ಪಾಕಿಸ್ತಾನದ ಹೆಗಲ ಮೇಲೆ ಅಮೇರಿಕಾದ ಬಂದೂಕು! ಪಾಕ್‌ಗೆ ಉಭಯ ಸಂಕಟ
ಅಮೇರಿಕಾ: ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಹೆಗಲ ಮೇಲೆ ಬಂದೂಕು ಇರಿಸಿದ್ದಾರೆ. ಭಾರತದ ವಿರುದ್ಧ ನಡೆದ ಯುದ್ಧ ಸೇರಿದಂತೆ ಹಲವು ಸಂಕಷ್ಟದ ಸಂದರ್ಭದಲ್ಲಿ ಅಮೇರಿಕಾ - ಚೀನಾದ ಬಳಿ ಸಹಾಯ ಪಡೆದುಕೊಳ್ಳುತ್ತಿರುವ ಪಾಕಿಸ್ತಾನಕ್ಕೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ಒತ್ತಡವು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಅಮೇರಿಕಾದ ಸಹಾಯದಿಂದ ಭಾರೀ ಲಾಭವನ್ನು ಪಡೆದುಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಪಾಕಿಸ್ತಾನಕ್ಕೆ ಇದೀಗ ಮುಸ್ಲಿಂ ರಾಷ್ಟ್ರಗಳನ್ನು ಎದುರು ಹಾಕಿಕೊಳ್ಳುವ ಆತಂಕ ಶುರುವಾಗಿದೆ. ಏನಿದು ಪಾಕಿಸ್ತಾನಕ್ಕೆ ಅಮೇರಿಕಾ ಕೊಟ್ಟಿರುವ ಟಾಸ್ಕ್ ಎನ್ನುವ ವಿವರ ನೋಡೋಣ.
ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಅಮೇರಿಕಾದ ನಡುವಿನ ಸಂಬಂಧ ಹೇಳಿಕೊಳ್ಳುವಂತೆ ಇಲ್ಲ. ಭಾರತದ ಮೇಲೆ ನಿರಂತರವಾಗಿ ಕತ್ತಿ ಮಸಿಯುತ್ತಿರುವ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಒಂದಿಲ್ಲೊಂದು ಸಂಕಷ್ಟವನ್ನು ತಂದೊಡ್ಡುತ್ತಲ್ಲೇ ಇದ್ದಾರೆ. ಟ್ರಂಪ್ ಭಾರತದ ವಿವಿಧ ವಸ್ತುಗಳ ಮೇಲೆ ಈಗಾಗಲೇ ದುಬಾರಿ ಸುಂಕವನ್ನು ವಿಧಿಸಿದ್ದು, ಭಾರತ ಇನ್ನೂ ಚೇತರಿಸಿಕೊಳ್ಳುತ್ತಿದೆ. ಅಲ್ಲದೇ ಅಕ್ಕಿಯ ಮೇಲೂ ಟ್ರಂಪ್ ಕಣ್ಣು ಬಿದ್ದಾಗಿದೆ. ಭಾರತದ ವಿರುದ್ಧ ಕುತಂತ್ರ ರೂಪಿಸುವಲ್ಲಿ ಅಥವಾ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನವನ್ನು ಅಮೇರಿಕಾ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ ಅಮೇರಿಕಾ ಕೊಟ್ಟಿರುವ ಹೊಸ ಟಾಸ್ಕ್‌ನಿಂದ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿದೆ. ಗಾಜಾದ ಸಹಜ ಸ್ಥಿತಿಗೆ ಸ್ಥಾಪಿಸಲಾಗಿರುವ ವಿಭಾಗಕ್ಕೆ ಸೇನೆ ಕಳುಹಿಸುವಂತೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒತ್ತಡ ರೂಪಿಸುತ್ತಿದ್ದು, ಪಾಕ್ ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ಏನು ಮಾಡುವುದು ಎಂದು ತೋಚದಂತಾಗಿದೆ.
ಪಾಕಿಸ್ತಾನ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ಟ್ರಂಪ್ ಅವರು ಈ ಒತ್ತಡಕ್ಕೆ ಮುಖ್ಯ ಕಾರಣ ಈಚೆಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು, "ಶಾಂತಿಪಾಲನೆಗಾಗಿ ಸೇನೆ ಕಳುಹಿಸುವುದನ್ನು ಪರಿಗಣಿಸಲಾಗುವುದು" ಎಂದಿದ್ದರು. ಇದನ್ನೇ ಟ್ರಂಪ್ ಈಗ ಉಪಯೋಗಿಸಿಕೊಳ್ಳಲು ಮುಂದಾಗಿದ್ದಾರೆ.
ಇದೀಗ ಗಾಜಾಗೆ ಪಾಕಿಸ್ತಾನದ ಸೇನೆಯನ್ನು ಕಳುಹಿಸಿದರೆ ಪಾಕಿಸ್ತಾನದಲ್ಲಿ ದೇಶೀಯ ಭದ್ರತೆಗೆ ಕೊರತೆ ಎದುರಾಗುವ ಸಾಧ್ಯತೆ ಇದೆ. ಅಲ್ಲದೇ ಕೆಲವು ಮುಸ್ಲಿಂ ರಾಷ್ಟ್ರಗಳು ಅಮೇರಿಕಾದ ವಿರುದ್ಧವಾಗಿದ್ದು ಆ ರಾಷ್ಟ್ರಗಳ ಮುನಿಸಿಗೆ ತುತ್ತಾಗಬೇಕಾಗುತ್ತದೆ. ಅಮೇರಿಕಾದ ಅಧ್ಯಕ್ಷರಿಗೆ ಇದೆಲ್ಲಾ ಆಗಲ್ಲ ಎಂದು ಹೇಳಿದರೆ, ಅಮೇರಿಕಾದಿಂದ ಸಿಗುತ್ತಿರುವ ಆರ್ಥಿಕ ಸಹಾಯ ಕೈತಪ್ಪುವ ಸಾಧ್ಯತೆಯೂ ಇದೆ. ಹೀಗಾಗಿ, ಮುನೀರ್ ಅಮೇರಿಕಾಗೆ ದೌಡಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಸ್ಲಿಂ ರಾಷ್ಟ್ರಗಳಿಗೆ ಮನವಿ: ಟ್ರಂಪ್ ಅವರ 20 ಅಂಶಗಳ ಗಾಜಾ ಯೋಜನೆಯಡಿ ಎರಡು ವರ್ಷಗಳ ಕಾಲ ಇಸ್ರೇಲ್ ಮಿಲಿಟರಿ ಬಾಂಬ್ ದಾಳಿಯಿಂದ ನಾಶವಾದ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿ ಪುನರ್ ನಿರ್ಮಾಣ ಹಾಗೂ ಆರ್ಥಿಕ ಚೇತರಿಕೆಗಾಗಿ ಪರಿವರ್ತನೆಗಾಗಿ ಮುಸ್ಲಿಂ ರಾಷ್ಟ್ರಗಳಿಗೆ ಮನವಿ ಮಾಡಲಾಗುತ್ತಿದೆ. ಆದರೆ ಈ ವಿಚಾರದಲ್ಲಿ ಪರ - ವಿರೋಧ ಅಭಿಪ್ರಾಯವೂ ಇದೆ.












Click it and Unblock the Notifications