• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಸ್ನೇಹಿತ ಭಾರತಕ್ಕೆ ಬೇರೆ ಕಡೆಯಿಂದ ತೈಲ ಕೊಡಿಸ್ತೀವಿ: ಅಮೆರಿಕ

|

ನ್ಯೂಯಾರ್ಕ್, ಸೆಪ್ಟೆಂಬರ್ 29: ಇರಾನ್ ಮೇಲೆ ಅಮೆರಿಕದ ಕಠಿಣ ನಿರ್ಬಂಧಗಳು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ಹೆಚ್ಚಿನ ಪ್ರಮಾಣದ ತೈಲಕ್ಕಾಗಿ ಇರಾನ್‌ಅನ್ನು ಅವಲಂಬಿಸಿರುವ ಭಾರತಕ್ಕೆ ಪರ್ಯಾಯ ಪೂರೈಕೆ ಮಾರ್ಗಗಳನ್ನು ಒದಗಿಸುವುದಾಗಿ ಅಮೆರಿಕ ಹೇಳಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

'ಭಾರತಕ್ಕೆ ಹೆಚ್ಚಿನ ಪ್ರಮಾಣದ ತೈಲ ಆಮದು ಅಗತ್ಯ ಇರುವುದನ್ನು ವಾಷಿಂಗ್ಟನ್ ಗಮನಿಸಿದೆ. ಇದಕ್ಕಾಗಿ ಪರ್ಯಾಯ ತೈಲ ಪೂರೈಕೆ ಕ್ರಮಗಳ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಹೀಗಾಗಿ ನಮ್ಮ ಸ್ನೇಹಿತ ಭಾರತದ ಆರ್ಥಿಕತೆಗೆ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ' ಎಂದು ಟ್ರಂಪ್ ಆಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವೆಂಬರ್ ನಿಂದ ಇರಾನ್ ತೈಲ ಭಾರತ ಖರೀದಿಸಲ್ಲ, ದುಬಾರಿಗೆ ದಾರಿಯೇ?

2015ರಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ್ದ ಅಮೆರಿಕ, ಅದು ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ಮತ್ತೆ ನಿರ್ಬಂಧ ವಿಧಿಸಿತ್ತು.

ನಿರ್ಬಂಧದ ಮೊದಲ ಹಂತ ಈಗಾಗಲೇ ಜಾರಿಯಲ್ಲಿದ್ದು, ಅದು ನವೆಂಬರ್ 4ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ. ಈ ಅವಧಿಯಲ್ಲಿ ಭಾರತ ಸೇರಿದಂತೆ ಎಲ್ಲ ದೇಶಗಳೂ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಿವೆ ಎಂದು ಅಮೆರಿಕ ನಿರೀಕ್ಷಿಸಿದೆ.

ಇರಾನ್‌ನಿಂದ ತೈಲ ಆಮದು ಹೆಚ್ಚಿಸಿದ ಭಾರತ

ಇರಾನ್ ಜತೆ ಯಾವುದೇ ರೀತಿಯ ವ್ಯವಹಾರ ಮುಂದುವರಿಸುವ ಯಾವುದೇ ದೇಶವು ತನ್ನ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯೊಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುವುದು ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಇರಾನ್‌ನ ಅತಿ ದೊಡ್ಡ ತೈಲ ಆಮದುದಾರರಲ್ಲಿ ಒಂದಾದ ಭಾರತ, ಈಗಾಗಲೇ ಆಮದು ಪ್ರಮಾಣವನ್ನು ಕಡಿಮೆಗೊಳಿಸಿದೆ.

ಅಮೆರಿಕದ ನಿರ್ಬಂಧದ ನಡುವೆಯೂ ಇರಾನ್‌ನಿಂದ ತೈಲ ಆಮದು ವ್ಯವಹಾರ ಮುಂದುವರಿಸಿರುವುದರಿಂದ ಭಾರತದ ಮೇಲೆಯೂ ಅಮೆರಿಕ ಕೆಲವು ನಿರ್ಬಂಧ ಹೇರಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಈಗಾಗಲೇ ಅಮೆರಿಕ ಚೀನಾ ಸರ್ಕಾರದ ಸಂಸ್ಥೆಯೊಂದರ ಮೇಲೆ ನಿರ್ಬಂಧಗಳನ್ನು ವಿಧಿಸಿದೆ.

ನಿರ್ಬಂಧ ವಿಧಿಸುವ ಮುನ್ನ ಯೋಚಿಸಿ: ಅಮೆರಿಕಕ್ಕೆ ಭಾರತದ ಖಡಕ್ ಸೂಚನೆ

ಇರಾನ್ ಮೇಲಿನ ನಿರ್ಬಂಧಗಳನ್ನು ಜಾರಿಗೊಳಿಸಲು ತನ್ನ ಎಲ್ಲ ಸ್ನೇಹಿತರು ಮತ್ತು ಪಾಲುದಾರರನ್ನು ಅಮೆರಿಕ ಸಂಪರ್ಕಿಸಿ ಮಾತುಕತೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಖಾಸಗಿ ವಲಯದ ಸಂಸ್ಥೆಗಳು ಕಚ್ಚಾ ತೈಲದ ಹೊಸ ಪೂರೈಕೆದಾರರನ್ನು ಹುಡುಕುತ್ತಿವೆ. ಅಲ್ಲದೆ, ನಿರ್ಬಂಧ ಜಾರಿಗೊಳಿಸುವಿಕೆ ಕುರಿತು ಭಾರತ ಮತ್ತು ಅಮೆರಿಕದ ತಜ್ಞರ ನಡುವಣ ಮಾತುಕತೆಗಳು ಮುಂದುವರಿದಿವೆ ಎಂದು ಹೇಳಿದ್ದಾರೆ.

ಅಮೆರಿಕಕ್ಕೆ ಸಡ್ಡು ಹೊಡೆದು ಸ್ವದೇಶಿ ಯುದ್ಧ ವಿಮಾನ ನಿರ್ಮಿಸಿದ ಇರಾನ್

2016ರ ಮೇನಲ್ಲಿ ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನಗಳು ಮೂರು ದೇಶಗಳ ಸರಕು ಹಾಗೂ ಪ್ರಯಾಣಿಕರ ಸಾರಿಗೆಗೆ ಅನುಕೂಲವಾಗುವುದರ ಜತೆಗೆ, ಚಬಹಾರ್ ಬಂದರನ್ನು ಕೇಂದ್ರವಾಗಿಟ್ಟುಕೊಂಡು ವ್ಯವಹಾರ ಮತ್ತು ಸಂಚಾರ ಕಾರಿಡಾರ್ ನಡೆಸುವ ಒಪ್ಪಂದಕ್ಕೆ ಸಹಿಹಾಕಿದ್ದವು.

English summary
America assured that it will explore alternative supplies of the fuel rather than Iran, so our friend India's economy is not adversely affected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X