ಭಾರತದ ಆಕ್ರಮಣಕ್ಕೆ ಪ್ರತಿದಾಳಿ ಪಾಕಿಸ್ತಾನದ ಹಕ್ಕು: ಖುರೇಷಿ

ಇಸ್ಲಾಮಾಬಾದ್, ಫೆಬ್ರವರಿ 26: "ಭಾರತವು ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಮಾಡಿದ ಆಕ್ರಮಣಕ್ಕೆ ಪ್ರತಿದಾಳಿ ನಡೆಸುವ ಹಕ್ಕು ಪಾಕಿಸ್ತಾನಕ್ಕಿದೆ. ನಾವು ಸೂಕ್ತ ಉತ್ತರ ನೀಡುತ್ತೇವೆ" ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಹೇಳಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಬಾಲಾಕೋಟ್ ನಲ್ಲಿರುವ ಉಗ್ರ ನೆಲೆಗಳ ಮೇಲೆ ಮಂಗಳವಾರ ಬೆಳಗ್ಗಿನ ಜಾವ ಸುಮಾರು 3:30 ರ ಸುಮಾರಿಗೆ ಭಾರತ ದಾಳಿ ನಡೆಸಿತ್ತು. ಈ ವೈಮಾನಿಕ ದಾಳಿಯನ್ನು ಜೈಷ್ ಅಡಗುದಾಣವನ್ನೇ ಗುರಿಯಾಗಿಸಿಕೊಂಡು ಮಾಡಲಾಗಿತ್ತು.

ಜಮ್ಮು -ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಈ ಮೂಲಕ ಸೇಡು ತೀರಿಸಿಕೊಳ್ಳುತ್ತಿರುವ ಭಾರತದ ನಡೆ ಪಾಕಿಸ್ತಾನಕ್ಕೆ ಭೀತಿಯನ್ನುಂಟು ಮಾಡಿದ್ದು, ಇಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಚಿವ ಸಂಪುಟದ ತುರ್ತು ಸಭೆ ಕರೆದಿದ್ದಾರೆ.

After Indias attack, pakistan has a right to respond: Shah Mahmood Qureshi

"ಭಾರತ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದ್ದೇ ಆದರೆ ಅದಕ್ಕೆ ಪ್ರತಿಕ್ರಿಯೆ ನೀಡುವ ಹಕ್ಕು ಪಾಕಿಸ್ತಾನಕ್ಕಿದೆ. ಸ್ವರಕ್ಷಣೆಗಾಗಿ ಪಾಕಿಸ್ತಾನವೂ ಸೂಕ್ತ ಪ್ರತಿಕ್ರಿಯೆ ನೀಡಬೇಕಾಗುತ್ತದೆ" ಎಂದು ಖುರೇಷಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+