ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.31ರ ಬಳಿಕ ಕಾಬೂಲ್‌ ಏರ್‌ಪೋರ್ಟ್‌ ಉಸ್ತುವಾರಿ ನಮ್ಮದಲ್ಲ; ಅಮೆರಿಕ

|
Google Oneindia Kannada News

ಕಾಬೂಲ್, ಆಗಸ್ಟ್ 26; ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಉಸ್ತುವಾರಿಯನ್ನು ಆಗಸ್ಟ್ 31ರ ಬಳಿಕ ಅಮೆರಿಕ ನೋಡಿಕೊಳ್ಳುವುದಿಲ್ಲ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ. ಸ್ಥಳಾಂತರ ಕಾರ್ಯ ನಿಗದಿತ ಗಡುವಿನಲ್ಲೇ ಮುಗಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.

ಅಮೆರಿಕ ರಕ್ಷಣಾ ಇಲಾಖೆಯ ವಕ್ತಾರ ಜಾನ್ ಕಿರ್ಬೈ ಈ ಕುರಿತು ಮಾಹಿತಿ ನೀಡಿದ್ದಾರೆ, "ತಾಲಿಬಾನಿಗಳು ಕಾಬೂಲ್ ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲು ಕೇವಲ ಒಂದು ಮಾರ್ಗವಿದೆ" ಎಂದು ಹೇಳಿದ್ದಾರೆ.

 ತಾಲಿಬಾನ್ ನಾಯಕರೊಂದಿಗೆ ಅಮೆರಿಕ ಬೇಹುಗಾರಿಕೆ ಸಂಸ್ಥೆ ಮುಖ್ಯಸ್ಥರ ರಹಸ್ಯ ಸಭೆ ತಾಲಿಬಾನ್ ನಾಯಕರೊಂದಿಗೆ ಅಮೆರಿಕ ಬೇಹುಗಾರಿಕೆ ಸಂಸ್ಥೆ ಮುಖ್ಯಸ್ಥರ ರಹಸ್ಯ ಸಭೆ

"ತಾಲಿಬಾನಿಗಳು ತಮ್ಮ ಚೆಕ್‌ಪೋಸ್ಟ್‌ನಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಈ ಮೂಲಕ ವಿಮಾನ ನಿಲ್ದಾಣಕ್ಕೆ ಬರುವ ಜನರ ಗುಂಪನ್ನು ನಿಯಂತ್ರಣ ಮಾಡುತ್ತಿದ್ದಾರೆ. ಆಗಸ್ಟ್ 31ರ ಬಳಿಕ ನಿಲ್ದಾಣಕ್ಕೆ ಬರುವವರಿಗೆ ಮತ್ತಷ್ಟು ನಿರ್ಬಂಧ ಹೇರುವ ಸಾಧ್ಯತೆ ಇದೆ" ಎಂದು ಜಾನ್ ಕಿರ್ಬೈ ತಿಳಿಸಿದ್ದಾರೆ.

ಇವರೇ ನೋಡಿ ಇನ್ಮುಂದೆ ಅಫ್ಘಾನಿಸ್ತಾನ ಆಳುವ ತಾಲಿಬಾನ್ ನಾಯಕರು..!ಇವರೇ ನೋಡಿ ಇನ್ಮುಂದೆ ಅಫ್ಘಾನಿಸ್ತಾನ ಆಳುವ ತಾಲಿಬಾನ್ ನಾಯಕರು..!

"ವಿಮಾನ ನಿಲ್ದಾಣಕ್ಕೆ ಆಗಮಿಸಲು ಸಾವಿರಾರು ಜನರು ಆಗಮಿಸುತ್ತಿರುವುದನ್ನು ಈಗಲೂ ನಾವು ನೋಡುತ್ತಿದ್ದೇವೆ. ಆಗಸ್ಟ್ 31ರ ಬಳಿಕ ಅಮೆರಿಕ ಸೇನೆ ಕಾಬೂಲ್ ವಿಮಾನ ನಿಲ್ದಾಣದ ಉಸ್ತುವಾರಿಯನ್ನು ನೋಡಿಕೊಳ್ಳುವುದಿಲ್ಲ" ಎಂದು ಜಾನ್ ಕಿರ್ಬೈ ಸ್ಪಷ್ಟಪಡಿಸಿದರು.

 ಹಿಂಸಾಚಾರ ಅಂತ್ಯಕ್ಕೆ ತಾಲಿಬಾನ್‌ ಜೊತೆ ಅಧಿಕಾರ ಹಂಚಿಕೆಗೆ ಮುಂದಾದ ಅಫ್ಘಾನಿಸ್ತಾನ? ಹಿಂಸಾಚಾರ ಅಂತ್ಯಕ್ಕೆ ತಾಲಿಬಾನ್‌ ಜೊತೆ ಅಧಿಕಾರ ಹಂಚಿಕೆಗೆ ಮುಂದಾದ ಅಫ್ಘಾನಿಸ್ತಾನ?

"ಅಮೆರಿಕದ ರಾಯಭಾರ ಕಚೇರಿ ಈಗ ವಿಮಾನ ನಿಲ್ದಾಣದಿಂದ ಕಾರ್ಯ ನಿರ್ವಹಣೆ ಮಾಡುತ್ತಿದೆ. ತಾಲಿಬಾನಿಗಳು ಸರ್ಕಾರ ರಚನೆಯ ಪ್ರಯತ್ನದಲ್ಲಿದ್ದು, ಅವರೇ ಕಾಬೂಲ್ ವಿಮಾನ ನಿಲ್ದಾಣದ ನಿರ್ವಹಣೆ ನೋಡಿಕೊಳ್ಳಬೇಕು" ಎಂದು ಜಾನ್ ಕಿರ್ಬೈ ಹೇಳಿದ್ದಾರೆ.

ದೇಶ ತೊರೆಯುವವರ ಸಂಖ್ಯೆ ಹೆಚ್ಚಳ

ದೇಶ ತೊರೆಯುವವರ ಸಂಖ್ಯೆ ಹೆಚ್ಚಳ

"ತಾಲಿಬಾನಿಗಳ ಮುಂದಿನ ಕಾರ್ಯತಂತ್ರ, ಉದ್ದೇಶದ ಬಗ್ಗೆ ನಾನು ಮಾತನಾಡಲಾರೆ. ಆದರೆ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಮೆರಿಕ ವಿಮಾನ ನಿಲ್ದಾಣ ಬಿಟ್ಟು ಹೊರಡಲಿದೆ. ಬಳಿಕ ಅದರ ಉಸ್ತುವಾರಿ ಅವರ ಜವಾಬ್ದಾರಿಯಾಗಿದೆ" ಎಂದು ಜಾನ್ ಕಿರ್ಬೈ ತಿಳಿಸಿದ್ದಾರೆ.

ಅಮೆರಿಕದ ನೇತೃತ್ವದಲ್ಲಿ ನಡೆಯುತ್ತಿರುವ ಸ್ಥಳಾಂತರ ಪ್ರಕ್ರಿಯೆ ಆಗಸ್ಟ್ 31ರ ಗಡುವಿನೊಳಗೆ ಪೂರ್ಣಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಈ ಬಳಿಕ ವಿಮಾನ ನಿಲ್ದಾಣದತ್ತ ಆಗಮಿಸುವವರ ಸಂಖ್ಯೆಯೂ ಹೆಚ್ಚಿದೆ. ತಾಲಿಬಾನ್ ವಶದಲ್ಲಿರುವ ದೇಶದಿಂದ ಸ್ಥಳಾಂತರಗೊಳ್ಳಲು ಸಾವಿರಾರು ಜನರು ಬಯಸಿದ್ದು ಅವರು ವಿಮಾನ ನಿಲ್ದಾಣದತ್ತ ಆಗಮಿಸುತ್ತಿದ್ದಾರೆ. ತಾಲಿಬಾನ್ ಪ್ರತೀಕಾರ, ದಮನಕಾರಿ ನೀತಿಯನ್ನು ಅನುಸರಿಸಲಿದೆ ಎಂಬುದನ್ನು ತಿಳಿದ ಜನರು ದೇಶ ತೊರೆಯಲು ಹಾತೊರೆಯುತ್ತಿದ್ದಾರೆ.

ಗಡುವು ವಿಸ್ತರಣೆ ಮಾಡುವುದಿಲ್ಲ

ಗಡುವು ವಿಸ್ತರಣೆ ಮಾಡುವುದಿಲ್ಲ

"ನಾವು ಸ್ಥಳಾಂತರ ಪ್ರಕ್ರಿಯೆಯನ್ನು ವೇಗಗೊಳಿಸಿದ್ದು ಆಗಸ್ಟ್ 31ರ ಗಡುವಿನೊಳಗೆ ಪೂರ್ಣಗೊಳಿಸಲಿದ್ದೇವೆ. ಈ ಕಾರ್ಯಾಚರಣೆ ನಿತ್ಯ ನಮ್ಮ ಸೈನಿಕರಿಗೆ ಅಪಾಯವನ್ನು ತಂದೊಡ್ಡುತ್ತಿದೆ" ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಕಾಬೂಲ್‌ನ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉಸ್ತುವಾರಿಯನ್ನು ಸದ್ಯ ಅಮೆರಿಕ ಮತ್ತು ನ್ಯಾಟೋ ಪಡೆ ನೋಡಿಕೊಳ್ಳುತ್ತಿದೆ. ಅಮೆರಿಕ 5,800 ಸೈನಿಕರನ್ನು ವಿಮಾನ ನಿಲ್ದಾಣದಲ್ಲಿ ಭದ್ರತೆ ಮತ್ತು ಸ್ಥಳಾಂತರ ಪ್ರಕ್ರಿಯೆಯ ಜವಾಬ್ದಾರಿಗಾಗಿ ನೇಮಕ ಮಾಡಿದೆ.

ಭಾರತಕ್ಕೆ ಬರಲು ಇ-ವೀಸಾ ಕಡ್ಡಾಯ

ಭಾರತಕ್ಕೆ ಬರಲು ಇ-ವೀಸಾ ಕಡ್ಡಾಯ

ಅಫ್ಘಾನಿಸ್ತಾನದ ಪ್ರಜೆಗಳು ಭಾರತಕ್ಕೆ ಬರಲು ಇ-ವೀಸಾ ಹೊಂದಿರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವಾಲಯ ಈ ಕುರಿತು ತೀರ್ಮಾನವನ್ನು ಕೈಗೊಂಡಿದೆ. ಈಗಾಗಲೇ ಕೇಂದ್ರ ಸರ್ಕಾರ ಹೊಸದಾದ ಇ-ತುರ್ತು ಎಕ್ಸ್-ಮಿಸ್ಕ್ ವೀಸಾವನ್ನು ಪರಿಚಯಿಸಿದೆ. ಭಾರತಕ್ಕೆ ಪ್ರಯಾಣ ಬೆಳೆಸಲು ಆಸಕ್ತಿ ಹೊಂದಿರುವ ಅಫ್ಘಾನಿಸ್ತಾನದ ಪ್ರಜೆಗಳು ಇ-ವೀಸಾ ಪಡೆಯಲು ಅರ್ಜಿಗಳನ್ನು ಸಹ ಸಲ್ಲಿಕೆ ಮಾಡಬಹುದಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ವೀಸಾ ಅವಧಿ 6 ತಿಂಗಳು ಮಾತ್ರ

ವೀಸಾ ಅವಧಿ 6 ತಿಂಗಳು ಮಾತ್ರ

ಅಫ್ಘಾನಿಸ್ತಾನದಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಮುಚ್ಚಲಾಗಿದೆ. ದೆಹಲಿಯಲ್ಲಿರುವ ಕಚೇರಿ ಮೂಲಕ ವೀಸಾ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಫ್ಘಾನಿಸ್ತಾನದ ಯಾವುದೇ ಧರ್ಮದವರು ಇ-ತುರ್ತು ಎಕ್ಸ್-ಮಿಸ್ಕ್ ವೀಸಾ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದು. ಆದರೆ ವೀಸಾದ ಅವಧಿ ಕೇವಲ ಆರು ತಿಂಗಳು ಆಗಿರುತ್ತದೆ. ಭಾರತದ ವೀಸಾವನ್ನು ಪಡೆದು ದೇಶದಲ್ಲಿ ಇಲ್ಲದ ಎಲ್ಲಾ ಅಫ್ಘಾನಿಸ್ತಾನದ ಪ್ರಜೆಗಳ ವೀಸಾವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.

English summary
Pentagon press secretary John Kirby said after August 31 it would not be the responsibility of the US to manage the Kabul airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X