ನೊಬೆಲ್ ಶಾಂತಿ ಪ್ರಶಸ್ತಿ ಬೇಕೆ ಬೇಕು ಅಂತಾ ಹಠ ಹಿಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್! Donald Trump
ಡೊನಾಲ್ಡ್ ಟ್ರಂಪ್ ಅವರಿಗೆ ಈಗ ಕನಸಲ್ಲೂ, ಮನಸ್ಸಲ್ಲೂ ಬರೀ ಒಂದೇ ಆಲೋಚನೆ ಶುರುವಾಗಿದೆ... ಭಾರತ & ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ ಅಂತಾ ಬಿಲ್ಡಪ್ ಕೊಡುವ ಟ್ರಂಪ್ ಇದೇ ರೀತಿಯಾಗಿ ಇನ್ನೂ ಅನೇಕ ಯುದ್ಧಗಳು ನನ್ನಿಂದಾಗಿ ನಿಂತಿವೆ ಅಂತಾ ಓಳು ಬಿಡ್ತಿದ್ದಾರೆ ಅನ್ನೋ ಆರೋಪವೂ ಇದೆ. ಆದರೆ ಇದೆಲ್ಲಾ ನನ್ನ ವಿರೋಧಿಗಳು ಮಾಡುತ್ತಿರುವ ಕೆಲಸ ಅಂತಾ ಟ್ರಂಪ್ ತಿರುಗೇಟು ಕೊಟ್ಟು ಸುಮ್ಮನಾಗುತ್ತಿದ್ದಾರೆ. ಇಷ್ಟೆಲ್ಲಾ ಇದ್ದಾಗಲೇ ನೊಬೆಲ್ ಶಾಂತಿ ಪ್ರಶಸ್ತಿ ಬೇಕೆ ಬೇಕು ಅಂತಾ ಹಠ ಹಿಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಡಿದಿದ್ದೇ ಹಠ, ತಾನು ಮಾಡಿದ್ದೇ ಸರಿ ಅಂತಾನೂ ಡೊನಾಲ್ಡ್ ಟ್ರಂಪ್ ಆಗಾಗ ಹೇಳುತ್ತಾ ಇರುವುದು ವೈರಲ್ ಆಗುತ್ತದೆ. ಹೀಗೆ ಡೊನಾಲ್ಡ್ ಟ್ರಂಪ್ ಆಗಾಗ ವೈರಲ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ಕೂಡ ಹವಾ ಎಬ್ಬಿಸುತ್ತಾರೆ. ಮತ್ತೊಂದು ಕಡೆ ಟ್ರಂಪ್ ಹೀಗೆ ಮಾಡಿಕೊಳ್ಳುವ ಎಡವಟ್ಟುಗಳು ಅಮೆರಿಕದ ಭವಿಷ್ಯಕ್ಕೆ ಹಾನಿ ಮಾಡುತ್ತಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಲೇ ಇದೆ. ಆದರೆ ಇದಕ್ಕೆಲ್ಲಾ ಕೇರ್ ಮಾಡದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹಠ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ನೊಬೆಲ್ ಶಾಂತಿ ಪ್ರಶಸ್ತಿ ಬೇಕೆ ಬೇಕು ಅಂತಾ ಹಠ ಹಿಡಿದ್ದಾರೆ ಟ್ರಂಪ್!

ನೊಬೆಲ್ ಶಾಂತಿ ಪ್ರಶಸ್ತಿ ಬೇಕು...
ಹೌದು, ಇದೀಗ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ಯುದ್ಧದ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಬಾಂಬ್ ಸಿಡಿಸಿದ್ದಾರೆ. ಪದೇ, ಪದೇ ಭಾರತ & ಪಾಕಿಸ್ತಾನ ನಡುವೆ ನಡೆದ ಯುದ್ಧ ನಿಲ್ಲಿಸಿದ್ದು ನಾನೇ ಅಂತಾ ಹೇಳುವ ಡೊನಾಲ್ಡ್ ಟ್ರಂಪ್ ಈಗ ಮತ್ತೊಮ್ಮೆ ಅದನ್ನೇ ಹೇಳಿದ್ದಾರೆ. ಭಾರತ & ಪಾಕಿಸ್ತಾನ ಸೇನಾ ಸಂಘರ್ಷ ನಾನೇ ನಿಲ್ಲಿಸಿದ್ದು ಅಂತಾ ಹೇಳಿರುವ ಟ್ರಂಪ್, ಈವರೆಗೂ ಒಟ್ಟಾರೆ 7 ಯುದ್ಧಗಳನ್ನ ನಾನು ನಿಲ್ಲಿಸಿದ್ದೇನೆ. ಈ ಕಾರಣಕ್ಕೆ ನನಗೆ, ನೊಬೆಲ್ ಶಾಂತಿ ಪ್ರಶಸ್ತಿ ಸಿಗಲೇಬೇಕು ಎಂದಿದ್ದಾರೆ. ಹೀಗೆ ಟ್ರಂಪ್ ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಈ ಸಮಯದಲ್ಲೇ ಎಚ್1ಬಿ ವೀಸಾ ಬಗ್ಗೆ ಟ್ರಂಪ್ ಸರ್ಕಾರದಿಂದ ಮಹತ್ವದ ಮಾಹಿತಿ ಸಿಕ್ಕಿದೆ.
ವೀಸಾ ಇದ್ದವರಿಗೆ ಇಲ್ಲ ಟೆನ್ಷನ್!
ಹೌದು, ಈಗ ಟ್ರಂಪ್ ಆಡಳಿತದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಎಚ್1ಬಿ ವೀಸಾ ಮೇಲೆ ಭರ್ಜರಿ 1,00,000 ಯುಎಸ್ ಡಾಲರ್ ಹೇರಿಕೆ ಮಾಡಿರುವುದು ಹೊಸ ವೀಸಾಗಳಿಗೆ ಮಾತ್ರ. ಆದರೆ ಈಗಾಗಲೇ ತೆಗೆದುಕೊಂಡ ವೀಸಾಗಳಿಗೆ ಇದು ಅನ್ವಯ ಆಗಲ್ಲ ಎಂದು ತಿಳಿಸಲಾಗಿದೆ. ಈ ಮೂಲಕ ಲಕ್ಷ ಲಕ್ಷ ಭಾರತೀಯರಿಗೆ ಈಗ ಭರ್ಜರಿ ಸುದ್ದಿ ಸಿಕ್ಕಂತೆ ಆಗಿದ್ದು, ಈಗಾಗಲೇ ಸುಮಾರು ಅರ್ಧ ಕೋಟಿಗೂ ಹೆಚ್ಚು ಭಾರತೀಯರು ಅಮೆರಿಕದಲ್ಲಿ ಜೀವನ ಕಂಡುಕೊಂಡಿದ್ದಾರೆ. ಹೀಗಾಗಿ ಟ್ರಂಪ್ ಸರ್ಕಾರದಿಂದ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ? ಅನ್ನೋದು ಭಾರಿ ಕುತೂಹಲ ಕೆರಳಿಸಿತ್ತು.












Click it and Unblock the Notifications