ಇಸ್ರೇಲ್ ವಿರುದ್ಧ ರೊಚ್ಚಿಗೆದ್ದ ಫ್ರಾನ್ಸ್: ಕಾರಣ ಏನು ಗೊತ್ತಾ?
ತನ್ನ ಕಾಲಿನ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವುದನ್ನ ಇಸ್ರೇಲ್ ನೋಡಿ ಕಲಿಯಬೇಕು. ಯಾಕೆ ಅಂದ್ರೆ ಇಸ್ರೇಲ್ ತಾನು ಮಾಡಿಕೊಳ್ಳುತ್ತಿರುವ ತಪ್ಪಿಗೆ ತನ್ನ ಸ್ನೇಹಿತರನ್ನು ಕಳೆದುಕೊಳ್ಳುತ್ತಿದೆ. ಈ ಹಿಂದಿನಿಂದ ಕೂಡ ಇಸ್ರೇಲ್ ಮಾಡುತ್ತಿರುವ ತಪ್ಪಿಗೆ ಪಾಶ್ಚಿಮಾತ್ಯ ದೇಶಗಳು ಕೋಪಗೊಂಡಿವೆ. ಅಲ್ಲದೆ ಇಸ್ರೇಲ್ ಸೇನೆ ಕೂಡಲೇ ಪ್ಯಾಲೆಸ್ತೀನ್ ಮೇಲೆ ನಡೆಸುತ್ತಿರುವ ಯುದ್ಧ ನಿಲ್ಲಿಸಬೇಕು ಎಂಬ ಬೇಡಿಕೆ ಕೂಡ ಇಟ್ಟಿವೆ. ಹೀಗಿದ್ದಾಗಲೇ ಇಸ್ರೇಲ್ ಮತ್ತೆ ಎಡವಟ್ಟು ಮಾಡಿಕೊಂಡಿದ್ದು, ಇದೀಗ ಫ್ರಾನ್ಸ್ ಅಧ್ಯಕ್ಷರನ್ನೂ ರೊಚ್ಚಿಗೆಬ್ಬಿಸಿದೆ.
ರಫಾ ಪ್ರದೇಶದಲ್ಲಿ ಯುದ್ಧ ನಿಲ್ಲಿಸಿ ಎಂದು, ಇಸ್ರೇಲ್ ಸೇನೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ ನೀಡಿದ 2 ದಿನದಲ್ಲಿ ಇಸ್ರೇಲ್ ಭೀಕರ ದಾಳಿ ನಡೆಸಿದೆ. ಇಸ್ರೇಲ್ ಸೇನೆ ನಿರಾಶ್ರಿತ ಶಿಬಿರದ ಮೇಲೆ ದಾಳಿ ನಡೆಸಿದ ನಂತರ ಹೊತ್ತಿ ಉರಿಯುತ್ತಿರುವ ಅವಶೇಷಗಳ ಅಡಿಯಲ್ಲೂ ಜನ ಸಿಲುಕಿ ನರಳುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹೀಗೆ ಸುಮಾರು 45 ಜನರು ನಿರಾಶ್ರಿತರ ಶಿಬಿರದ ಒಳಗೆ ಜೀವ ಬಿಟ್ಟಿದ್ದು ಇಡೀ ಜಗತ್ತನ್ನೇ ಕೆರಳಿಸಿದೆ. ಈ ಕುರಿತು ಇದೀಗ ಹೇಳಿಕೆ ನೀಡಿರುವ ಫ್ರಾನ್ಸ್ ಅಧ್ಯಕ್ಷರು ಇಸ್ರೇಲ್ ಮಾಡಿರುವ ತಪ್ಪನ್ನು ಖಂಡಿಸಿದ್ದಾರೆ. ಹಾಗೆಯೇ ಇದು ತಪ್ಪು ಎಂದಿದ್ದಾರೆ ಇಮ್ಮಾನ್ಯುವೆಲ್ ಮಾಕ್ರೋನ್ ಅವರು.

ಕಾನೂನು ಎಲ್ಲರಿಗೂ ಒಂದೆ!
ಅಂತಾರಾಷ್ಟ್ರೀಯ ಕಾನೂನು ಪಾಲನೆ ಮಾಡಬೇಕಿರುವುದು ಪ್ರತಿಯೊಂದು ದೇಶದ ಕರ್ತವ್ಯವಾಗಿದೆ ಆದರೆ ಇಸ್ರೇಲ್ ವಿಚಾರದಲ್ಲಿ ಇದು ನಡೆಯುತ್ತಿಲ್ಲ, ಹೀಗಾಗಿ ಇದು ಖಂಡನೀಯ ಎಂದಿದ್ದಾರೆ ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್. ಕಳೆದ ಕೆಲವು ದಿನಗಳಿಂದ ಇಸ್ರೇಲ್ ಸೇನೆ ಹೀಗೆ ಹಿಂಸೆಗೆ ಇಳಿದಿರುವುದು ಭಾರಿ ಆಕ್ರೋಶ ತರಿಸಿದೆ. ಹೀಗಾಗಿ ಇದನ್ನ ಸರಿ ಮಾಡಬೇಕು, ಹೀಗೆಯೇ ಯುದ್ಧ ಮುಂದುವರಿದರೆ ಕಷ್ಟ ಅನ್ನೋದು ಇಡೀ ಪ್ರಪಂಚಕ್ಕೆ ಮನವರಿಕೆ ಆಗಿದೆ. ಹೀಗಿದ್ದಾಗ ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್ ಕೂಡ ಇಸ್ರೇಲ್ ಮಾಡಿದ ತಪ್ಪಿಗೆ ಈಗ ಆಕ್ರೋಶ ಹೊರಹಾಕಿದ್ದಾರೆ.
ಯುದ್ಧ ನಿಲ್ಲಿಸಲು ಹೇಳಿತ್ತು ಕೋರ್ಟ್
ಗಾಜಾ ಪಟ್ಟಿ ಪ್ರದೇಶದ ರಫಾ ಭಾಗದಲ್ಲಿ 3 ವಾರದಿಂದ ತಿಕ್ಕಾಟ ತೀವ್ರವಾಗಿದೆ. ಈ ಹಿನ್ನೆಲೆ ಇಸ್ರೇಲ್ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಾಗೆಯೇ ಯುದ್ಧ ತಕ್ಷಣ ನಿಲ್ಲಿಸಿ, ಎಂಬ ಒತ್ತಾಯ ಕೇಳಿಬಂದಿತ್ತು. ಪ್ಯಾಲೆಸ್ತೀನ್ ಪ್ರಜೆಗಳನ್ನ ಇಸ್ರೇಲ್ ಸೇನೆ ಬಲವಂತಾಗಿ ಸ್ಥಳಾಂತರ ಮಾಡುತ್ತಿದೆ ಹೀಗಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇಂಟರ್‌ನ್ಯಾಷನಲ್ ಕೋರ್ಟ್ ಇಸ್ರೇಲ್‌ಗೆ ಆಘಾತ ನೀಡಿದ್ದು, ಅಲ್ಲಿ ನಡೆಯುತ್ತಿರುವ ಕಾರ್ಚಾರಣೆ ನಿಲ್ಲಿಸಿ ಎಂದಿತ್ತು ಅಂತಾರಾಷ್ಟ್ರೀಯ ನ್ಯಾಯಾಲಯ. ಹೀಗಿದ್ದರೂ ಇಸ್ರೇಲ್ ಹಿಂಸಾಚಾರವನ್ನು ಮುಂದುವರಿಸಿದೆ.












Click it and Unblock the Notifications