ರಷ್ಯಾ ವಿರುದ್ಧದ ಸೇಡಿಗೆ ಉಕ್ರೇನ್ ಮಾಡುತ್ತಿರುವುದು ಏನು?
ರಷ್ಯಾ & ಉಕ್ರೇನ್ ಆಧುನಿಕ ಜಗತ್ತಿಗೆ ಒಂದು ಗತಿ ಕಾಣಿಸುವುದು ಬಹುತೇಕ ಗ್ಯಾರಂಟಿ ಅಂತಾ ಹೇಳಬಹುದು. ಯಾಕಂದ್ರೆ ಇಬ್ಬರ ನಡುವೆ ಆ ರೀತಿಯ ಕಿತ್ತಾಟ & ತಿಕ್ಕಾಟಗಳು ನಡೆಯುತ್ತಿವೆ. ಕಳೆದ 2 ವರ್ಷಗಳಿಂದ ನಿರಂತರವಾಗಿ ಉಕ್ರೇನ್ ಮೇಲೆ ರಷ್ಯಾ ಅಟ್ಯಾಕ್ ಮಾಡುತ್ತಿದ್ದು, ಅದಕ್ಕೆ ರಿವೇಂಜ್ ತೆಗೆದುಕೊಳ್ಳಲು ಈಗ ಉಕ್ರೇನ್ ಕೂಡ ಕುತಂತ್ರವನ್ನ ಹೆಣೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ರಷ್ಯಾ ಈಗ ಉಕ್ರೇನ್ ವಿರುದ್ಧ ಯಾವ ರೀತಿ ದಾಳಿ ಮಾಡುತ್ತಿದೆ ಅಂದ್ರೆ, ಇನ್ನು ಕೆಲವೇ ತಿಂಗಳಲ್ಲಿ ಇಡೀ ಉಕ್ರೇನ್ ಭೂ ಭಾಗ ರಷ್ಯಾ ಸೇನೆ ವಶಕ್ಕೆ ಸಿಕ್ಕರೂ ಅಚ್ಚರಿ ಬೇಕಿಲ್ಲ. ಆ ರೀತಿಯ ದಾಳಿ ಮಾಡುತ್ತಿರುವ ರಷ್ಯಾಗೆ ಯಾವುದೇ ಅಡ್ಡಿ & ಆತಂಕ ಇಲ್ಲ. ಹಾಗೇ ಉಕ್ರೇನ್‌ಗೆ ಅಮೆರಿಕ & ಪಾಶ್ಚಿಮಾತ್ಯ ದೇಶಗಳು ಎಷ್ಟೇ ಸಹಾಯ ಮಾಡಿದರೂ ಅದೆಲ್ಲ ಉಪಯೋಗಕ್ಕೆ ಬರುತ್ತಿಲ್ಲ. ಹೀಗಿದ್ದಾಗ ಉಕ್ರೇನ್ ಈಗ ಸ್ಫೋಟಕ ನಿರ್ಧಾರಕ್ಕೆ ಬಂದಿದೆ. ಈ ಮೂಲಕ ರಷ್ಯಾಗೆ ಆಘಾತ ನೀಡಲು ಉಕ್ರೇನ್ ಸಜ್ಜಾಗಿದೆ.

ರಷ್ಯಾಗೆ ಉಕ್ರೇನ್ ಅಧ್ಯಕ್ಷರ ಚಾಲೆಂಜ್
ಅಂದಹಾಗೆ ಇದೀಗ ಯುರೋಪಿಯನ್ ಒಕ್ಕೂಟದ ಜೊತೆಗೆ ಭದ್ರತಾ ಒಪ್ಪಂದಕ್ಕಾಗಿ ಸಹಿ ಹಾಕುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಘೋಷಿಸಿದ್ದು, ರಷ್ಯಾ ಸೇನೆ ಪಿತ್ತ ನೆತ್ತಿಗೆ ಏರುವಂತೆ ಮಾಡಿದೆ. ಉಕ್ರೇನ್ ದೇಶವನ್ನ ತಮ್ಮ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಸದಸ್ಯತ್ವದ ಸಂಬಂಧ ಔಪಚಾರಿಕ ಮಾತುಕತೆ ಆರಂಭ ಮಾಡುತ್ತೇವೆ ಎಂದು ಯುರೋಪ್ ಘೋಷಣೆ ಮಾಡಿತ್ತು. ಹೀಗೆ ಯುರೋಪ್ ಒಕ್ಕೂಟದ ನಾಯಕರು ಹೇಳಿಕೆ ನೀಡಿರುವ ಕೆಲವೇ ದಿನಗಳ ನಂತರ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ರಷ್ಯಾಗೆ ಸವಾಲು ಹಾಕಿದ್ದಾರೆ.
17 ದೇಶಗಳ ಜೊತೆ ಒಪ್ಪಂದ!
ಉಕ್ರೇನ್ ಈಗಾಗಲೇ ಅಮೆರಿಕ, ಫ್ರಾನ್ಸ್, ಜರ್ಮನಿ, ಬ್ರಿಟನ್ ಮತ್ತು ಜಪಾನ್ ಸೇರಿದಂತೆ ಒಟ್ಟಾರೆ 17 ದೇಶಗಳ ಜೊತೆ ಇದೇ ರೀತಿ ದ್ವಿಪಕ್ಷೀಯ ಭದ್ರತಾ ಒಪ್ಪಂದಕ್ಕೆ ಉಕ್ರೇನ್ ಸಹಿ ಹಾಕಿದ್ದು, ಇದೀಗ ಮತ್ತೊಂದು ಗಟ್ಟಿ ನಿರ್ಧಾರ ಕೈಗೊಂಡಿದೆ. ಆದರೆ ಈ ಬಗ್ಗೆ ರಷ್ಯಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಹೀಗಾಗಿ ರಷ್ಯಾ ಸೇನೆ ತನ್ನ ದಾಳಿಯನ್ನ ಮತ್ತಷ್ಟು ಬಿಗಿ ಮಾಡುವ ಸಾಧ್ಯತೆ ಇರುವುದು ಈಗ ಗೋಚರಿಸುತ್ತಿದೆ. ಅದ್ರಲ್ಲೂ ಉಕ್ರೇನ್ ದೇಶದಲ್ಲಿ ಈ ರೀತಿಯ ಭಾರಿ ಬದಲಾವಣೆ ಆಗುತ್ತಿರುವುದು ರಷ್ಯಾ ಪಿತ್ತ ನೆತ್ತಿಗೇರಿಸಿದೆ. ಪುಟಿನ್ ಪಡೆಯ ನಾಯಕರು ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ಪಡೆಯುತ್ತಿದೆ.












Click it and Unblock the Notifications