Pakistan Blast: ಪಾಕಿಸ್ತಾನದ ಪರಮಾಣು ಸ್ಥಾವರದ ಬಳಿ ಭೀಕರ ಸ್ಫೋಟ?

ಸದಾ ಭಾರತದ ಜೊತೆಗೆ ಕಿತ್ತಾಡುವ, ಉಗ್ರರನ್ನು ಭಾರತಕ್ಕೆ ಕಳುಹಿಸಿ ಹಿಂಸೆಗೆ ಪ್ರಚೋದನೆ ನೀಡುವ ಪಾಕಿಸ್ತಾನ ಬದಲಾಗಿಲ್ಲ. ಹೀಗಾಗಿ ಸ್ವತಃ ಪಾಕಿಸ್ತಾನವೇ ಬೆಳೆಸಿದ್ದ ಉಗ್ರರ ಗ್ಯಾಂಗ್ ಪಾಕ್ ಜನರ ರಕ್ತವನ್ನೇ ಹರಿಸುತ್ತಿದೆ. ಮೊನ್ನೆ ಮೊನ್ನೆ ತಾನೆ ಭೀಕರ ಸ್ಫೋಟದಲ್ಲಿ 60ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿರುವ ಪಾಕ್‌ನಲ್ಲಿ, ಇಂದು ಕೂಡ ಡೆಡ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಅದೂ ಪರಮಾಣು ಸ್ಥಾವರದ ಸಮೀಪದಲ್ಲೇ!

ಪಾಕಿಸ್ತಾನದಲ್ಲಿ ಸಾಮಾನ್ಯ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ. ಅಲ್ಲಿ ಏನಿದ್ದರೂ ಭ್ರಷ್ಟರಿಗೂ ಮತ್ತು ಉಗ್ರರಿಗೂ ಮಾತ್ರ ಬದುಕಲು ಅವಕಾಶ. ಹೀಗೆ ಉಗ್ರರ ಕೂಪವಾಗಿರುವ ಪಾಕ್‌ನಲ್ಲಿ ಹತ್ತಾರು ಸ್ಫೋಟಗಳು ಒಂದೆ ವರ್ಷದಲ್ಲಿ ಸಂಭವಿಸಿವೆ. ಇದು ಸಾಲದು ಎಂಬಂತೆ ಮೊನ್ನೆ ಮೊನ್ನೆ ತಾನೆ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನ ಹಿನ್ನೆಲೆ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಸ್ಫೋಟವಾಗಿತ್ತು. ಮೆರವಣಿಗೆಯನ್ನೇ ಟಾರ್ಗೆಟ್ ಮಾಡಿದ್ದ ಉಗ್ರರ ಗ್ಯಾಂಗ್, ಭೀಕರ ಆತ್ಮಾಹುತಿ ದಾಳಿ ನಡೆಸಿತ್ತು. ಸೂಸೈಡ್ ಬಾಂಬರ್ ಒಬ್ಬ ತನ್ನ ತಾನೇ ಸ್ಫೋಟಿಸಿಕೊಂಡ ಕಾರಣ ಮೆರವಣಿಗೆ ವೇಳೆ ರಕ್ತಪಾತವಾಗಿ 60ಕ್ಕೂ ಹೆಚ್ಚು ಜನ ಮೃತಪಟ್ರು. ಈಗ ಮತ್ತೆ ಪಾಕ್‌ನಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ.

pakistan-nuclear-plant

ಸ್ಫೋಟದ ಸದ್ದಿ ಓಡೋಡಿ ಬಂದ ಜನ!

ಹೌದು, ಉಗ್ರರ ತವರು ಪಾಕಿಸ್ತಾನದಲ್ಲಿ ಇಂದು ಘೋರ ಘಟನೆ ನಡೆದು ಹೋಗಿದೆ. ಇದು ಪಾಕಿಸ್ತಾನಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಕಂಟಕ ಎದುರಾಗುವಂತೆ ಮಾಡಿದೆ. ಪರಮಾಣು ಸ್ಥಾವರದ ಬಳಿ ಭೀಕರ ಸ್ಫೋಟ ಸಂಭವಿಸಿದ್ದು, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಡೇರಾ ಗಾಜಿ ಖಾನ್ ಜಿಲ್ಲೆಯಲ್ಲಿ ಬ್ಲಾಸ್ಟ್ ಆಗಿರುವ ಸದ್ದು ಕೇಳಿಬಂದಿದೆ. ಆದರೆ ಇಲ್ಲಿವರೆಗೂ ಇದು ಯಾವ ರೀತಿಯ ಸ್ಫೋಟ? ಈ ಸ್ಫೋಟದಲ್ಲಿ ಏನೇನಾಗಿದೆ? ಎಂಬುದನ್ನ ಪಾಕಿಸ್ತಾನ ಸರ್ಕಾರ ಬಿಚ್ಚಿಟ್ಟಿಲ್ಲ. ಹೀಗಾಗಿ ಅನುಮಾನ ಕೂಡ ದಟ್ಟವಾಗಿದ್ದು, ಸ್ಫೋಟದ ಸದ್ದಿನಿಂದ ಸುತ್ತಮುತ್ತಲ ಭಾಗದ ಜನರು ಬೆಚ್ಚಿಬಿದ್ದು ಓಡೋಡಿ ಬಂದಿದ್ದಾರೆ.

2012ರಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್!

ಅಂದಹಾಗೆ ಈಗ ಪಾಕಿಸ್ತಾನದ ಪರಮಾಣು ಸ್ಥಾವರದ ಸಮೀಪ ಕೇಳಿಬಂದಿರುವ ಸೌಂಡ್‌ಗೆ ಅಕ್ಕಪಕ್ಕದ ದೇಶಗಳಲ್ಲೂ ಭಯ ಶುರುವಾಗಿದೆ. ಈಗ ಸ್ಫೋಟ ಕೇಳಿಬಂದಿರುವ ಜಾಗದಲ್ಲೇ ಈ ಹಿಂದೆ ತಾಲಿಬಾನ್ ಉಗ್ರರ ಪಡೆ ಬಾಂಬ್ ಬ್ಲಾಸ್ಟ್‌ಗೆ ಯತ್ನಿಸಿತ್ತು. ಅಣು ಸ್ಥಾವರವನ್ನೇ ಸ್ಫೋಟಿಸಲು ಉಗ್ರರು ಪ್ರಯತ್ನ ಮಾಡಿದ್ದರು. ಈ ಘಟನೆ ನಡೆದಿದ್ದು 2012ರಲ್ಲಿ, ಆದರೆ ಈಗ 10 ವರ್ಷದ ಬಳಿಕ ಮತ್ತೊಮ್ಮೆ ಡೇರಾ ಗಾಜಿ ಖಾನ್ ಜಿಲ್ಲೆಯ ಪರಮಾಣು ಸ್ಥಾವರದ ಬಳಿ ಸ್ಫೋಟದ ಸದ್ದು ಕೇಳಿಬಂದಿದೆ. ಹೀಗಾಗಿ ಇದರ ಹಿಂದೆ ಉಗ್ರರ ಕೈವಾಡ ಇದೆಯಾ? ಎಂಬ ಪ್ರಶ್ನೆ ಮೂಡಿದೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಸ್ಫೋಟದ ವಿಡಿಯೋ ವೈರಲ್ ಆಗುತ್ತಿದೆ.

ಪಾಕ್ ಜನರ ಜೀವಕ್ಕೆ ಗ್ಯಾರಂಟಿ ಇಲ್ವಾ?

ಒಟ್ನಲ್ಲಿ ಉಗ್ರರ ಸ್ವರ್ಗ ಪಾಕಿಸ್ತಾನ ಸೇಫ್ ಅಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗ್ತಿದ್ದು, ಜನ ಕೂಡ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಪಾಕ್ ಉಗ್ರರ ತವರು ಎಂಬ ಮಾತು ಮತ್ತೆ ಮತ್ತೆ ಪ್ರೂವ್ ಆಗುತ್ತಿದ್ದು ಪಾಕ್ ಜನರು ನೆಮ್ಮದಿಯಾಗಿ ಬದಕಲು ಆಗುತ್ತಿಲ್ಲ. ಈಗ ಮತ್ತೆ ಪಾಕಿಸ್ತಾನದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಪರಮಾಣು ಸ್ಥಾವರದ ಸಮೀಪವೇ ಭೀಕರ ಸ್ಫೋಟ ಸದ್ದು ಕೇಳಿಬಂದಿದೆ. ಸ್ಥಿತಿ ಹೀಗೆ ಕೈಮೀರಿದ್ದು ಪಾಕ್ ನಾಗರಿಕರು ಅಲ್ಲಿನ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈಗ ಘಟನೆ ಸಂಭವಿಸಿದ ಪ್ರದೇಶ ಮೊನ್ನೆ ಮೊನ್ನೆ ಬಾಂಬ್ ಸ್ಫೋಟವಾದ ಪ್ರದೇಶಕ್ಕೆ ಹತ್ತಿರದಲ್ಲೇ ಇದೆ.

ಸ್ಫೋಟದ ಸದ್ದು ಕೇಳಿಬಂದ ತಕ್ಷಣ ಪಾಕಿಸ್ತಾನ ಸೇನೆ ಮತ್ತು ಭದ್ರತಾ ಪಡೆ ಅಧಿಕಾರಿಗಳು ಅಲ್ಲೇ ಬೀಡುಬಿಟ್ಟಿದ್ದಾರೆ. ಅಲ್ಲದೆ ಮತ್ತೊಂದು ಕಡೆ ಪರಮಾಣು ಸ್ಥಾವರ ಭದ್ರೆತೆಯ ಬಗ್ಗೆ ಅನುಮಾನ ಮೂಡಿತ್ತಿದೆ. ಹೀಗೆ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಮುಖಭಂಗ ಅನುಭವಿಸುವುದು ಪಕ್ಕಾ. ಅದು ಬಿಡಿ ಅಕಸ್ಮಾತ್ ಪರಮಾಣು ಸ್ಥಾವರ ಸ್ಫೋಟಗೊಂಡರೆ ಭಾರತ ಸೇರಿದಂತೆ ಪಾಕಿಸ್ತಾನದ ಅಕ್ಕಪಕ್ಕದ ದೇಶಗಳಿಗೂ ಹಾನಿ ಎದುರಾಗುವ ಅಪಾಯ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+