ಸರ್ವಾಧಿಕಾರಿ ಕಿಮ್ ಜೊತೆಗೆ ಪುಟಿನ್ ವೆಪನ್ಸ್ ಡೀಲ್?
ರಷ್ಯಾ & ಉಕ್ರೇನ್ ಯುದ್ಧ ಭೀಕರವಾಗುತ್ತಿರುವ ಸಮಯದಲ್ಲೇ ಪುಟಿನ್ ಹೊಸ ಅಸ್ತ್ರವನ್ನ ಪ್ರಯೋಗ ಮಾಡಿದ್ದಾರೆ. ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ಆಘಾತ ನೀಡೋದಕ್ಕೆ ಉತ್ತರ ಕೊರಿಯಾಗೆ ತೆರಳಿರುವ ರಷ್ಯಾ ಅಧ್ಯಕ್ಷ ಪುಟಿನ್, ಅಮೆರಿಕದ ಬುಡ ಅಲುಗಾಡಿಸುವ ಸುದ್ದಿ ಕೊಡಲು ಸಜ್ಜಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಷ್ಯಾ & ಉಕ್ರೇನ್ ಯುದ್ಧದಲ್ಲಿ ಅಮೆರಿಕ ಪರೋಕ್ಷವಾಗಿ ಮಧ್ಯಪ್ರವೇಶ ಮಾಡುತ್ತಿದೆ. ಈ ವಿಚಾರ ಎರಡೂ ದೇಶಗಳ ನಡುವೆ ಕಿರಿಕ್ ಆಗುವಂತೆ ಮಾಡಿದೆ. ಹೀಗಿದ್ದಾಗಲೇ ರಷ್ಯಾದ ಅಧ್ಯಕ್ಷ ಪುಟಿನ್ ಹೊಸ ಅಸ್ತ್ರ ಒಂದನ್ನ ಅಮೆರಿಕ ವಿರುದ್ಧ ಈಗ ಪ್ರಯೋಗ ಮಾಡಿದ್ದಾರೆ. ಹಾಗಾದ್ರೆ ರಷ್ಯಾ ಅಧ್ಯಕ್ಷರ ಹೊಸ ಅಸ್ತ್ರವಾದರೂ ಏನು? ಇದರಿಂದ ಅಮೆರಿಕ & ಉಕ್ರೇನ್‌ಗೆ ಏನೆಲ್ಲಾ ಸಂಕಷ್ಟ ಎದುರಾಗಲಿದೆ? ಮುಂದೆ ಓದಿ.

ಈಗಾಗಲೇ ಉತ್ತರ ಕೊರಿಯಾ ಸಾವಿರ ಸಾವಿರ ಕಂಟೇನರ್ ಶಸ್ತ್ರಾಸ್ತ್ರವನ್ನು ರಷ್ಯಾಗೆ ಉಡುಗೊರೆ ಆಗಿ ಕೊಟ್ಟಿದೆ. ಹೀಗಿದ್ದಾಗಲೇ ಮತ್ತಷ್ಟು ಅಸ್ತ್ರಗಳನ್ನು ಉತ್ತರ ಕೊರಿಯಾದಿಂದ ತರಿಸೋಕೆ ರಷ್ಯಾ ಅಧ್ಯಕ್ಷ ಪುಟಿನ್ ಈಗ ಡೀಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪಗಳಿಗೆ ರಷ್ಯಾ ಕೇರ್ ಮಾಡುತ್ತಿಲ್ಲ. ಹೀಗಿದ್ದಾಗಲೇ ಮತ್ತೊಂದು ತಿಕ್ಕಾಟಕ್ಕೆ ವೇದಿಕೆ ಸಜ್ಜಾಗಿದೆ.
ಏನೆಲ್ಲಾ ಸಪ್ಲೈ ಮಾಡುತ್ತಿದೆ ಉ.ಕೊರಿಯಾ?
ಉತ್ತರ ಕೊರಿಯಾ ರಷ್ಯಾಗೆ ಖಂಡಾಂತರ ಕ್ಷಿಪಣಿ & ಉಡಾವಣಾ ವಾಹನ ಕಳಿಸುವ ಜೊತೆಯಲ್ಲೇ ಉಕ್ರೇನ್ ವಿರುದ್ಧ ಹೋರಾಡಲು ರಷ್ಯಾ ಸೈನಿಕರಿಗೆ ಏನೆಲ್ಲಾ ಬೇಕೋ ಅದನ್ನೆಲ್ಲಾ ವ್ಯವಸ್ಥೆ ಮಾಡಿದೆ. ಹೀಗೆಲ್ಲಾ ಅಮೆರಿಕ & ಪಾಶ್ಚಿಮಾತ್ಯ ದೇಶಗಳು ಆರೋಪ ಮಾಡುತ್ತಿರುವ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ನಿನ್ನೆ ತಾನೆ ಉತ್ತರ ಕೊರಿಯಾಗೆ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿ ನೀಡಿದ್ದು ಈ ವೇಳೆ ಹಲವು ರೀತಿಯ ಚರ್ಚೆ & ಸಭೆ ನಡೆಸಲಾಗಿದೆ. ಸಭೆಗಳಲ್ಲಿ ಪಾಶ್ಚಿಮಾತ್ಯ ದೇಶಗಳು & ಅಮೆರಿಕದ ವಿರುದ್ಧ ಹೋರಾಟಕ್ಕೆ ತಂತ್ರ ಹೆಣೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಯುದ್ಧ ಶುರುವಾಗಿದ್ದು ಹೇಗೆ?
ರಷ್ಯಾ ಅಧ್ಯಕ್ಷ ಪುಟಿನ್ 2022ರ ಫೆಬ್ರವರಿ ತಿಂಗಳ ಕೊನೇ ವಾರದಲ್ಲಿ ಉಕ್ರೇನ್ ವಿರುದ್ಧ, ಯುದ್ಧ ಘೋಷಣೆ ಮಾಡಿದ್ದರು. ಸೇನಾಧಿಕಾರಿಗಳ ಜೊತೆಯಲ್ಲಿ ಮಹತ್ವದ ಮಾತುಕತೆ ನಡೆಸಿ, ಕೆಲವೇ ಕ್ಷಣದಲ್ಲಿ ಯುದ್ಧ ಘೋಷಣೆ ಮಾಡಿದ್ದರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಈ ಮೂಲಕ, ಶತ್ರುವಿನ ಸಾವಿಗು ಪಣತೊಟ್ಟರು ಪುಟಿನ್. ನೋಡ ನೋಡುತ್ತಲೇ ಯುದ್ಧವು ಕೈಮೀರುತ್ತಿದ್ದು ಈಗಾಗಲೇ ಉಕ್ರೇನ್ ಜನ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಮಧ್ಯೆ ಸಾವಿನ ಸಂಖ್ಯೆ ಕೂಡ ಜೋರಾಗಿ ಏರಿಕೆ ಆಗುತ್ತಿದೆ. ಆದರೂ ಯುದ್ಧ ನಿಲ್ಲಿಸುವ ಪ್ರಯತ್ನವೇ ನಡೆಯುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.












Click it and Unblock the Notifications