀಲಿಸಲಾಗುವುದು ಎಂದು ಹೇಳಿದರು. ಪೆಟ್ರೋಲ್‌ ದರ ಇನ್ನೂ ಕೂಡಾ ಏರಿಕೆ ಹೊಂದುವುದು ಎಂದರು.

Amid Russia-Ukraine War New Zealand Halves Public Transport Fares as Petrol Prices Soar

ನ್ಯೂಜಿಲೆಂಡ್ ಕುಟುಂಬಗಳ ಮೇಲೆ ಪರಿಣಾಮ ಕಡಿಮೆ ಮಾಡಲು ಸರ್ಕಾರದ ಕ್ರಮ

"ಜಾಗತಿಕ ಇಂಧನ ಬಿಕ್ಕಟ್ಟು ಶೀಘ್ರವಾಗಿ ತೀವ್ರವಾಗಿದೆ. ನಾವು ಉಕ್ರೇನ್‌ನಲ್ಲಿನ ಯುದ್ಧವನ್ನು ಅಥವಾ ಇಂಧನ ಬೆಲೆಗಳ ನಿರಂತರ ಚಂಚಲತೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಆದರೆ ನ್ಯೂಜಿಲೆಂಡ್ ಕುಟುಂಬಗಳ ಮೇಲೆ ಪರಿಣಾಮವನ್ನು ಕಡಿಮೆ ಮಾಡಲು ನಾವು ಕ್ರಮಗಳನ್ನು ತೆಗೆದುಕೊಳ್ಳಬಹುದು," ಎಂದು ನ್ಯೂಜಿಲೆಂಡ್‌ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಹೇಳಿದರು.

 ಉಕ್ರೇನ್‌ ಯುದ್ಧ: ಚೀನಾದಿಂದ ಮಿಲಿಟರಿ ನೆರವು ಕೋರಿದ ರಷ್ಯಾ! ಉಕ್ರೇನ್‌ ಯುದ್ಧ: ಚೀನಾದಿಂದ ಮಿಲಿಟರಿ ನೆರವು ಕೋರಿದ ರಷ್ಯಾ!

ನ್ಯೂಜಿಲೆಂಡ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ 3 ಎನ್‌ಎಸ್‌ಡಿ (2 ಡಾಲರ್‌) ಆಗಿದೆ. ಇತ್ತೀಚಿನ ವಾರಗಳಲ್ಲಿ ತೀವ್ರವಾಗಿ ಏರುತ್ತಿದೆ. ವರ್ಷದ ಆರಂಭದಿಂದಲೂ ಪೆಟ್ರೋಲ್ ಶೇ.15ರಷ್ಟು ಏರಿಕೆಯಾಗಿದೆ ಮತ್ತು ಇನ್ನೂ ಏರಿಕೆಯಾಗುವ ನಿರೀಕ್ಷೆಯಿದೆ.

"ದೀರ್ಘಾವಧಿಯಲ್ಲಿ ನಾವು ನಮ್ಮ ಸಾರಿಗೆ ವ್ಯವಸ್ಥೆಯಲ್ಲಿ ಹೆಚ್ಚಿನ ಸಮತೋಲವನ್ನು ಕಾಪಾಡಬೇಕಾಗಿದೆ. ಆದ್ದರಿಂದ ನಾವು ಪೆಟ್ರೋಲ್ ಬೆಲೆಯಲ್ಲಿನ ಏರಿಕೆಗೆ ಪರಿಹಾರವನ್ನು ನೀಡಲು ಸರ್ಕಾರ ನಿರ್ಧಾರ ಮಾಡಿದೆ," ಎಂದು ಅರ್ಡೆರ್ನ್ ಹೇಳಿದರು. "ಆದರೆ ಸದ್ಯಕ್ಕೆ ಸಾರ್ವಜನಿಕ ಸಾರಿಗೆ ವೆಚ್ಚವನ್ನು ಅರ್ಧದಷ್ಟು ಕಡಿಮೆ ಮಾಡುವುದು ಕೆಲವು ಕುಟುಂಬಗಳಿಗೆ ಪರಿಹಾರವನ್ನು ನೀಡಬಹುದು," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ. ಇನ್ನು ಪೆಟ್ರೋಲ್‌, ಡೀಸೆಲ್‌ ದರವು ಇನ್ನೂ ಕೂಡಾ ಏರಿಕೆ ಆಗಬಹುದು ಎಂದು ಕೂಡಾ ಸರ್ಕಾರ ಹೇಳಿದೆ.

ಇನ್ನೂ ಏರಿಕೆ ಆಗಲಿದೆ ಪೆಟ್ರೋಲ್‌ ದರ

"ಪೆಟ್ರೋಲ್ ಬೆಲೆಗಳು ಹೆಚ್ಚಾಗುವ ನಿರೀಕ್ಷೆಯಿದೆ. ಉಕ್ರೇನ್‌ನ ರಷ್ಯಾದ ಆಕ್ರಮಣವು ಜಾಗತಿಕ ಇಂಧನ ಮಾರುಕಟ್ಟೆಗಳನ್ನು ದುರ್ಬಲಗೊಳಿಸುತ್ತಿದೆ. ಕೊರೊನಾದಿಂದಾಗಿ ಆರ್ಥಿಕತೆಗೆ ಆದ ಹೊಡೆತ ಬಳಿಕ ಈಗ ಈ ಯುದ್ಧವು ಹಣದುಬ್ಬರವನ್ನು ಹೆಚ್ಚಿಸುತ್ತಿದೆ," ಎಂದು ನ್ಯೂಜಿಲೆಂಡ್‌ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಹೇಳಿದರು.

ಉಕ್ರೇನ್‌ ಹಾಗೂ ರಷ್ಯಾದ ನಡುವಿನ ಯುದ್ಧವು ಹಲವಾರು ದೇಶಗಳ ಮೇಲೆ ಪರಿಣಾಮವನ್ನು ಉಂಟು ಮಾಡಿದೆ. ರಷ್ಯಾವು ಉಕ್ರೇನ್‌ ವಿರುದ್ಧ ಯುದ್ಧವನ್ನು ಘೋಷಣೆ ಮಾಡಿ, ದಾಳಿ ನಡೆಸಿದ ಬಳಿಕ ಜಾಗತಿಕವಾಗಿ ಕಚ್ಚಾ ತೈಲದ ದರವು ತೀವ್ರ ಮಟ್ಟಕ್ಕೆ ಏರಿಕೆ ಆಗಿದೆ. ಈ ವರ್ಷ ನ್ಯೂಜಿಲೆಂಡ್‌ನಲ್ಲಿ ಹಣದುಬ್ಬರವು ಶೇಕಡ 7ಕ್ಕಿಂತ ಹೆಚ್ಚಾಗಬಹುದೆಂದು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಾರೆ. ಇನ್ನು ಉಕ್ರೇನ್‌ ಮೇಲೆ ದಾಳಿ ಮಾಡಿದ ರಷ್ಯಾದ ಮೇಲೆ ಹಲವಾರು ದೇಶಗಳು ನಿರ್ಬಂಧವನ್ನು ಹೇರಿದೆ. ಮಾಸ್ಕೋ ಪಾಶ್ಚಿಮಾತ್ಯ ಕಂಪನಿಗಳಿಗೆ ನಿರ್ಬಂಧದ ಬೆದರಿಕೆ ಹಾಕಿದೆ.

ಈ ನಡುವೆ ಉಕ್ರೇನ್‌ ಹಾಗೂ ರಷ್ಯಾದ ನಡುವೆ ಶಾಂತಿ ಮಾತುಕತೆ ಮುಂದುವರಿದಿದೆ. ವೀಡಿಯೊ ಕಾನ್ಫರೆನ್ಸ್‌ಗಳ ಸ್ವರೂಪದಲ್ಲಿ ಮತ್ತೆ ಮಾತುಕತೆಗಳು ತಡೆರಹಿತವಾಗಿ ನಡೆಯುತ್ತವೆ. ಕಾರ್ಯನಿರತ ಗುಂಪುಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಸಮಸ್ಯೆಗಳ ಬಗ್ಗೆ ನಿರಂತರ ಗಮನ ಬೇಕು. ಸೋಮವಾರ, ಮಾರ್ಚ್ 14 ರಂದು, ಪ್ರಾಥಮಿಕ ಫಲಿತಾಂಶಗಳನ್ನು ಒಟ್ಟುಗೂಡಿಸಲು ಸಮಾಲೋಚನಾ ಅಧಿವೇಶನ ನಡೆಯಲಿದೆ ಎಂದು ಉಕ್ರೇನ್ ಹೇಳಿದೆ. (ಒನ್‌ಇಂಡಿಯಾ ಸುದ್ದಿ)

English summary
Ukraine-Russia War: Amid Russia-Ukraine war New Zealand halves public transport fares as petrol prices soar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X