ತಂದೆ, ಅಣ್ಣ & ತಮ್ಮ ಸೇರಿ ತನ್ನದೇ ಕುಟುಂಬದ 12 ಜನರನ್ನು ಗುಂಡಿಟ್ಟು ಕೊಲೆ ಮಾಡಿದ ಯುವಕ!
ಮನುಷ್ಯನೂ ಒಂದು ಮೃಗ, ನಾಗರಿಕತೆ ಬರುವ ಮೊದಲು ಮನುಷ್ಯ ಕೂಡ ಇತರ ಪ್ರಾಣಿಗಳ ರೀತಿಯಲ್ಲೇ ಕಾಡು ಮೃಗದಂತೆ ಬದುಕುತ್ತಿದ್ದ. ಆದರೆ ನಾಗರಿಕತೆ ಅಭಿವೃದ್ಧಿ ಹೊಂದಿದಂತೆ ಮನುಷ್ಯ ಕೂಡ ಬದಲಾದ. ಆದ್ರೂ ಮನುಷ್ಯರಲ್ಲಿ ಇರುವ ಮೃಗ ವರ್ತನೆ ಈಗಲೂ ಹಾಗೇ ಉಳಿದಿದೆ. ಈ ಮಾತನ್ನ ನಿಜ ಮಾಡುವಂತೆ ಇಲ್ಲೊಬ್ಬ ವ್ಯಕ್ತಿ, ತನ್ನದೇ ಕುಟುಂಬದ ಒಟ್ಟು 12 ಜನರನ್ನ ಎಕೆ47 (AK47) ಗನ್ ಬಳಸಿ ಕೊಲೆ ಮಾಡಿದ್ದಾನಂತೆ! ಹಾಗಾದರೆ ಈ ಘಟನೆ ನಡೆಯಲು ಕಾರಣ ಏನು?
ಪಾಶ್ಚಿಮಾತ್ಯ ದೇಶದಲ್ಲಿ ಗನ್ ಬಳಸಿ ಮನುಷ್ಯರ ಮೇಲೆ ಮನುಷ್ಯರೇ ದಾಳಿ ಮಾಡುವುದು ಮಾಮೂಲಿ. ಆದ್ರೆ ಭಾರತದಲ್ಲಿ ಇಂತಹ ಘಟನೆಗಳು ತುಂಬಾನೆ ಕಡಿಮೆ. ಅದರಲ್ಲೂ ಈ ರೀತಿ ಘಟನೆಗಳು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಲ್ಲೋ ಇಲ್ಲೋ ಯಾವಾಗಲೋ ವರದಿ ಆಗಿವೆ. ಆದ್ರೆ ಅಮೆರಿಕದಲ್ಲಿ ದಿನ ಬೆಳಗಾದ್ರೆ ಗನ್ ದಾಳಿಗೆ ನೂರಾರು ಜನ ಜೀವ ಬಿಡುತ್ತಿದ್ದಾರೆ. ಹೀಗಿದ್ದಾಗಲೇ ಇಲ್ಲೊಬ್ಬ ಪಾಪಿ ತನ್ನದೇ ಕುಟುಂಬದ ಒಟ್ಟಾರೆ 12 ಜನರನ್ನು ಕೊಂದಿದ್ದು, ಈ ಘಟನೆ ನಡೆದಿರುವುದು ಯಾವ ದೇಶದಲ್ಲಿ ಗೊತ್ತಾ? ಸಂಪೂರ್ಣ ಮಾಹಿತಿಗೆ, ಮುಂದೆ ಓದಿ.

ವಯಸ್ಸು 30, ಕೊಂದಿದ್ದು 12 ಜನರನ್ನ
ಅಷ್ಟಕ್ಕೂ ಈ ರೀತಿಯ ಅಮಾನವೀಯ ಘಟನೆ ನಡೆದಿರುವುದು ಇರಾನ್ ದೇಶದಲ್ಲಿ. ಹೀಗೆ ತನ್ನದೇ ಕುಟುಂಬದ 12 ಜನರನ್ನು ಕೊಂದಿರುವುದು 30 ವರ್ಷದ ವ್ಯಕ್ತಿ. ಅಷ್ಟಕ್ಕೂ ಹೀಗೆ 30 ವರ್ಷದ ವ್ಯಕ್ತಿಯೊಬ್ಬ ತನ್ನ ತಂದೆ & ಸಹೋದರ ಸೇರಿ 12 ಜನ ಸಂಬಂಧಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನಂತೆ. ಈ ಬಗ್ಗೆ ಇರಾನ್ ಮಾಧ್ಯಮಗಳು ವರದಿ ಪ್ರಕಟಿಸಿವೆ. ಸಾಮಾನ್ಯವಾಗಿ ಈ ರೀತಿಯ ಘಟನೆಗಳು ನಡೆಯುವುದು ಅಮೆರಿಕದಲ್ಲಿ, ಆದರೆ ಇರಾನ್ ಇಂತಹ ಘಟನೆಯ ಅಪರೂಪಕ್ಕೆ ನೋಡುತ್ತದೆ.
12 ಜನರ ಹತ್ಯೆಗೆ ಕಾರಣ ಏನು?
ಮೊದಲೇ ಹೇಳಿದಂತೆ ಇರಾನ್ ದೇಶದಲ್ಲಿ ನಡೆದ ಅಪರೂಪದ ಸಾಮೂಹಿಕ ಗುಂಡಿನ ದಾಳಿ ಇದಾಗಿದೆ. ಆದರೆ ಇನ್ನೂ ಆರೋಪಿಯ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಇರಾನ್ ದೇಶದ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ. ದಕ್ಷಿಣ-ಮಧ್ಯ ಪ್ರಾಂತ್ಯದ ಕೆರ್ಮನ್‌ನಲ್ಲಿ ಭದ್ರತಾ ಪಡೆಗಳು ಆತನನ್ನು ಹತ್ಯೆ ಮಾಡಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಮತ್ತೊಂದು ಕಡೆ ಈ ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಅಂತಾ ಹೇಳಲಾಗುತ್ತಿದೆ. ಹೀಗಾಗಿ ಹೆಚ್ಚಿನ ತನಿಖೆ ಮುಂದುವರಿದಿದೆ.
2 ವರ್ಷಗಳ ಹಿಂದೆ ಪಶ್ಚಿಮ ಇರಾನ್‌ನಲ್ಲಿ ಸರ್ಕಾರಿ ಸಂಸ್ಥೆಯೊಂದರ ವಜಾಗೊಂಡ ಉದ್ಯೋಗಿ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಘಟನೆ ಬೆಚ್ಚಿ ಬೀಳಿಸಿತ್ತು. ಹಾಗೇ ಈ ಘಟನೆಯಲ್ಲಿ 5 ಜನರು ಗಾಯಗೊಂಡಿದ್ದರು. ಇದೀಗ ಮತ್ತೊಂದು ಭೀಕರ ಘಟನೆ ನಡೆದಿದ್ದು, ಎಕೆ-47 ಗನ್ ಬಳಸಿ ತನ್ನದೇ ಕುಟುಂಬದ ಜನರನ್ನ ಪಾಪಿ ಹತ್ಯೆ ಮಾಡಿದ್ದಾನೆ. 2022 ರ ರೀತಿಯೇ 2016 ರಲ್ಲಿ ಕೂಡ 26 ವರ್ಷದ ಯುವಕ, ತನ್ನದೆ ಕುಟುಂಬದ 10 ಜನರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ. ಹೀಗೆ ಈ ಎಲ್ಲಾ ಘಟನೆ ಮರೆಯಾಗುವ ಮೊದಲೇ ಇದೀಗ 12 ಜನರನ್ನ ಬಲಿ ಪಡೆದಿದ್ದಾನೆ ಆಗಂತುಕ.












Click it and Unblock the Notifications