ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಿಂದ WHOಗೆ ಪ್ರಶ್ನೆಗಳ ಸರಮಾಲೆ: ಕಾಸು ಕೊಡದಿರಲು ಕಾರಣ?

|
Google Oneindia Kannada News

ವಾಶಿಂಗ್ ಟನ್, ಏಪ್ರಿಲ್.16: ಕೊರೊನಾ ವೈರಸ್ ಹರಡುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ನೀಡುತ್ತಿದ್ದ ಆರ್ಥಿಕ ನೆರವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಡೆ ಹಿಡಿದಿದ್ದಾರೆ.

ಚೀನಾದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಮೃದು ಧೋರಣೆ ತೋರುತ್ತಿದ್ದು ಮಾರಕ ಸೋಂಕು ಹರಡಲು ಕಾರಣವಾಗಿರುವ ದೇಶದ ಬಗ್ಗೆ ಕಠಿಣ ನಿಲುವು ತೆಳೆಯುತ್ತಿಲ್ಲ ಎಂದು ಡೊನೊಲ್ಡ್ ಟ್ರಂಪ್ ಗಂಭೀರ ಆರೋಪ ಮಾಡಿದ್ದರು.

ಕೊರೊನಾ ವೈರಸ್ ಹಾಗೂ ಬಾವಲಿಗಳ ರೂಪಾಂತರಕ್ಕೂ ಏನಿದು ನಂಟು? ಕೊರೊನಾ ವೈರಸ್ ಹಾಗೂ ಬಾವಲಿಗಳ ರೂಪಾಂತರಕ್ಕೂ ಏನಿದು ನಂಟು?

ಅಮೆರಿಕಾ ಅಧ್ಯಕ್ಷರ ಬೆನ್ನಲ್ಲೇ ಇದೀಗ ಸೆನೆಟ್ ಸದಸ್ಯರು WHO ನಿಲುವನ್ನು ಪ್ರಶ್ನೆ ಮಾಡಿದ್ದಾರೆ. ಕೊರೊನಾ ವೈರಸ್ ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಫಲವಾಗಿದ್ದು, ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದಾರೆ.

WHO ಕೊರೊನಾ ನಿಯಂತ್ರಿಸುವಲ್ಲಿ ವಿಫಲ

WHO ಕೊರೊನಾ ನಿಯಂತ್ರಿಸುವಲ್ಲಿ ವಿಫಲ

ವಿಶ್ವವನ್ನೇ ವ್ಯಾಪಿಸಿರುವ ಕೊರೊನಾ ವೈರಸ್ ನಿರ್ವಹಣೆಯಲ್ಲಿ WHO ಸೋತಿದೆ. ಇದರ ಪರಿಣಾಮದಿಂದ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆಯಲ್ಲಿ ಶೇ.20ರಷ್ಟು ಏರಿಕೆಯಾಗಿದೆ. ಚೀನಾದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಟ್ರಂಪ್, ಕೊರೊನಾ ವೈರಸ್ ಹರಡುತ್ತಿರುವ ಸಂದರ್ಭದಲ್ಲಿ WHO ಕೆಲವು ದೇಶಗಳನ್ನು ಪ್ರಶ್ನೆ ಮಾಡುತ್ತಿಲ್ಲ ಎಂದು ದೂಷಿಸಿದ್ದಾರೆ.

WHOಗೆ ಚೀನಾದಿಂದ ಅತಿಹೆಚ್ಚು ಆರ್ಥಿಕ ಸಹಾಯ

WHOಗೆ ಚೀನಾದಿಂದ ಅತಿಹೆಚ್ಚು ಆರ್ಥಿಕ ಸಹಾಯ

ವಿಶ್ವ ಆರೋಗ್ಯ ಸಂಸ್ಥೆಗೆ ಆರ್ಥಿಕ ನೆರವು ನೀಡುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕಾ ಅಗ್ರಸ್ಥಾನದಲ್ಲಿದೆ. ಕಳೆದ 2018-19ನೇ ಸಾಲಿನಲ್ಲಿ 400 ಬಿಲಿಯನ್ ಡಾಲರ್ ಆರ್ಥಿಕ ನೆರವನ್ನು ಅಮೆರಿಕಾ WHOಗೆ ನೀಡಿದೆ. ಎರಡನೇ ಸ್ಥಾನದಲ್ಲಿ ಇರುವ ಚೀನಾ ಕಳೆದ ಆರ್ಥಿಕ ಸಾಲಿನಲ್ಲಿ WHOಗೆ 650 ಕೋಟಿ ಆರ್ಥಿಕ ನೆರವು ನೀಡಿದೆ.

#LifeAfterCorona: ಪಲ್ಲಟಗಳನ್ನು ಗಮನಿಸಬೇಕು- ಬಿ. ಸುರೇಶ#LifeAfterCorona: ಪಲ್ಲಟಗಳನ್ನು ಗಮನಿಸಬೇಕು- ಬಿ. ಸುರೇಶ

ಮನುಷ್ಯರಿಂದ ಮನುಷ್ಯರಿಗೆ ಕೊರೊನಾ ಹರಡುವುದಿಲ್ಲ!

ಮನುಷ್ಯರಿಂದ ಮನುಷ್ಯರಿಗೆ ಕೊರೊನಾ ಹರಡುವುದಿಲ್ಲ!

ಚೀನಾದ ವುಹಾನ್ ನಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಕುರಿತು ಸ್ವತಃ WHO ಸುಳ್ಳು ಮಾಹಿತಿಯನ್ನು ಹೇಳಿತು. ಚೀನಾ ಆರೋಗ್ಯ ಸಂಸ್ಥೆಯು ನೀಡಿದ ಹೇಳಿಕೆಯನ್ನು ನೆಚ್ಚಿಕೊಂಡು ವಿಶ್ವದ ಎದುರಿಗೆ ಜನವರಿ.14, 2020ರಂದು ಕೊರೊನಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸೋಂಕು ಅಲ್ಲ ಎಂದು ಸುಳ್ಳು ಹೇಳಿತು. ಹೀಗಾಗಿ ಇಂಥದೊಂದು ಆರೋಗ್ಯ ತುರ್ತು ಪರಿಸ್ಥಿತಿ ವಿಶ್ವದಲ್ಲಿ ಸೃಷ್ಟಿಯಾಯಿತು ಎನ್ನುವುದು ಅಮೆರಿಕಾ ವಾದವಾಗಿದೆ.

WHO ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ

WHO ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ

ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಹರಡುತ್ತಿರುವ ಪ್ರಾಥಮಿಕ ಹಂತದಲ್ಲಿಯೇ WHO ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್, ಕೊರೊನಾ ನಿಯಂತ್ರಿಸಬೇಕಾದ ಸಂದರ್ಭದಲ್ಲಿ ಚೀನಾವನ್ನು ಬೆಂಬಲಿಸುತ್ತಾ ನಿಂತರು ಎಂದು ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಆರೋಪಿಸುತ್ತಿವೆ.

WHO ಮುಖ್ಯಸ್ಥರಿಂದ ಚೀನಾಗೆ ಶಹಬ್ಬಾಶ್ ಗಿರಿ

WHO ಮುಖ್ಯಸ್ಥರಿಂದ ಚೀನಾಗೆ ಶಹಬ್ಬಾಶ್ ಗಿರಿ

ಕೊರೊನಾ ವೈರಸ್ ಆತಂಕದ ಹಿನ್ನೆಲೆ ಜನವರಿಯಲ್ಲಿ WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ಚೀನಾಗೆ ಭೇಟಿ ನೀಡಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ ಚರ್ಚೆ ನಡೆಸಿದ್ದರು. ದೇಶದಲ್ಲಿ ಸೋಂಕು ಹರಡಿರಲು ಚೀನಾ ಕೈಗೊಂಡ ನಿರ್ಧಾರಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಅದಾಗಿ 45 ದಿನಗಳಲ್ಲೇ ವಿಶ್ವದಲ್ಲಿ ಕೊರೊನಾ ವೈರಸ್ ನಿಂದ 1 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಅಮೆರಿಕಾ ದೂಷಿಸಿದೆ.

WHO ಮುಖ್ಯಸ್ಥರು ತೀರಿಸುತ್ತಿದ್ದಾರಾ ಚೀನಾ ಋಣ?

WHO ಮುಖ್ಯಸ್ಥರು ತೀರಿಸುತ್ತಿದ್ದಾರಾ ಚೀನಾ ಋಣ?

ಕೊರೊನಾ ಹರಡುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ಚೀನಾದ ಋಣ ತೀರಿಸುತ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. 2017 ಜುಲೈನಲ್ಲಿ ನಡೆದ ಚುನಾವಣೆಯಲ್ಲಿ WHO ಮುಖ್ಯಸ್ಥ ಸ್ಥಾನಕ್ಕೆ ಪೂರ್ವ ಆಫ್ರಿಕಾದ ಎಥಿಯೋಪಿಯಾ ಮೂಲದ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ಹೆಸರನ್ನು ಚೀನಾ ಶಿಫಾರಸ್ಸು ಮಾಡಿತ್ತು. ಅಂದು ಹಲವು ರಾಷ್ಟ್ರಗಳು ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ಅವರನ್ನು ಬೆಂಬಲಿಸುವಂತೆ ಚೀನಾ ನೋಡಿಕೊಂಡಿತ್ತು. ಇದರಿಂದ ಅತಿಹೆಚ್ಚು ಮತಗಳಿಂದ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ WHO ಮುಖ್ಯಸ್ಥ ಸ್ಥಾನಕ್ಕೆ ಏರಿದರು. ಅಂದು ಚೀನಾ ಮಾಡಿರುವ ಸಹಾಯಕ್ಕೆ WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ಈಗ ಋಣ ತೀರಿಸುತ್ತಿದ್ದಾರಾ ಎಂದು ಅಮೆರಿಕಾ ಶಂಕೆ ವ್ಯಕ್ತಪಡಿಸಿದೆ.

ಹೆಚ್ಚುವರಿ ನೆರವು ನೀಡುವಂತೆ ಕೇಳಿದ ವಿಶ್ವ ಆರೋಗ್ಯ ಸಂಸ್ಥೆ

ಹೆಚ್ಚುವರಿ ನೆರವು ನೀಡುವಂತೆ ಕೇಳಿದ ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಣ ಹಾಗೂ ನಿರ್ವಹಣೆ ನಡುವೆ ಆರ್ಥಿಕ ಸಂಕಷ್ಟ ಎದುರಾಗಿದೆ. ವೈದ್ಯಕೀಯ ಮೂಲಸೌಕರ್ಯಗಳನ್ನು ಒದಗಿಸಲು ಈಗಿರುವ ಹಣವು ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ 7,500 ಕೋಟಿ ಹೆಚ್ಚುವರಿ ನೆರವು ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಅಂತಾರಾಷ್ಟ್ರೀಯ ಒಕ್ಕೂಟದ ಮುಂದೆ ಮನವಿ ಮಾಡಿಕೊಂಡಿದೆ.

ಅಮೆರಿಕಾ ಸೆನೆಟ್ ಸದಸ್ಯರಿಂದ WHO ಮುಖ್ಯಸ್ಥರಿಗೆ ಪತ್ರ

ಅಮೆರಿಕಾ ಸೆನೆಟ್ ಸದಸ್ಯರಿಂದ WHO ಮುಖ್ಯಸ್ಥರಿಗೆ ಪತ್ರ

WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿರುವ ಬೆನ್ನಲ್ಲೇ ಸೆನೆಟ್ ಸದಸ್ಯರು ಕೂಡಾ ಗಂಭೀರ ಆರೋಪ ಮಾಡುತ್ತಿದ್ದಾರೆ. ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ರಿಗೆ ಪತ್ರ ಬರೆದಿರುವ ಸೆನೆಟ್ ಸದಸ್ಯರು, WHO ನಿಲುವನ್ನು ಪ್ರಶ್ನಿಸಿದ್ದಾರೆ. ಅಮೆರಿಕಾ ಸೆನೆಟ್ ಸದಸ್ಯರು ಬರೆದ ಪತ್ರದ ಒಂದು ಪ್ರತಿಯನ್ನು ವಿಶ್ವಸಂಸ್ಥೆಯ ಮುಖ್ಯಸ್ಥರಿಗೂ ಕಳುಹಿಸಲಾಗಿದೆ.

ಅಮೆರಿಕಾ ಸೆನೆಟ್ ಸದಸ್ಯರಿಂದ WHO ಮುಖ್ಯಸ್ಥರಿಗೆ 6 ಪ್ರಶ್ನೆ:

ಅಮೆರಿಕಾ ಸೆನೆಟ್ ಸದಸ್ಯರಿಂದ WHO ಮುಖ್ಯಸ್ಥರಿಗೆ 6 ಪ್ರಶ್ನೆ:

1. ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ನಿಟ್ಟಿನಲ್ಲಿ WHO ಕಾರ್ಯಕ್ರಮಗಳೇನು?

2. ಕೊರೊನಾ ವೈರಸ್ ಪಿಡುಗು ನಿರ್ವಹಣೆಗೆ WHO ರೂಪಿಸಿರುವ ಮಾನದಂಡಗಳೇನು?

3. ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ಹರಡಿರುವ ಬಗ್ಗೆ WHO ಯಾವಾಗ ತಿಳಿಸಿತು

4. WHO ತಂಡವು ಯಾವಾಗ ಚೀನಾಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕನ ನಡೆಸಿತು

5. ಕೊರೊನಾ ವೈರಸ್ ನಿಂದ ಸೃಷ್ಟಿಯಾಗಿರುವ ತುರ್ತು ಪರಿಸ್ಥಿತಿಯ ಮೇಲೆ WHO ಯಾವ ಮುಖ್ಯಸ್ಥರು ನಿಗಾ ವಹಿಸಿದ್ದಾರೆ. ಹಾಗೂ ಈ ಕುರಿತು ಚೀನಾ ಸರ್ಕಾರದ ಜೊತೆಗೆ ಯಾವ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

6. ವಿಶ್ವ ಆರೋಗ್ಯ ಸಂಸ್ಥೆ ಸಿಬ್ಬಂದಿಗೆ ಸಂಬಳ ಹೊರತುಪಡಿಸಿದಂತೆ ಉಳಿದ ಯಾವೆಲ್ಲ ಮೂಲಗಳಿಂದ ಆದಾಯವು ಬರುತ್ತದೆ.

ಈ ಹಿಂದೆ ಸಾಕಷ್ಟು ಪಿಡುಗುಗಳನ್ನು ನಿರ್ವಹಿಸಿದ್ದ WHO

ಈ ಹಿಂದೆ ಸಾಕಷ್ಟು ಪಿಡುಗುಗಳನ್ನು ನಿರ್ವಹಿಸಿದ್ದ WHO

ಏಳು ದಶಕಗಳ ಹಿಂದೆ ಹುಟ್ಟಿಕೊಂಡ ವಿಶ್ವ ಆರೋಗ್ಯ ಸಂಸ್ಥೆ(WHO)ಯು ಈ ಹಿಂದೆ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಸಾಂಕ್ರಾಮಿಕ ರೋಗ ಹಾಗೂ ಸಾಂಕ್ರಾಮಿಕ ಪಿಡುಗಗಳ ನಿರ್ವಹಣೆ ಮತ್ತು ನಿಯಂತ್ರಣವನ್ನು ಸಮರ್ಥವಾಗಿ ನಿಭಾಯಿಸಿತ್ತು.

English summary
Coronavirus. And Write A Letter To Dr.Tedros Adhanom Ghebreyesus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X