Air India flight: ಬಾಂಬ್ ಬೆದರಿಕೆ ಹಿನ್ನೆಲೆ- ಲಂಡನ್‌ನಲ್ಲಿ ಏರ್ ಇಂಡಿಯಾ ವಿಮಾನಕ್ಕೆ ಎಮರ್ಜನ್ಸಿ ಘೋಷಣೆ
Bomb Threat Air India: ಬಾಂಬ್ ಬೆದರಿಕೆ ಹಿನ್ನೆಲೆ ಏರ್ ಇಂಡಿಯಾ ಪ್ರಯಾಣಿಕರ ವಿಮಾನಕ್ಕೆ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ವಿಮಾನದಲ್ಲಿ ದೊಡ್ಡ ಮಟ್ಟದ ಸದ್ದು ಕೇಳಿಬಂದಿದೆ. ಏರ್ ಇಂಡಿಯಾ ವಿಮಾನವು ಮುಂಬೈನಿಂದ ಲಂಡನ್‌ಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಇಂದು ಐದು ಏರ್ ಇಂಡಿಯಾ ವಿಮಾನಗಳು, ಎರಡು ವಿಸ್ತಾರಾ ವಿಮಾನಗಳು ಮತ್ತು ಎರಡು ಇಂಡಿಗೋ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದವೆ ಎಂದು ವರದಿಯಾಗಿದೆ. ಈ ವಾರವಿಡೀ ವಿಮಾನಯಾನ ಸಂಸ್ಥೆಗಳಿಗೆ ಇದೇ ರೀತಿಯ ಕರೆಗಳು ಬರುತ್ತಲೇ ಇವೆ.

ಲಂಡನ್ ಬಳಿ ಇರುವ ವಿಮಾನಕ್ಕೆ ಸಾಮಾನ್ಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ. ಸ್ಕ್ವಾಕಿಂಗ್ 7700 ಕೋಡ್ ಅನ್ನು ಬಳಸಿ ಎಮರ್ಜನ್ಸಿಯನ್ನು ಘೋಷಿಸಲಾಗಿದೆ. ಸಾಮಾನ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲು ಪೈಲಟ್‌ಗಳು ಈ ಕೋಡ್ ಅನ್ನು ಬಳಸುತ್ತಾರೆ. ಆನ್‌ಲೈನ್ ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಆಗಿರುವ ಫ್ಲೈಟ್ ರೆಡಾರ್ 24 ಈ ಕುರಿತ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
ಏರ್ ಇಂಡಿಯಾ ಕಂಪನಿಯಿಂದ ನಿರ್ವಹಿಸಲ್ಪಡುವ ಬೋಯಿಂಗ್ 777 ಮುಂಬೈನಿಂದ 7 ಗಂಟೆ 5 ನಿಮಿಷಕ್ಕೆ ಟೇಕ್ ಆಫ್ ಆಗಿತ್ತು. ಇದು ಪೂರ್ವ ಇಂಗ್ಲಿಂಡ್ ಅನ್ನು ತಲುಪುತ್ತಿದ್ದಂತೆ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.
#AI129 from Mumbai to London is squawking 7700, indicating a general emergency. Reason currently unknown. https://t.co/vxipNBzfSO
— Flightradar24 (@flightradar24) October 17, 2024
More info on 'squawking 7700' here. https://t.co/CRoOOMhDKB pic.twitter.com/uadlHmvSEG
AI129 ಸಂಖ್ಯೆ ಹೊಂದಿರುವ ವಿಮಾನವು ತನ್ನ ನಿಗದಿತ ಲ್ಯಾಂಡಿಂಗ್‌ಗೆ ಒಂದು ಗಂಟೆ ಮೊದಲು ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಯನೈಟೈಡ್ ಕಿಂಗ್‌ಡಮ್ ಸಮಯದ ಪ್ರಕಾರ, ಮಧ್ಯಾಹ್ನ 12:05 ಕ್ಕೆ ಈ ವಿಮಾನವು ಲ್ಯಾಂಡಿಂಗ್ ಆಗಬೇಕಿತ್ತು. ಇತ್ತೀಚಿನ ಮಾಹಿತಿಯ ಪ್ರಕಾರ, ವಿಮಾನವು ಲಂಡನ್ ಹೀಥ್ರೂ ನಿಲ್ದಾನದಲ್ಲಿ ಸುರಕ್ಷಿತವಾಗಿ ಇಳಿಯಿತು.
ಈ ವಾರದಾದ್ಯಂತ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬರುತ್ತಲೇ ಇವೆ. ಏರ್ ಇಂಡಿಯಾಗೆ ಬಂದಿರುವ ಬೆದರಿಕೆಗಳು ಸತತ ನಾಲ್ಕನೇ ದಿನವೂ ಮುಂದುವರೆದಿದೆ. ಈ ಅವಧಿಯಲ್ಲಿ ಕನಿಷ್ಠ 20 ವಿಮಾನಗಳಿಗೆ ಬೆದರಿಕೆ ಕರೆಗಳು ಬಂದಿವೆ. ಇಂದು ಐದು ಏರ್ ಇಂಡಿಯಾ ವಿಮಾನಗಳ ಜೊತೆಗೆ ಎರಡು ವಿಸ್ತಾರಾ ಮತ್ತು ಎರಡು ಇಂಡಿಗೋ ವಿಮಾನಗಳಿಗೂ ಸಹ ಬೆದರಿಕೆ ಕರೆಗಳು ಬಂದಿವೆ.
ಸುಮಾರು 147 ಪ್ರಯಾಣಿಕರನ್ನು ಹೊತ್ತು ಫ್ರಾಂಕ್‌ಫರ್ಟ್‌ನಿಂದ ಮುಂಬೈಗೆ ಹೊರಟಿದ್ದ ವಿಸ್ತಾರಾ ವಿಮಾನಕ್ಕೂ ಬಾಂಬ್ ಕರೆಗಳು ಬಂದಿತ್ತು. ಇದು ಮುಂಬೈಗೆ ಆಗಮಿಸಿದ ಬಳಿಕ ಭದ್ರತಾ ತಪಾಸಣೆಗೆ ಒಳಪಡಿಸಲಾಯಿತು.
ಇದೇ ರೀತಿ ಇಸ್ತಾನ್‌ಬುಲ್‌ನಿಂದ ಮುಂಬೈಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೂ ಬಾಂಬ್ ಬೆದರಿಕೆ ಬಂದಿತ್ತು. ವಿಮಾನಯಾನ ಅಧಿಕಾರಿಗಳು ಸಂಪೂರ್ಣ ಭದ್ರತಾ ತಪಾಸಣೆಗಾಗಿ ಈ ವಿಮಾನವನ್ನು ಬೇರೆಡೆಗೆ ತೆಗೆದುಕೊಂಡು ಹೋಗಿದ್ದರ ಬಗ್ಗೆ ವರದಿಯಾಗಿತ್ತು.
ಇಸ್ತಾನ್‌ಬುಲ್‌ನಿಂದ ಮುಂಬೈಗೆ ಬರುತ್ತಿದ್ದ ವಿಮಾನವು ಭದ್ರತಾ ಅಧಿಕಾರಿಗಳಿಂದ ಎಚ್ಚರಿಕೆಯನ್ನು ಸ್ವೀಕರಿಸಿತ್ತು. ವಿಮಾನವು ಲ್ಯಾಂಡ್ ಆದ ನಂತರ ವಿಮಾನವನ್ನು ಪ್ರತ್ಯೇಕವಾಗಿ ಬೇರೆಡೆಗೆ ಸಾಗಿಸಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಇಂಡಿಗೋ ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.
ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ಕೇಂದ್ರ ಸರ್ಕಾರವು ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸಫಲವಾಗಿದೆ. ಬಾಂಬ್ ಬೆದರಿಕೆಯಂತಹ ಘಟನೆಗಳ ಕುರಿತು ಕೇಂದ್ರ ಗೃಹ ಸಚಿವಾಲಯವು ನಾಗರಿಕ ವಿಮಾನಯಾನ ಸಚಿವಾಲಯದಿಂದ ವಿವರವಾದ ವರದಿಯನ್ನು ಕೇಳಿದೆ.
ಬಾಂಬ್ ಬೆದರಿಕೆಗಳ ಕುರಿತು ಮಾಹಿತಿ ನೀಡುವಂತೆ ವಿಮಾನಯಾನ ಸಂಸ್ಥೆಗಳಿಗೂ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಮಾಹಿತಿಗಳ ಆಧಾರದ ಮೇಲೆ ನಾಗರಿಕ ವಿಮಾನಯಾನ ಸಚಿವಾಲಯವು ವರದಿಯನ್ನು ಸಂಗ್ರಹಿಸಲಿದೆ.
ಈ ಕುರಿತು ಹೇಳಿಕೆ ನೀಡಿರುವ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು, 'ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಕಟ್ಟುನಿಟ್ಟಿನ ಭದ್ರತೆಯನ್ನು ಕಾಪಾಡಿಕಲು ನಾವು ಬದ್ಧರಾಗಿದ್ದೇವೆ. ಪ್ರಯಾಣಿಕರ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ' ಎಂದು ಹೇಳಿದ್ದಾರೆ.












Click it and Unblock the Notifications