ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀತ ವಾತಾವರಣಕ್ಕೆ ಬರೋಬ್ಬರಿ 2 ಲಕ್ಷ ಜೀವಹಾನಿ

ಅಫ್ಘಾನಿಸ್ತಾನದಲ್ಲಿ ಶೀತ ಅಲೆಯು ಮಾರಣಾಂತಿಕವಾಗಿ ಪರಿಣಮಿಸುವುದನ್ನು ಮುಂದುವರೆಸಿದ್ದು, ಕಳೆದ ಎರಡು ವಾರಗಳಲ್ಲಿ ದೇಶದಲ್ಲಿ ಒಟ್ಟಾಗಿ 200,000ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ.

|
Google Oneindia Kannada News

ಕಾಬೂಲ್‌, ಜನವರಿ 28: ಅಫ್ಘಾನಿಸ್ತಾನದಲ್ಲಿ ಶೀತ ಅಲೆಯು ಮಾರಣಾಂತಿಕವಾಗಿ ಪರಿಣಮಿಸುವುದನ್ನು ಮುಂದುವರೆಸಿದೆ. ಕಳೆದ ಎರಡು ವಾರಗಳಲ್ಲಿ ದೇಶದಲ್ಲಿ ಒಟ್ಟಾಗಿ 200,000ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ ಮತ್ತು ಮಾನವರು ಜೀವಗಳನ್ನು ಕಳೆದುಕೊಂಡಿದ್ದಾರೆ ಎಂದು ಅಫ್ಘಾನ್ ಸುದ್ದಿ ಸಂಸ್ಥೆ ಟೊಲೊ ನ್ಯೂಸ್‌ ವರದಿ ಮಾಡಿದೆ.

ತಾಲಿಬಾನ್ ನೇತೃತ್ವದ ಕೃಷಿ, ನೀರಾವರಿ ಮತ್ತು ಜಾನುವಾರುಗಳ ಸಚಿವಾಲಯದ ಪ್ರಕಾರ, ಅಫ್ಘಾನಿಸ್ಥಾನದ ಉತ್ತರ ಪ್ರಾಂತ್ಯಗಳಾದ ಬಾಲ್ಖ್, ಜವ್ಜಾನ್ ಮತ್ತು ಪಂಜ್ಶಿರ್‌ನಲ್ಲಿ ಹೆಚ್ಚಾಗಿ ಜಾನುಗಳು ಸಾವನ್ನಪ್ಪಿದೆ ಎಂದು ತಿಳಿಸಿದೆ. ಶೀತದ ವಾತಾವರಣ ಮತ್ತು ಹುಲ್ಲಿನ ಕೊರತೆಯು ತಮ್ಮ ಜಾನುವಾರುಗಳಿಗೆ ಕಂಟಕವಾಗಿ ಪರಿಣಮಿಸಿದೆ ಎಂದು ಕೆಲವು ರೈತರು ಹೇಳಿಕೊಂಡಿದ್ದರು. ಈ ನಿಟ್ಟಿನಲ್ಲಿ ತಾಲಿಬಾನ್‌ನಿಂದ ಸಹಾಯವನ್ನು ಕೋರಿದ್ದರು ಎಂದು ವರದಿಗಳು ತಿಳಿಸಿವೆ.

ತಾಲಿಬಾನ್ ಕ್ರೌರ್ಯ: ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿನಿಯರು ದೂರ ದೂರ!ತಾಲಿಬಾನ್ ಕ್ರೌರ್ಯ: ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿನಿಯರು ದೂರ ದೂರ!

ನಮ್ಮಲ್ಲಿ 60 ಕುರಿಗಳಿದ್ದು, ಚಳಿ ಹಾಗೂ ಹುಲ್ಲಿನ ಕೊರತೆಯಿಂದ 30 ಕುರಿಗಳನ್ನು ಕಳೆದುಕೊಂಡಿದ್ದೇವೆ ಎಂದು ಸ್ಥಳೀಯ ರೈತ ಮೊಹಮ್ಮದ್ ನಯೀಮ್ ಅಳಲು ತೋಸಿಕೊಂಡಿದ್ದಾರೆ. ಚಳಿಗಾಲದಲ್ಲಿ ತಣ್ಣನೆಯ ವಾತಾವರಣದಿಂದ 60 ಜಾನುವಾರುಗಳನ್ನು ಕಳೆದುಕೊಂಡಿದ್ದೇವೆ. ನಮ್ಮಲ್ಲಿ ಆಹಾರ ಸಾಮಗ್ರಿಗಳು ಮತ್ತು ಸರಿಯಾದ ವ್ಯವಸ್ಥೆಗಳಿಲ್ಲ ಎಂದು ಮತ್ತೊಬ್ಬ ರೈತ ಮೊಹಮ್ಮದ್ ಷರೀಫ್ ಹೇಳಿದ್ದಾರೆ.

Almost 2 lakh livestok die in Afghanistan due to cold weather

ಕಳಪೆ ಜೀವನ ಪರಿಸ್ಥಿತಿಗಳ ಮಧ್ಯೆ, ಕಾಬೂಲ್‌ನ ಸ್ಥಳೀಯರು ಅತ್ಯಧಿಕ ಚಳಿಯ ನಡುವೆ ದೀರ್ಘಕಾಲದ ವಿದ್ಯುತ್ ಕಡಿತದ ಬಗ್ಗೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸ್ಥಗಿತದಿಂದಾಗಿ ಜನರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಅವರು ಈ ವಿಷಯವನ್ನು ಪರಿಹರಿಸಲು ಅಧಿಕಾರಿಗಳಿಗೆ ಒತ್ತಾಯಿಸುತ್ತಾರೆ. ನಿತ್ಯ ನಾಲ್ಕೈದು ತಾಸು ವಿದ್ಯುತ್ ಪೂರೈಕೆಯಾಗುತ್ತಿದ್ದು, ಅದು ಸಾಕಾಗುತ್ತಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಮಾತು.

ದೇಶದ ಆರ್ಥಿಕ ಬಿಕ್ಕಟ್ಟನ್ನು ಹೆಚ್ಚಿಸಿರುವ ತೀವ್ರವಾದ ಶೀತ ಪರಿಸ್ಥಿತಿಗಳ ಮಧ್ಯೆ ಕೇವಲ ಒಂದು ವಾರದಲ್ಲಿ ಅಫ್ಘಾನಿಸ್ತಾನದಲ್ಲಿ ಹಲವಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ತತ್ತರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ, ಅಫ್ಘಾನಿಸ್ತಾನದಲ್ಲಿ 2023ರಲ್ಲಿ ಅಂದಾಜು 875,000 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆಹಾರ ಕಾರ್ಯಕ್ರಮವು ಹೇಳಿದೆ.

Breaking: ಕಾಬೂಲ್‌ನ ಚೀನಾ ಅತಿಥಿ ಗೃಹದ ಬಳಿ ಬಾಂಬ್ ಸ್ಫೋಟBreaking: ಕಾಬೂಲ್‌ನ ಚೀನಾ ಅತಿಥಿ ಗೃಹದ ಬಳಿ ಬಾಂಬ್ ಸ್ಫೋಟ

ವಿಶ್ವ ಆಹಾರ ಕಾರ್ಯಕ್ರಮದ ವರದಿಯು 2.3 ಮಿಲಿಯನ್ ಮಕ್ಕಳು ಮತ್ತು 840,000 ಮಹಿಳೆಯರು ಮಧ್ಯಮ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ.

English summary
The cold wave continues to turn deadly in Afghanistan. Together, over 200,000 livestock and human lives have been lost in the country in the past two weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X