US election: ಅಮೆರಿಕ ಚುನಾವಣೆ ಯಾರೇ ಗೆದ್ದರೂ ಹೊಸ ಇತಿಹಾಸ ಸೃಷ್ಟಿ, ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ!

ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಈ ಬಾರಿ ನಿರೀಕ್ಷೆಗೂ ಮೀರಿ ಸದ್ದು ಮಾಡ್ತಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಎನ್ನುವುದು ಗಜಗರ್ಭ ಅಂತಲೇ ಕರೆಯಲಾಗುತ್ತದೆ. ಸುದೀರ್ಘ ಪ್ರಕ್ರಿಯೆ ಇದೆ.

ಇನ್ನು ಮತ ಎಣಿಕೆಗೂ ಸಹ ತಿಂಗಳುಗಳ ಕಾಲ ಸಮಯ ಹಿಡಿಸಿರುವುದು ಇದೆ. ಆದರೆ, ಈ ಬಾರಿ ಬೇರೆ ಕಾರಣಗಳಿಗೆ ಅಮೆರಿಕ ಚುನಾವಣೆ ಭಾರೀ ಸದ್ದು ಮಾಡ್ತಿದೆ. 2024ನೇ ಸಾಲಿನ ಅಮೆರಿಕ ಚುನಾವಣೆಯಲ್ಲಿ ಯಾರೇ ಗೆದ್ದರೂ ಈ ಬಾರಿ ಇತಿಹಾಸ ಸೃಷ್ಟಿಯಾಗಲಿದೆ.

American election a new history will be created here is the interesting info

ಹೊಸ ದಾಖಲೆ ಸೃಷ್ಟಿ: ಯುಎಸ್‌ ಎಲೆಕ್ಷನ್‌ನಲ್ಲಿ ಈ ಸಲ ಯಾರೇ ಗೆದ್ದರೂ ಹೊಸದೊಂದು ದಾಖಲೆ ಸೃಷ್ಟಿಯಾಗುವುದು ಪಕ್ಕಾ. ಟ್ರಂಪ್‌ ಅವರಿಗೆ ಇದು ಮೂರನೇ ಅಧ್ಯಕ್ಷೀಯ ಚುನಾವಣೆ. ಹಲವು ವಿವಾದ ಹಾಗೂ ಆರೋಪಗಳು ಟ್ರಂಪ್ ಮೇಲೆ ಇದೆ.

ಅಷ್ಟೇ ಅಲ್ಲ ಟ್ರಂಪ್‌ ಎರಡು ಬಾರಿ ಅಲ್ಲಿನ ಸಂಸತ್ತಿನಿಂದ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಅಮೆರಿಕದಲ್ಲಿ ಕಳೆದ ಬಾರಿ ಅಧ್ಯಕ್ಷೀಯ ಚುನಾವಣೆಗೆ ಅವರು ಸ್ಪರ್ಧೆ ಮಾಡಿದ್ದರು. ಆದರೆ, ಸೋಲು ಕಂಡಿದ್ದರು ಈ ವೇಳೆ ಭಾರೀ ಅನಾಹುತವೇ ಸಂಭವಿಸಿತ್ತು. ಇನ್ನು ಕಮಲಾ ಹ್ಯಾರಿಸ್ ಅವರು ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ, ಶ್ವೇತಭವನವನ್ನು (ವೈಟ್‌ ಹೌಸ್‌) ಪ್ರವೇಶಿಸುವ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ಗಳಿಸಲಿದ್ದಾರೆ.

American election a new history will be created here is the interesting info

ಮೇಕ್ ಅಮೆರಿಕ ಗ್ರೇಟ್‌ ಸದ್ದು

ಅಮೆರಿಕ ಚುನಾವಣೆಯಲ್ಲಿ ಈ ಬಾರಿ let's make america great again ಎನ್ನುವ ಸದ್ದು ಜೋರಾಗಿದೆ. ಯಾಕೆಂದರೆ ಇದು ಟ್ರಂಪ್‌ ಅಬ್ಬರ. ಹೌದು ಈ ಬಾರಿ ಡೊನಾಲ್ಡ್‌ ಟ್ರಂಪ್‌ ಕಳೆದ ಎರಡು ಬಾರಿಗಿಂತಲೂ ಹೆಚ್ಚು ಆಕ್ರಮಣಶೀಲರಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಚುನಾವಣಾ ಪ್ರಚಾರ ಸಭೆಗಳು, ರ್ಯಾಲಿಗಳಲ್ಲಿ ಎದುರಾಳಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಮತ್ತೆ ಗ್ರೇಟ್‌ ಅಮೆರಿಕ ಮಾಡೋಣ ಎಂದು ಟ್ರಂಪ್ ಅವರು ಈ ಬಾರಿ ಪ್ರಚಾರ ಮಾಡಿದ್ದಾರೆ. ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅವಧಿಯಲ್ಲಿ ಅಮೆರಿಕ ತನ್ನ ವರ್ಚಸ್ಸು ಕಳೆದುಕೊಂಡಿದೆ. ಹೀಗಾಗಿ, ನಾವು ಹಳೆಯ ವರ್ಚಸ್ಸು ಮರಳಿ ತರಬೇಕು ಎಂದು ಚುನಾವಣೆ ಪ್ರಚಾರಗಳಲ್ಲಿ ಟ್ರಂಪ್ ಹೇಳಿದ್ದಾರೆ. let's make america great again ಎನ್ನುವುದು ಈ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್‌ ಆಗಿರುವ ಸ್ಲೋಗನ್‌ಗಳಲ್ಲಿ ಒಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+