• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

22 ವರ್ಷಗಳ ನಂತರ ಇಂಡೋ-ಪಾಕ್ ಗಡಿಯಲ್ಲಿ ರೈಲು ಸಂಚಾರ

|

ಇಸ್ಲಮಾಬಾದ್, ಡಿಸೆಂಬರ್.15: ಇಂಡೋ-ಪಾಕಿಸ್ತಾನ ಗಡಿ ಎಂದರೆ ಕೇವಲ ಗುಂಡಿನ ಮೊರೆತ, ಉಗ್ರರ ಅಟ್ಟಹಾಸ, ಬಾಂಬ್ ದಾಳಿ, ಶೆಲ್ ದಾಳಿಯದ್ದೇ ಸದ್ದು ಕೇಳಿ ಬರುತ್ತದೆ. ಆದರೆ, ಇದೀಗ ಈ ಗಡಿಪ್ರದೇಶವು ಒಂದೊಳ್ಳೆ ವಿಚಾರಕ್ಕೆ ಸುದ್ದಿಯಾಗಿದೆ.

22 ವರ್ಷಗಳ ನಂತರ ಪಾಕಿಸ್ತಾನದ ಲಾಹೋರ್ ಹಾಗೂ ವಾಘಾ ಗಡಿಗೆ ರೈಲು ಸಂಚಾರ ಡಿಸೆಂಬರ್.15ರ ಭಾನುವಾರದಿಂದ ಆರಂಭವಾಗಿದೆ. ದಿನನಿತ್ಯ ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಇದೀಗ ಹಸಿರು ನಿಶಾನೆ ತೋರಲಾಗಿದೆ.

ಪಾಕಿಸ್ತಾನ್ ಉಗ್ರರಿಗೆ ಇವನೇ ಅನ್ನ-ನೀರು ಕೊಡುವುದು

ದಿನವೊಂದಕ್ಕೆ ಮೂರು ಬಾರಿ ಈ ಮಾರ್ಗದಲ್ಲಿ ರೈಲು ಸಂಚರಿಸಲಿದ್ದು, ಇದರಿಂದ ನಿತ್ಯ 1 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಸಹಾಯವಾಗಲಿದೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.

ಲಾಹೋರ್-ವಾಘಾ ರೈಲು ಸಂಚಾರಕ್ಕೆ ಪಾಕಿಸ್ತಾನ ರೈಲ್ವೆ ಸಚಿವ ರಶೀದ್ ಶೇಖ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಲಾಹೋರ್ ಜೊತೆ ಸುತ್ತಮುತ್ತಲಿನ ನಗರ ಪ್ರದೇಶಗಳಿಗೆ ನಂಟು ಬೆಸೆಯುವ ಉದ್ದೇಶದಿಂದ ಈ ರೈಲ್ವೆ ಸಂಚಾರವನ್ನು ಆರಂಭಿಸಲಾಗಿದೆ ಎಂದರು. ಜೊತೆಗೆ ಮುಂದಿನ 15 ದಿನಗಳಲ್ಲಿ ಲಾಹೋರ್-ರೈವಿಂದ್ ನಡುವೆ ರೈಲ್ವೆ ಸಂಚಾರವನ್ನು ಪುನರ್ ಆರಂಭಿಸುವುದಾಗಿ ಹೇಳಿದರು.

ಇದಕ್ಕೂ ಮೊದಲು ಈ ಹಿಂದೆ 1997ರ ವೇಳೆಯಲ್ಲಿ ಲಾಹೋರ್ ಹಾಗೂ ವಾಘಾ ನಡುವೆ ರೈಲು ಸಂಚಾರ ಸುಗಮವಾಗಿತ್ತು. ಆದರೆ, ಕೆಲವು ರಕ್ಷಣಾ ಕಾರಣಗಳಿಂದಾಗಿ ಕಳೆದ 22 ವರ್ಷಗಳಿಂದ ಈ ಎರಡು ಮಾರ್ಗಗಳ ನಡುವೆ ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

English summary
After 22 Years Lahore-Wagah Train Service Resumes. Pakistan Railway Minister Sheikh Rashid Inaugurate The Train Service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X