ಉತ್ತರ ಕೊರಿಯಾ, ಅಮೆರಿಕ ನಡುವಿನ ಯುದ್ಧ ಸನ್ನಿಹಿತ?

ಇಡೀ ಅಮೆರಿಕವನ್ನು ನಾಶಪಡಿಸಲು ಸಜ್ಜಾಗಿರುವ ಉತ್ತರ ಅಮೆರಿಕದ ಕ್ಷಿಪಣಿ. ಖಂಡಾಂತರ ಕ್ಷಿಪಣಿಯಿಂದ ಅಮೆರಿಕ ಸರ್ವನಾಶ ಎಂದ ಉತ್ತರ ಕೊರಿಯಾ ಸರ್ಕಾರ.

ಪ್ಯೊಂಗ್ಯಾಂಗ್ (ಉತ್ತರ ಕೊರಿಯಾ), ಜುಲೈ 29: ಇಡೀ ಅಮೆರಿಕವನ್ನು ನಿಮಿಷಗಳಲ್ಲಿ ನಾಶ ಮಾಡುವ ಖಂಡಾಂತರ ಕ್ಷಿಪಣಿಯೊಂದನ್ನು ತಾನು ತಯಾರಿಸಿದ್ದು, ಇಡೀ ಅಮೆರಿಕವೇ ನಮ್ಮ ರೇಂಜ್ ನಲ್ಲಿ ಇದೆ ಎಂದು ಉತ್ತರ ಕೊರಿಯಾ, ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ಉತ್ತರ ಕೊರಿಯಾದ ಈ ಎಚ್ಚರಿಕೆಯು ಅಮೆರಿಕವನ್ನು ಕೆರಳಿಸಲಿದ್ದು, ಯಾವುದೇ ಕ್ಷಣದಲ್ಲಿ ಈ ಎರಡೂ ದೇಶಗಳ ನಡುವೆ ಯುದ್ಧ ಆರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಉತ್ತರ ಕೊರಿಯಾದ ಈ ಹೊಸ ಕ್ಷಿಪಣಿ 1100 ಕಿ.ಮೀ.ವರೆಗೂ ಸಾಗುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.

'All US' Within Range, Says North Korea's Kim Jong-Un After Missile Test

ಉಭಯ ರಾಷ್ಟ್ರಗಳ ನಡುವೆ ಹದಗೆಟ್ಟ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಈಗಾಗಲೇ ಎರಡೂ ದೇಶಗಳ ನಡುವೆ ಯುದ್ಧದ ಭೀತಿ ಆವರಿಸಿದೆ.

ಇದಕ್ಕೆ ಪೂರ್ವ ತಯಾರಿ ಎಂಬಂತೆ ಉತ್ತರ ಕೊರಿಯಾ ತನ್ನ ಕ್ಷಿಪಣಿ ಹಾಗೂ ಇನ್ನಿತರ ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ಕೆಲವಾರು ತಿಂಗಳುಗಳಿಂದಲೇ ಆರಂಭಿಸಿದೆ.

ಈ ಹಿನ್ನೆಲೆಯಲ್ಲಿ ತನ್ನ ಹೊಸ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿರುವ ಉತ್ತರ ಕೊರಿಯಾ ಸರ್ಕಾರ, ಅಮೆರಿಕಕ್ಕೆ ಖಡಕ್ ಎಚ್ಚರಿಕೆ ರವಾನಿಸಿದೆ.

ಇದಲ್ಲದೆ, ಈ ಬಗ್ಗೆ ಹೇಳಿಕೆ ನೀಡಿರುವ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜೊಂಗ್-ಉನ್ ಅವರು, ''ಉತ್ತರ ಕೊರಿಯಾದ ಯಾವುದೇ ಭಾಗದಲ್ಲಿ ನಿಂತು, ಯಾವುದೇ ಕ್ಷಣದಲ್ಲಿ ಈ ಕ್ಷಿಪಣಿ ಹಾರಿಬಿಟ್ಟರೂ, ಅಮೆರಿಕ ನಿಶ್ಯೇಷವಾಗುವುದು ಖಂಡಿತ'' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+