Israel-Iran War: ಹಿಜ್ಬುಲ್ಲಾ ಹೊಸ ಮುಖ್ಯಸ್ಥನ ಹತ್ಯೆ ಮಾಡಿದ ಇಸ್ರೇಲ್ ಸೇನೆ?
ಇಸ್ರೇಲ್ ಸೇನೆ ಕ್ಷಣ ಕ್ಷಣಕ್ಕೂ ತನ್ನ ದಾಳಿಯ ತೀಕ್ಷಣತೆ ಹೆಚ್ಚು ಮಾಡುತ್ತಿದೆ. ಅದ್ರಲ್ಲೂ ಈ ರೀತಿಯ ದಾಳಿಯ ಮೂಲಕ ಮಧ್ಯಪ್ರಾಚ್ಯ ಪ್ರದೇಶ ನಡುಗಿ ಹೋಗುವಂತೆ ಮಾಡುತ್ತಿದೆ ಎಂಬ ಆರೋಪವನ್ನ, ಇಸ್ರೇಲ್ ವಿರೋಧಿ ಬಣ ಮಾಡುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ಹಿಜ್ಬುಲ್ಲಾ ಹೊಸ ಮುಖ್ಯಸ್ಥನನ್ನ ಕೂಡ ಇದೀಗ ಇಸ್ರೇಲ್ ಸೇನೆ ಹತ್ಯೆ ಮಾಡಿದೆ ಎಂಬ ಸುದ್ದಿ ಹಬ್ಬಿದೆ. ಈ ಮೂಲಕ ಇರಾನ್ ದಾಳಿಗೆ ಇಸ್ರೇಲ್ ಮಿಲಿಟರಿ ಇದೀಗ ರಿವೇಂಜ್ ತೆಗೆದುಕೊಂಡಿದೆಯಾ? ಎಂಬ ಪ್ರಶ್ನೆ ಹುಟ್ಟುಹಾಕಿದ್ದು, ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಮಧ್ಯಪ್ರಾಚ್ಯ ಭಾಗದಲ್ಲಿ ಇಸ್ರೇಲ್ ಸೇನೆ ಇದೀಗ ತನ್ನ ಶತ್ರುಗಳನ್ನ ಇಲ್ಲ ಅನಿಸುತ್ತಿದೆ. ಇದು ಮಧ್ಯಪ್ರಾಚ್ಯ ಭಾಗದ ದೇಶಗಳಲ್ಲಿ ಇದೀಗ ಕಂಪನ ತರಿಸಿದೆ. ಅಷ್ಟಕ್ಕೂ ಇಸ್ರೇಲ್ ದಾಳಿಯಲ್ಲಿ ಜೀವ ಬಿಟ್ಟಿದ್ದ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಜಾಗಕ್ಕೆ ಮತ್ತೊಬ್ಬ ವ್ಯಕ್ತಿಯ ಆಗಮನ ಆಗಿತ್ತು. ಹೀಗಾಗಿ ಆತನನ್ನು ಹತ್ಯೆ ಮಾಡಲು ಇಸ್ರೇಲ್ ಮಿಲಿಟರಿ ದೊಡ್ಡ ಕಾರ್ಯಾಚರಣೆ ನಡೆಸುತ್ತಿತ್ತು. ಅದರಲ್ಲೂ ಹಸನ್ ನಸ್ರಲ್ಲಾ ಅಡಗಿ ಕೂತಿದ್ದ ಜಾಗದ ಸುತ್ತಮುತ್ತಲೇ ಹೊಸ ಮುಖ್ಯಸ್ಥ ಕೂಡ ಅಡಗಿದ್ದ ಎನ್ನಲಾಗಿತ್ತು. ಹೀಗಾಗಿ ಇಸ್ರೇಲ್ ಸೇನೆ ದಾಳಿ ನಡೆಸಿ ಇಂತಹ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ಹಶೀಮ್ ಸಫೀದಿನ್ ಎಂದು ಗುರುತಿಸಲಾಗಿರುವ ಹಿಜ್ಬುಲ್ಲಾದ ಹೊಸ ಮುಖ್ಯಸ್ಥನ ಸಾವು ಇದೀಗ ಸಂಚಲನ ಸೃಷ್ಟಿ ಮಾಡಿದೆ.

ಸಂಪರ್ಕಕ್ಕೆ ಸಿಗದ ಹೊಸ ಮುಖ್ಯಸ್ಥ?
ಲೆಬನಾನ್ ಭದ್ರತಾ ಮೂಲಗಳು ತಿಳಿಸಿರುವ ಪ್ರಕಾರ, ಇಸ್ರೇಲ್ ದಾಳಿಯಲ್ಲಿ ಜೀವ ಬಿಟ್ಟಿದ್ದ ಹಿಜ್ಬುಲ್ಲಾದ ಮುಖ್ಯಸ್ಥ ಹಸನ್ ನಸ್ರಲ್ಲಾ ಜಾಗಕ್ಕೆ ಬಂದು ಕೂತಿರುವ ಹಶೀಮ್ ಸಫೀದಿನ್ ಸಂಪರ್ಕಕ್ಕೆ ಸಿಕ್ಕಿಲ್ಲವಂತೆ. ಇಸ್ರೇಲ್ ಪಡೆಗಳು ಸಫೀದಿನ್ ಗುರಿಯಾಗಿಸಿ ದಾಳಿ ನಡೆಸಿದ ಹಿನ್ನೆಲೆ ಪರಿಸ್ಥಿತಿ ಕೂಡ ಸೂಕ್ಷ್ಮವಾಗಿದೆ, ಹಶೀಮ್ ಸಫೀದಿನ್ ಅಡಗಿರುವ ಜಾಗಗಳ ಮಾಹಿತಿ ಪಡೆದ ಇಸ್ರೇಲ್ ಮಿಲಿಟರಿ ಈ ರೀತಿಯ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ. ಲೆಬನಾನ್ ದೇಶದ ರಾಜಧಾನಿ ಬೈರೂತ್‌ನ ದಕ್ಷಿಣ ಭಾಗದಲ್ಲಿ ಈ ರೀತಿಯಾಗಿ ಘೋರ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಮತ್ತಷ್ಟು ರೊಚ್ಚಿಗೇಳುತ್ತಾ ಇರಾನ್?
ಇಸ್ರೇಲ್ ಮಿಲಿಟರಿ ದಾಳಿ ಅದೆಷ್ಟು ದೊಡ್ಡದಾಗಿ ಇದೆ ಎಂದರೆ, ಹಿಜ್ಬುಲ್ಲಾ ಗುಪ್ತಚರ ಪ್ರಧಾನ ಕಚೇರಿ ಕೂಡ ಈ ದಾಳಿಯಲ್ಲಿ ಧೂಳ್ ಧೂಳ್ ಆಗಿದೆ ಎನ್ನಲಾಗಿದೆ. ಮತ್ತೊಂದು ಕಡೆ ಈ ದಾಳಿಯಲ್ಲಿ ಲೆಬನಾನ್ ಜನರು ಕೂಡ ಪರದಾಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಘೋರ ದಾಳಿ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಹಶೀಮ್ ಸಫೀದಿನ್ ಮೃತಪಟ್ಟಿದ್ದೇ ನಿಜವಾದರೆ, ಇರಾನ್ ಈ ಘಟನೆ ವಿರುದ್ಧ ಮತ್ತಷ್ಟು ಕೆರಳುವ ಸಾಧ್ಯತೆ ಕೂಡ ದಟ್ಟವಾಗಿದೆ.
ಹೀಗಾಗಿಯೇ ಈ ಯುದ್ಧ & ಜಗಳ ನಿಲ್ಲಬೇಕು ಎಂಬುದು ವಿಶ್ವಸಂಸ್ಥೆ ಸಹಿತ ಇಡೀ ಜಗತ್ತಿನ ಆಶಯವಾಗಿದೆ. ಹಾಗೇ ಭಾರತ ಕೂಡ ಯುದ್ಧ ನಿಲ್ಲಿಸಿ ಎಂದು ಇಸ್ರೇಲ್‌ಗೆ ಹೇಳುತ್ತಿದೆ. ಈ ಘಟನೆಗಳು ಕೈಮೀರಿದರೆ 3ನೇ ಮಹಾಯುದ್ಧ ಶುರುವಾಗುವ ಭಯ ಕಾಡುತ್ತಿದೆ. ಹೀಗಾಗಿಯೇ ಪರಿಸ್ಥಿತಿ ಸರಿ ಮಾಡಲು ಜಾಗತಿಕ ಮಟ್ಟದಲ್ಲಿ ದೊಡ್ಡ ಹೋರಾಟ ಶುರುವಾಗಿದೆ.












Click it and Unblock the Notifications