ಹಿಂದೂಗಳನ್ನು ಕೊಲ್ಲದಿರಿ, ಜಿಹಾದಿಗಳಿಗೆ ಅಲ್ ಖೈದಾ ಸಂದೇಶ
ಲಂಡನ್, ಸೆ 18: ಮುಸ್ಲಿಮೇತರರ ವಿರುದ್ದ ಅಲ್ ಖೈದಾ ಮುಖಂಡ ಅಚ್ಚರಿಯ ಹೇಳಿಕೆ ನೀಡಿದ್ದಾನೆ. ಮುಸ್ಲಿಂ ರಾಷ್ಟ್ರಗಳಲ್ಲಿ ಅಥವಾ ಮುಸ್ಲಿಮರು ಹೆಚ್ಚಾಗಿರುವ ರಾಜ್ಯಗಳಲ್ಲಿ ನಮ್ಮ ಕೋಮಿನ ಜೊತೆ ಇರುವವರ ವಿರುದ್ದ ಹಿಂಸಾಚಾರ ಬೇಡ ಎಂದು ಉಗ್ರ ಸಂಘಟನೆಯ ಮುಖಂಡ ಅಯ್ಮನ್ ಅಲ್ ಜವಾಹಿರಿ ಹಿತೋಪದೇಶ ನೀಡಿದ್ದಾನೆ.
ಕಾಶ್ಮೀರದಲ್ಲಿ ಹೋರಾಟ ಮುಂದುವರಿಸಿ ಆದರೆ ಅಲ್ಲಿರುವ ಮುಸ್ಲಿಮರು ಹಿಂದೂ, ಸಿಖ್, ಕ್ರಿಶ್ಚಿಯನ್ನರನ್ನು ಹತ್ಯೆ ಮಾಡದಿರಿ. ಮಹಿಳೆಯರು ಮತ್ತು ಮಕ್ಕಳನ್ನು ಗೌರವದಿಂದ ಕಾಣಿ. ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರ ಜೊತೆ ಇರುವವರನ್ನು ಕೊಲ್ಲಬೇಡಿ ಎಂದು ಜವಾಹಿರಿ ಹೇಳಿದ್ದಾನೆ.
ಇರಾಕ್, ಸಿರಿಯಾ, ಸೋಮಾಲಿಯಾ ಮತ್ತು ಅಫ್ಘಾನಿಸ್ತಾನದಲ್ಲಿ ಸಂಘರ್ಷ ಅನಿವಾರ್ಯವಾಗಿದೆ. ಪಾಕಿಸ್ತಾನದಲ್ಲಿ ಸಂಪೂರ್ಣ ಇಸ್ಲಾಂ ವ್ಯವಸ್ಥೆ ಇರುವುದರಿಂದ ಜಿಹಾದಿಗಳು ಅಲ್ಲಿ ಸುರಕ್ಷಿತ ನೆಲೆಯನ್ನು ಕಂಡುಕೊಳ್ಳಬಹುದು.
ಶತ್ರುಗಳು ಮಸೀದಿಯಲ್ಲಿ ಅಡಗಿ ಕೊಂಡಿದ್ದರೆ ಅಲ್ಲಿ ದಾಳಿ ನಡೆಸಬೇಡಿ ಎಂದು ತಾನಿರುವ ಅಡಗು ತಾಣದಿಂದ ಜಿಹಾದಿಗಳಿಗೆ ಜವಾಹಿರಿ ಸಂದೇಶ ರವಾನಿಸಿದ್ದಾನೆ. ಅಮೆರಿಕಾ ಮತ್ತು ಇಸ್ರೇಲಿನಲ್ಲಿ ನಮ್ಮ ಸಂಘಟನೆಯು ದುರ್ಭಲವಾಗುತ್ತಿದೆ ಎಂದೂ ಜವಾಹಿರಿ ಒಪ್ಪಿ ಕೊಂಡಿದ್ದಾನೆ. (Reuters)
ಜಿಹಾದಿಗಳಿಗೆ ಜವಾಹಿರಿ ಸಂದೇಶ ಸ್ಲೈಡಿನಲ್ಲಿ..

ಜವಾಹಿರಿ
SITE monitoring service ಗೆ ದಾಖಲೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಜವಾಹಿರಿ, ಅಮೆರಿಕಾದ ಮೇಲೆ ಸೆಪ್ಟಂಬರ್ 11 ದಾಳಿಯ 12 ವರ್ಷ ಪೂರೈಸಿದ ಸಂದರ್ಭದಲ್ಲಿ ನಾವು ನಮ್ಮ ಸಂಘಯನೆಯ ವ್ಯಾಪ್ತಿಯನ್ನು ಉತ್ತರ ಆಫ್ರಿಕಾದಿಂದ ಹಿಡಿದು ಹಿಂದೂಸ್ಥಾನದ ಕಾಶ್ಮೀರದ ವರೆಗೆ ಬೆಳೆಸುತ್ತೇವೆ.

ಪಾಕಿಸ್ತಾನ ಉತ್ತಮ ನೆಲೆ
ಪಾಕಿಸ್ತಾನದಲ್ಲಿ ಜಿಹಾದಿಗಳಿಗೆ ಉತ್ತಮ ನೆಲೆಯಿದೆ. ಅಲ್ ಖೈದಾ, ಮುಜಾಹಿದ್ದೀನ್ ಜಿಹಾದಿಗಳಿಗೆ ಅಲ್ಲಿ ರಕ್ಷಣೆಯಿದೆ. ಪಾಕಿಸ್ತಾನದ ಮುಸ್ಲಿಮರ ಮತ್ತು ಅಧಿಕಾರಿಗಳ ಬೆಂಬಲವೂ ನಮಗಿದೆ.

ಅರಬ್ಬರಿಂದ ಸಹಾಯ
ಅಫಘಾನಿಸ್ಥಾನ ಮತ್ತು ಇರಾಕಿನಲ್ಲಿ ನಾವು ದುರ್ಭಲರಾಗುತ್ತಿದ್ದಾಗ ಅರಬ್ಬರು ನಮಗೆ ಹೊಸ ಜೀವ ತುಂಬಿದರು. ಸಿರಿಯಾದಲ್ಲಿ ಅಧ್ಯಕ್ಷ ಬಶರ್ ಅಲ್ ಹಸದ್ ವಿರುದ್ದ ಹೋರಾಡುವವರು ನಮ್ಮ ಸಂಘಟನೆಯ ಬೆಂಬಲಿಗರು.

ಒಸಾಮಾ ಪಾಕಿಸ್ತಾನದಲ್ಲಿ
ನಮ್ಮ ನಾಯಕ ಒಸಾಮ ಬಿನ್ ಲಾಡೆನ್ ಮೇ 2011ರಲ್ಲಿ ಸಾವನ್ನಪ್ಪುವ ಮುನ್ನ ಪಾಕಿಸ್ತಾನದಲ್ಲೇ ಇದ್ದ. ಪಶ್ಚಿಮ ಆಫ್ರಿಕಾದಲ್ಲಿ ಜಿಹಾದಿಗಳು ನೆಲೆ ಕಂಡುಕೊಳ್ಳುತ್ತಿದ್ದಾರೆ. 1988ರಲ್ಲಿ ಅಫಘಾನಿಸ್ಥಾನ ದೇಶವು ಸೋವಿಯತ್ ಒಕ್ಕೂಟದ ಹಿಡಿತದಲ್ಲಿದ್ದಾಗ ಪಾಶ್ಚಿಮಾತ್ಯರ ವಿರುದ್ದ ಯುದ್ದ ಘೋಷಿಸಲು ನಿರ್ಧರಿಸಿದ್ದೆವು.

ಅಲ್ ಖೈದಾ
ಕಳೆದ ಸೆಪ್ಟಂಬರ್ 13ರಂದು ಜವಾಹಿರಿ ಈ ದಾಖಲೆ ಮತ್ತು ಸಂದೇಶವನ್ನು SITE ನಲ್ಲಿ ಪ್ರಕಟಿಸಿದ್ದಾನೆ. ಈಜಿಪ್ಟಿನಲ್ಲಿ ಜೆರುಸಲಂ ವಿರುದ್ದ ಹೋರಾಟ ಮುಂದುವರಿಯುತ್ತದೆ. JEWS ವಿರುದ್ದ ನಮ್ಮ ಹೋರಾಟ ಎಂದಿಗೂ ಇರುತ್ತದೆ. ಕೆಲವೊಂದು ಮುಸ್ಲಿಂ ಸಂಘಟನೆಯ ಜೊತೆ ಭಿನ್ನಾಭಿಪ್ರಾಯ ವಿದ್ದರೂ ಮುಸ್ಲಿಂ ವಿರೋಧಿಗಳ ವಿರುದ್ದ ನಾವು ಎಂದೂ ಒಗ್ಗಟ್ಟಾಗಿರುತ್ತೇವೆ ಎಂದಿದ್ದಾನೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications