Iran President Death: ಇರಾನ್ ಅಧ್ಯಕ್ಷರ ಸಾವಿನ ಹಿಂದೆ ಇಸ್ರೇಲ್ ಕೈವಾಡ?
ಇಸ್ರೇಲ್ ವಿರುದ್ಧ ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೊಮ್ಮೆ ಸೇಡಿನ ಕಿಡಿ ಹೊತ್ತಿಕೊಂಡಿದೆ. ಈ ಮೂಲಕ 3ನೇ ಮಹಾಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂಬ ಮಾತು ಕೇಳಿಬರುತ್ತಿವೆ. ಯಾಕಂದ್ರೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೆ ತುತ್ತಾಗಿತ್ತು. ಹೀಗೆ ಇಬ್ರಾಹಿಂ ರೈಸಿ ಸೇರಿದಂತೆ ಇರಾನ್ ವಿದೇಶಾಂಗ ಸಚಿವರು & ಅಧಿಕಾರಿಗಳ ಸಾವಿಗೆ ಇಸ್ರೇಲ್ ಕಾರಣ ಎಂಬ ಆರೋಪ ಇರಾನ್ ತಲೆಯಲ್ಲಿ ಮೂಡಿದೆ.
ಹೀಗೆ ಇಸ್ರೇಲ್ ಮತ್ತು ಇರಾನ್ ನಡುವೆ ಈಗ ಯುದ್ಧದ ವಾತಾವರಣ ನಿರ್ಮಾಣ ಆಗಿದ್ದು. ಯಾವ ಕ್ಷಣದಲ್ಲಿ ಬೇಕಾದರೂ, ಇರಾನ್ ನೇರವಾಗಿ ಇಸ್ರೇಲ್ ವಿರುದ್ಧ ಯುದ್ಧ ಘೋಷಣೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಜಾಗತಿಕವಾಗಿ ಈಗ 3ನೇ ಮಹಾಯುದ್ಧದ ಭೀತಿ ಆವರಿಸಿದೆ. ಅಲ್ಲದೆ ಇನ್ನೂ ಕೆಲವು ಮಾಹಿತಿಗಳ ಪ್ರಕಾರ ಈಗ ಇರಾನ್ ತನ್ನಲ್ಲಿರುವ ಕ್ಷಿಪಣಿ ವ್ಯವಸ್ಥೆ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ.

ಅಷ್ಟಕ್ಕೂ ಅಜೆರ್‌ಬೈಜಾನ್ ಅರಾಸ್ ನದಿಗೆ ನಿರ್ಮಿಸಿದ ಡ್ಯಾಂ ಉದ್ಘಾಟನೆಗೆ ರೈಸಿ ಅತಿಥಿಯಾಗಿ ಹೋಗಿದ್ದರು. ಆದರೆ ಇದೇ ಸಮಯದಲ್ಲಿ ಭೀಕರ ದುರಂತ ನಡೆದಿರುವುದು ಪರಿಸ್ಥಿತಿಯನ್ನ ಮತ್ತಷ್ಟು ಆತಂಕಕ್ಕೆ ದೂಡಿದೆ. ಹಾಗೇ ಇರಾನ್ ಸೇನೆ ಈಗ ಇಸ್ರೇಲ್ ವಿರುದ್ಧ ಯುದ್ಧ ಘೋಷಣೆ ಮಾಡುತ್ತಾ? ಎಂಬ ಪ್ರಶ್ನೆ ಮೂಡಿದೆ. ಈ ಬೆನ್ನಲ್ಲೇ ಇಸ್ರೇಲ್ ಕೂಡ ಅಲರ್ಟ್ ಆಗಿದ್ದು, ತನ್ನ ಗಡಿ ಪ್ರದೇಶ ಭದ್ರ ಮಾಡಿಕೊಳ್ಳುತ್ತಿದೆ. ಮತ್ತೊಂದು ಕಡೆ ಆಕಾಶದಲ್ಲೂ ಅಲರ್ಟ್ ಘೋಷಣೆ ಆಗಿದೆ.
3ನೇ ಮಹಾಯುದ್ಧ ಫಿಕ್ಸ್?
ಈಗಿನ ಪರಿಸ್ಥಿತಿ ನೋಡುತ್ತಿದ್ದರೆ, ಅಕಸ್ಮಾತ್ ಇರಾನ್ ಈಗ ಇಸ್ರೇಲ್ ವಿರುದ್ಧ ಯುದ್ಧವನ್ನ ಘೋಷಣೆ ಮಾಡಿದರೆ ಅದು ಪಕ್ಕಾ 3ನೇ ಮಹಾಯುದ್ಧವಾಗಿ ಬದಲಾಗುವ ಭಯ ಕಾಡ್ತಿದೆ. ಯಾಕಂದ್ರೆ ಇರಾನ್ ಬಳಿ ನ್ಯೂಕ್ಲಿಯರ್ ಅಂದ್ರೆ ಅಣುಬಾಂಬ್ ಇವೆ. ಅಕಸ್ಮಾತ್ ಕೋಪದಲ್ಲಿ ಇರಾನ್ ಸೇನೆ ಏನಾದರೂ, ತನ್ನಲ್ಲಿ ಇರುವ ನ್ಯೂಕ್ಲಿಯರ್ ಅಸ್ತ್ರಗಳನ್ನು ಇಸ್ರೇಲ್ ವಿರುದ್ಧ ಪ್ರಯೋಗ ಮಾಡಿದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ. ಈಗಾಗಲೇ ಮಧ್ಯಪ್ರಾಚ್ಯ ಯುದ್ಧದ ಕುಲುಮೆಯಲ್ಲಿ ಬೇಯುತ್ತಿದೆ. ಪ್ಯಾಲೆಸ್ತೀನ್ & ಇಸ್ರೇಲ್ ನಡುವೆ ಯುದ್ಧ ನಡೆಯುವಾಗಲೇ ಈ ರೀತಿ ಘಟನೆ ಸಂಭವಿಸಿದೆ.
ಇಸ್ರೇಲ್ ಮುಟ್ಟಿದರೆ ಅಮೆರಿಕ ಎಂಟ್ರಿ?
ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಅಮೆರಿಕ ಈಗ ನರಳುತ್ತಿದೆ, ಯಾಕಂದ್ರೆ ಅಮೆರಿಕ ಈಗ ಬಿಸಿ ತುಪ್ಪ ಗಂಟಲಿಗೆ ಸುರಿದುಕೊಂಡಿದೆ. ಒಂದು ಕಡೆ ಇಸ್ರೇಲ್ ಮಾಡುತ್ತಿರುವ ತಪ್ಪುಗಳ ರಾಶಿಯ ಒಪ್ಪಿಕೊಳ್ಳಲು ಅಮೆರಿಕಗೆ ಆಗುತ್ತಿಲ್ಲ, ಮತ್ತೊಂದು ಕಡೆ ಇಸ್ರೇಲ್ ವಿರುದ್ಧ ಹೋಗಲು ಅಮೆರಿಕ ನಾಯಕರಿಗೆ ಆಗುತ್ತಿಲ್ಲ. ಇದು ಭಯ ಹೆಚ್ಚಾಗುವಂತೆ ಮಾಡಿದ್ದು, ಯಾವ ಕ್ಷಣದಲ್ಲಿ ಇಸ್ರೇಲ್ ವಿರುದ್ಧ ಇರಾನ್ ಯುದ್ಧ ಘೋಷಣೆ ಮಾಡುತ್ತೆ? ಅಂತಾ ಈಗ ಚರ್ಚೆ ಶುರುವಾಗಿದೆ. ಅಕಸ್ಮಾತ್ ಇಸ್ರೇಲ್ ವಿರುದ್ಧ ಇರಾನ್ ಸೇನೆ ಯುದ್ಧ ಘೋಷಣೆ ಮಾಡಿದ್ರೆ, ಆಗ ಅನಿವಾರ್ಯ ಸ್ಥಿತಿಯಲ್ಲಿ ಅಮೆರಿಕ ಕೂಡ ಇಸ್ರೇಲ್ ಪರ ನಿಲ್ಲಬೇಕಾಗುತ್ತದೆ.












Click it and Unblock the Notifications