ಕಾಬೂಲ್‌ನಲ್ಲಿ ಒಂದು ಬಾಟಲಿ ನೀರು, ಒಂದು ಊಟದ ಬೆಲೆ ಎಷ್ಟು?

ಕಾಬೂಲ್, ಆಗಸ್ಟ್ 26: ತಾಲಿಬಾನಿಗಳಿಂದ ಬಚಾವಾಗಿ ಜೀವ ಉಳಿಸಿಕೊಳ್ಳಲು ಅಫ್ಘಾನಿಗಳು ದೇಶವನ್ನು ತೊರೆಯುತ್ತಿದ್ದಾರೆ.

ಆದರೆ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, 3 ಸಾವಿರ ರೂ ನೀಡಿ ಒಂದು ಬಾಟಲಿ ನೀರು ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅಪ್ಘಾನಿಸ್ತಾನ ತಾಲಿಬಾನಿಗಳ ವಶವಾಗುತ್ತಿದ್ದಂತೆ ದೇಶವನ್ನೇ ತೊರೆಯಲು ಜನ ಮುಂದಾಗಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ತಮ್ಮ ಸರಿದಿಗಾಗಿ ಕಾಯುತ್ತಿದ್ದಾರೆ.

ಈ ನಡುವೆ ಕಾಬೂಲ್ ವಿಮಾನನಿಲ್ದಾಣ ತಲುಪಿರುವ ಜನರಿಗೆ ಮೂರು ಸಾವಿರ ರೂಪಾಯಿಗಳನ್ನು ನೀಡಿ ಒಂದು ಬಾಟಲ್ ನೀರು ಖರೀದಿಸುವ ಕಠಿಣ ಪರಿಸ್ಥಿತಿಯು ಎದುರಾಗಿದೆ. ಇತ್ತ ಒಂದು ಪ್ಲೇಟ್ ಊಟಕ್ಕೆ 7,500 ರೂ ಕೊಡಬೇಕು.

ಹೇಗಾದರೂ ಮಾಡಿ ಇಲ್ಲಿಂದ ಹೋದರೆ ಸಾಕು ಎನ್ನುತ್ತಿರುವ ಜನರು ಅನಿವಾರ್ಯವಾಗಿ ಇಷ್ಟು ಹಣವನ್ನು ನೀಡಿ ಊಟ ಖರೀದಿಸುತ್ತಿದ್ದಾರೆ. ಆದರೆ ಮಧ್ಯಮ ವರ್ಗದ ಜನರ ಸ್ಥಿತಿ ಆ ದೇವರಿಗೆ ಪ್ರೀತಿ ಎಂಬಂತಾಗಿದೆ.

ಮತ್ತೊಂದು ಕಡೆ ವಿಮಾನ ಏರುವ ತಮ್ಮ ಸರದಿಗಾಗಿ ಕಾಯುತ್ತಿರುವ ಜನರ ಸಹಾಯಕ್ಕೆ ಅಮೆರಿಕ ಸೈನಿಕರು ಮುಂದಾಗಿದ್ದು, ಆಹಾರದ ಪೊಟ್ಟಣಗಳನ್ನು ಇವರು ವಿತರಿಸುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ನೀರು ಮತ್ತು ಆಹಾರ ಮಾರಾಟ ಮಾಡಲಾಗುತ್ತಿದೆ.

ಆರ್ಥಿಕವಾಗಿ ಸಶಕ್ತರಾಗಿರುವವರು ಹಣವನ್ನು ನೀಡಿ ಖರೀದಿಸುತ್ತಿದ್ದಾರೆ. ಇನ್ನು ಕೆಲವು ಮಾರಾಟಗಾರರು ಡಾಲರ್ ನೀಡಿದ್ರೆ ಮಾತ್ರ ಆಹಾರ ನೀಡುತ್ತಿದ್ದಾರೆ. ಕೆಲವರು ಆಹಾರವಿಲ್ಲದೇ ಕುಳಿತಲ್ಲಿಯೇ ಕುಸಿದು ಬೀಳುತ್ತಿರುವ ಬಗ್ಗೆ ಕೂಡ ವರದಿಯಾಗಿವೆ. ದೇಶವನ್ನು ವಶಕ್ಕೆ ಪಡೆದ ತಾಲಿಬಾನಿಗಳು ಪ್ರಜೆಗಳ ಮೇಲೆ ಹಲ್ಲೆಯನ್ನು ನಡೆಸುತ್ತಿದ್ದಾರೆ.

ಇದು ಮಾತ್ರವಲ್ಲ, ಅಂಗಡಿಯವರು ಅಫಘಾನ್ ಕರೆನ್ಸಿಯ ಬದಲಾಗಿ ಡಾಲರ್‌ಗಳನ್ನು ಬೇಡುತ್ತಿದ್ದಾರೆ. ಅಮೆರಿಕನ್ ಮತ್ತು ಬ್ರಿಟಿಷ್ ಸೈನಿಕರು ಅಫ್ಘನ್ನರಿಗೆ ಸಹಾಯ ಮಾಡುತ್ತಿದ್ದರೂ, ಪ್ರತಿಯೊಬ್ಬ ವ್ಯಕ್ತಿಗೂ ಆಹಾರ ಮತ್ತು ನೀರನ್ನು ಪಡೆಯುವುದು ಕಷ್ಟಕರವಾಗಿದೆ.

ವಿಮಾನ ನಿಲ್ದಾಣದ ಹೊರಗೆ ಆಹಾರ ಮತ್ತು ಪಾನೀಯ ವಸ್ತುಗಳನ್ನು ಹಲವು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

 ವಿಮಾನ ನಿಲ್ದಾಣ ತಲುಪದಂತೆ ತಡೆದರು

ವಿಮಾನ ನಿಲ್ದಾಣ ತಲುಪದಂತೆ ತಡೆದರು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಕ್ರೌರ್ಯ ಮೆರೆಯುತ್ತಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ತಾಲಿಬಾನ್ ನಿಂದ ಹೆಚ್ಚು ಕಿರುಕುಳಕ್ಕೊಳಗಾಗುತ್ತಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಅಮೆರಿಕ ಮತ್ತು ಬ್ರಿಟನ್‌ನ ಸೈನಿಕರು ಇದ್ದರೂ, ಅದನ್ನು ಹೊರಗಿನಿಂದ ತಾಲಿಬಾನ್‌ಗಳು ಸುತ್ತುವರಿದಿದ್ದಾರೆ. ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ತಾಲಿಬಾನ್ ಹೋರಾಟಗಾರರು ಕೂಡ ಇದ್ದಾರೆ. ಅವರು ಜನರನ್ನು ವಿಮಾನ ನಿಲ್ದಾಣ ತಲುಪದಂತೆ ತಡೆಯುತ್ತಿದ್ದಾರೆ ಮತ್ತು ಅಲ್ಲಿಗೆ ತಲುಪಿದವರಿಗೂ ಬೆದರಿಕೆ ಹಾಕಲಾಗುತ್ತಿದೆ ಎಂದು ವರದಿಯಾಗಿದೆ. ನೀವು ಅಮೆರಿಕದಿಂದ ಸಹಾಯ ಪಡೆಯುವ ಮೂಲಕ ಸಮುದಾಯವನ್ನು ಏಕೆ ಅಪಖ್ಯಾತಿಗೊಳಿಸುತ್ತಿದ್ದೀರಿ? ಎಂದು ಭಯೋತ್ಪಾದಕರು ಜನರಿಗೆ ಹೇಳುತ್ತಿದ್ದಾರೆ.

 ಡಾಲರ್‌ನಲ್ಲಿ ಪಾವತಿಸಬೇಕು

ಡಾಲರ್‌ನಲ್ಲಿ ಪಾವತಿಸಬೇಕು

ಕಾಬೂಲ್ ವಿಮಾನ ನಿಲ್ದಾಣದ ಹೊರಗೆ, ನೀರಿನ ಬಾಟಲಿಯನ್ನು $ 40 ಕ್ಕೆ ಅಂದರೆ ಸುಮಾರು 3000 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ, ಒಂದು ಪ್ಲೇಟ್ ಅನ್ನದ ಬೆಲೆ $ 100 ಕ್ಕೆ ಏರಿದೆ. ಇದು ಭಾರತೀಯ ಕರೆನ್ಸಿಯ ಪ್ರಕಾರ ಸುಮಾರು 7500 ರೂಪಾಯಿಗಳು. ಅತ್ಯಂತ ಅಚ್ಚರಿಯ ವಿಷಯವೆಂದರೆ ಅಂಗಡಿಯವರು ಅಫ್ಘಾನಿಸ್ತಾನದ ಕರೆನ್ಸಿಗೆ ಬದಲಾಗಿ ಡಾಲರ್‌ಗಳಲ್ಲಿ ಪಾವತಿ ಮಾಡಲು ಬೇಡಿಕೆ ಇಟ್ಟಿದ್ದಾರೆ.

 ಸೇನೆಯಿಂದ ಜನಸಾಮಾನ್ಯರಿಗೆ ಸಹಾಯ

ಸೇನೆಯಿಂದ ಜನಸಾಮಾನ್ಯರಿಗೆ ಸಹಾಯ

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ನೆರೆದಿದ್ದು,ಅಮೆರಿಕ, ಭಾರತ ಸೇರಿದಂತೆ ಹಲವು ದೇಶಗಳಿಗೆ ಹೋಗಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಅವರಿಗೆ ಜೀವ ಉಳಿಸಿಕೊಳ್ಳುವುದೇ ದೊಡ್ಡ ಪ್ರಶ್ನೆಯಾಗಿದೆ.

ಸೈನಿಕರು ವಿಮಾನ ನಿಲ್ದಾಣದ ಬಳಿ ತಾತ್ಕಾಲಿಕ ಮನೆಗಳನ್ನು ನಿರ್ಮಿಸುವ ಮೂಲಕ ನಿವಾಸಿಗಳಿಗೆ ನೀರಿನ ಬಾಟಲಿಗಳು ಮತ್ತು ಆಹಾರವನ್ನು ನೀಡುತ್ತಿದ್ದಾರೆ. ಇದಲ್ಲದೇ, ಸೈನಿಕರು ಅಫ್ಘಾನಿಸ್ತಾನದ ಚಿಕ್ಕ ಮಕ್ಕಳಿಗೆ ಚಿಪ್ಸ್ ಪ್ಯಾಕೆಟ್ಗಳನ್ನು ವಿತರಿಸುವ ದೃಶ್ಯಗಳು ಕಂಡು ಬರುತ್ತಿವೆ.
ಇದರ ಹೊರತಾಗಿಯೂ, ತಾಲಿಬಾನ್ ಅವರಿಗೆ ಸಹಾಯ ಮಾಡುವ ಬದಲು ಅವರ ಸಂಕಷ್ಟವನ್ನು ಹೆಚ್ಚಿಸಿದೆ. ಈ ಕಷ್ಟದ ಸಮಯದಲ್ಲಿ ಅಮೆರಿಕ ಮತ್ತು ಬ್ರಿಟಿಷ್ ಸೈನಿಕರು ಆಫ್ಘನ್ನರಿಗೆ ಸಹಾಯ ಮಾಡುತ್ತಿದ್ದಾರೆ.
 ಕೆಲವೇ ದಿನಗಳಲ್ಲಿ ಮಿಷನ್ ಹೇಗೆ ಪೂರ್ಣಗೊಳ್ಳುತ್ತದೆ?

ಕೆಲವೇ ದಿನಗಳಲ್ಲಿ ಮಿಷನ್ ಹೇಗೆ ಪೂರ್ಣಗೊಳ್ಳುತ್ತದೆ?

ಅಫ್ಘಾನಿಸ್ತಾನದ 2.5 ಲಕ್ಷ ಜನರು ತಾಲಿಬಾನ್‌ನಿಂದ ಹೆಚ್ಚು ಅಪಾಯದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಕೇವಲ 60 ಸಾವಿರ ಜನರು ಅದರ ಹಿಡಿತದಿಂದ ಪಾರಾಗಲು ಸಾಧ್ಯವಾಗಿದೆ. ಆಗಸ್ಟ್ 31 ರೊಳಗೆ ಕಾಬೂಲ್ ನಿಂದ ಹೊರಹೋಗುವಂತೆ ವಿದೇಶಿ ಪಡೆಗಳಿಗೆ ತಾಲಿಬಾನ್ ಆದೇಶಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಕೆಲವೇ ದಿನಗಳಲ್ಲಿ ಸುಮಾರು 2 ಲಕ್ಷ ಜನರನ್ನು ಅಲ್ಲಿಂದ ಸ್ಥಳಾಂತರಿಸುವುದು ಕಷ್ಟ. ಅಮೆರಿಕ ಕಳೆದ ಹತ್ತು ದಿನಗಳಲ್ಲಿ 70,700 ಜನರನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಿದೆ. ಆದರೂ ಹೆಚ್ಚಿನ ಸಂಖ್ಯೆಯ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇನ್ನೂ ಸಿಲುಕಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+