ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ವಿರುದ್ಧ ಜಿಹಾದ್, ಯೆಮೆನ್ ಉಗ್ರ ಸಂಘಟನೆ ಅಲ್ ಖೈದಾ ಕರೆ

|
Google Oneindia Kannada News

ನವದೆಹಲಿ, ಮೇ 5: ಕೊರೊನಾ ವಿರುದ್ಧ ಹೋರಾಟ ನಡೆಸಿರುವ ಭಾರತದ ವಿರುದ್ಧ ಮುಸ್ಲಿಮರು ಜಿಹಾದ್ ನಡೆಸಬೇಕಿದೆ ಎಂದು ಅರಬ್ ಪ್ರಸ್ಥಭೂಮಿ(AQAP)ಭೂಮಿಯ ಯೆಮನ್ ಅಲ್ ಖೈದಾ ಉಗ್ರ ಸಂಘಟನೆ ಕರೆ ನೀಡಿದೆ. ಈ ಹಿಂದೆ ಕಾಶ್ಮೀರದಲ್ಲಿರುವ ಉಗ್ರರಿಗೆ ಭಾರತದ ವಿರುದ್ಧ ಸಮರ ಸಾರುವಂತೆ ಉಗ್ರ ಸಂಘಟನೆಯ ಮುಖ್ಯಸ್ಥ ಅಯ್ಮಾನ್ ಅಲ್ ಜವಾಹಿರಿ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಜಾಗತಿಕವಾಗಿ ನಿಷೇಧಕ್ಕೊಳಗಾಗಿರುವ ಯೆಮನ್ ನ ಅಲ್ ಖೈದಾ ಸಂಘಟನೆ ಪ್ರಕಾರ, ಮುಸ್ಲಿಮರ ವಿರುದ್ಧ ನಡೆದಿರುವ ಜಾಗತಿಕ ಸಮರದಲ್ಲಿ ಭಾರತವೂ ಕೈಜೋಡಿಸಿದೆ. ಭಾರತವನ್ನು ಇಸ್ಲಾಮೋಫೋಬಿಕ್ ಎಂದು ಕುವೈಟ್ ಸರ್ಕಾರ, ಅರಬ್ ಸಂಘಟನೆಗಳು, ಇಸ್ಲಾಮಿಕ್ ಕೋ ಆಪರೇಷನ್ ಆರ್ಗನೈಜೇಷನ್(ಒಐಸಿ) ಪರಿಗಣಿಸಿದೆ ಎಂದು ಅಲ್ ಖೈದಾ ಹೇಳಿದೆ.

ನಾಗರಿಕ ತಿದ್ದುಪಡಿ ಕಾಯ್ದೆ ಗೊಂದಲ, ತಬ್ಲಿಘಿ ಸಂಘಟನೆ ಮೇಲೆ ಆರೋಪ ಎಲ್ಲವೂ ಭಾರತವನ್ನು ಜಾಗತಿಕವಾಗಿ ಮುಸ್ಲಿಂ ದ್ವೇಷಿ ಎಂದು ತೋರಿಸಲು ಪಾಕಿಸ್ತಾನ ಹೂಡಿರುವ ತಂತ್ರವಾಗಿದೆ. ಇದಕ್ಕೆ ಪೂರಕವಾಗಿ ಅರಬ್ ಸಂಘಟನೆಗಳು ಭಾರತದ ವಿರುದ್ಧ ತಿರುಗಿ ಬಿದ್ದಿರುವುದನ್ನು ಕಾಣಬಹುದು.

Al Qaeda urges Muslims to wage jihad against India

ಅಮೆರಿಕದ ಟ್ವಿನ್ ಟವರ್ ಮೇಲೆ ಸೆಪ್ಟೆಂಬರ್ 11ರಂದು ದಾಳಿ ನಡೆಸಿದ ಅಲ್ ಖೈದಾ ಉಗ್ರ ಸಂಘಟನೆಯ ಪರಿವರ್ತಿತ ಗುಂಪಾಗಿ AQAP ಗುರುತಿಸಿಕೊಂಡಿದೆ. ಆದ್ರೆ, ಅಲ್ ಖೈದಾ ಸ್ಥಾಪಕ ಒಸಾಮಾ ಬಿನ್ ಲಾಡೆನ್ ಆಶಯದಂತೆ ನಡೆಯುತ್ತಿದ್ದು, ಈಜಿಪ್ಟಿನ ಡಾಕ್ಟರ್ ಆಯ್ಮಾನ್ ಅಲ್ ಜವಾಹಿರಿ ಸದ್ಯ ಯೆಮನ್ ಹಾಗೂ ಸೌದಿ ಅರೇಬಿಯಾದಿಂದ ಉಗ್ರ ಸಂಘಟನೆಗಳನ್ನು ಪ್ರೇರಿಸುತ್ತಿದ್ದಾನೆ. ಎಲ್ಲರೂ ಒಂದಾಗಿ ಶಸ್ತ್ರಾಸ್ತ್ರ ಹಿಡಿದು ಜಿಹಾದ್ ಮಾಡಲು ಮುಂದಾಗಿ ಎಂದು ಕರೆ ನೀಡಿದ್ದಾನೆ.

English summary
Yemen's Al Qaeda in Arab Peninsula (AQAP), the globally banned terrorist group, issued a statement accusing India of being part of a global war on Muslims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X