ರೊಚ್ಚಿಗೆದ್ದ ರಷ್ಯಾ, ಅಮೆರಿಕದ ಮೇಲೆ ಪರಮಾಣು ದಾಳಿ ಗ್ಯಾರಂಟಿ?
ರಷ್ಯಾ ರೊಚ್ಚಿಗೆದ್ದು ಏನೇನೋ ಮಾಡಲು ಮುಂದಾಗಿದ್ದು, ಅಮೆರಿಕ & ಪಾಶ್ಚಿಮಾತ್ಯ ಒಕ್ಕೂಟಕ್ಕೆ ಬುದ್ಧಿ ಕಲಿಸಲು ತನ್ನಲ್ಲಿ ಇರುವ ಪರಮಾಣು ಬಾಂಬ್‌ಗಳನ್ನ ಹೊರಗೆ ತೆಗೆಯುತ್ತಿದೆ. ಹೀಗಿದ್ದಾಗ ಅಮೆರಿಕ & ನ್ಯಾಟೋ ಒಕ್ಕೂಟ ಕೂಡ ಅಲರ್ಟ್ ಆಗಿದ್ದು, ಭೀಕರ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ ಮುಂದೆ ಓದಿ.
ಉಕ್ರೇನ್ & ರಷ್ಯಾ ಯುದ್ಧದಲ್ಲಿ ಅಮೆರಿಕ ಸುಖಾಸುಮ್ಮನೆ ತಲೆ ಹಾಕುತ್ತಿದೆ ಅಂತಾ ಆರೋಪಿಸಿ ರಷ್ಯಾ ರೊಚ್ಚಿಗೆದ್ದಿದೆ. ಅದರಲ್ಲೂ ಕೆಲವು ದಿನಗಳ ಹಿಂದೆ ಅಮೆರಿಕ ತನ್ನಲ್ಲಿರುವ ಶಸ್ತ್ರಾಸ್ತ್ರಗಳ ಬಳಸಿ ರಷ್ಯಾ ಮೇಲೆ ದಾಳಿ ಮಾಡಲು ಸೂಚನೆ ನೀಡಿತ್ತು. ಅದಕ್ಕೂ ಮೊದಲು ಅಮೆರಿಕ ಕೊಟ್ಟ ವೆಪನ್ಸ್ ಬಳಸಿ ರಷ್ಯಾ ಮೇಲೆ ಉಕ್ರೇನ್ ದಾಳಿ ಮಾಡುವಂತೆ ಇಲ್ಲ, ಆದರೆ ತನ್ನ ರಕ್ಷಣೆಗೆ ಇದರ ಬಳಕೆ ಮಾಡಬಹುದು ಎಂದು ನಿಯಮ ವಿಧಿಸಿತ್ತು. ಆದರೆ ದಿಢೀರ್ ಆ ನಿಯಮ ಕೂಡ ಕಿತ್ತು ಹಾಕಿದ ಅಮೆರಿಕ ನಾಯಕರು ರಷ್ಯಾ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇ ಕಾರಣಕ್ಕೆ 'ದೊಡ್ಡಣ್ಣ' ಎಂಬ ಬಿರುದು ಪಡೆದ ಅಮೆರಿಕದ ಪಕ್ಕದಲ್ಲೇ ಇರುವ, ಕ್ಯೂಬಾ ದೇಶಕ್ಕೆ ರಷ್ಯಾ ತನ್ನ ಪರಮಾಣು ಸಾಮರ್ಥ್ಯದ ಸಬ್‌ಮರೀನ್ ಕಳುಹಿಸಿದೆ.

3ನೇ ಮಹಾಯುದ್ಧ ಫಿಕ್ಸ್?
ಅಮೆರಿಕ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ ಅಂತಿದ್ದಾರೆ ತಜ್ಞರು. ಯಾಕೆ ಅಂದ್ರೆ ಈಗಿನ ಪರಿಸ್ಥಿತಿ ನೋಡಿದರೆ ಅಮೆರಿಕದ ವಿರುದ್ಧ ರಷ್ಯಾ ಯುದ್ಧ ಮಾಡುವುದು ಗ್ಯಾರಂಟಿ. ಈ ರೀತಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ತಲೆಕೆಟ್ಟ ನಿರ್ಧಾರ ಕೈಗೊಂಡು ರಷ್ಯಾ ರೊಚ್ಚಿಗೇಳುವ ರೀತಿ ಮಾಡಿದ್ದು, ಮುಂದಿನ ದಿನಗಳಲ್ಲಿ ಅಮೆರಿಕ & ರಷ್ಯಾ ನಡುವೆ ನೇರವಾಗಿ ಯುದ್ಧ ಶುರು ಆಗುವ ಮುನ್ಸೂಚನೆ ಇದೆ. ಅಕಸ್ಮಾತ್ ಹೀಗೆ ಆಗಿದ್ದೇ ಆದರೆ ಪರಿಸ್ಥಿತಿ ಮತ್ತಷ್ಟು ಕೈಮೀರಲಿದೆ ಎಂಬುದು ತಜ್ಞರ ಅಭಿಪ್ರಾಯ. ಅಲ್ಲದೆ 3ನೇ ಮಹಾಯುದ್ಧ ಫಿಕ್ಸ್? ಎಂಬ ಭಯ ಕೂಡ ಕಾಡ್ತಿದೆ.
ನ್ಯೂಕ್ಲಿಯರ್ ಬಾಂಬ್ ಹಾಕೋದು ಗ್ಯಾರಂಟಿ?
ಅಮೆರಿಕ ವಿರುದ್ಧ ಹೀಗೆ ರಷ್ಯಾ ರೊಚ್ಚಿಗೇಳಲು ಕಾರಣ ಉಕ್ರೇನ್‌ಗೆ ಮಾಡಿರುವ ಸಹಾಯ ಈಗಾಗಲೇ ದೊಡ್ಡ ಮೊತ್ತದ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ ಅಮೆರಿಕ, ಉಕ್ರೇನ್‌ಗೆ ಲಕ್ಷ ಲಕ್ಷ ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ನೀಡಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರ ಕೂಡ ಅಮೆರಿಕ ರವಾನಿಸುತ್ತಿದ್ದು ಇದು ರಷ್ಯಾ ಸೇನೆ & ರಷ್ಯಾ ಅಧ್ಯಕ್ಷರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಈ ಎಲ್ಲಾ ಬೆಳವಣಿಗೆ ಈಗ ಅಮೆರಿಕ & ರಷ್ಯಾ ಮಧ್ಯೆ ಬೆಂಕಿ ಹೊತ್ತಿಸಿದೆ. ಅಲ್ಲದೆ, ಯಾವುದೇ ಕ್ಷಣದಲ್ಲಿ ರಷ್ಯಾ ಸೇನೆ ಈಗ ಪರಮಾಣು ಅಸ್ತ್ರಗಳನ್ನ ಬಳಕೆ ಮಾಡುವ ಭಯ ಆವರಿಸಿದೆ.












Click it and Unblock the Notifications