ಅಫ್ಘಾನಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ, 35 ಮಂದಿ ಸಾವು

Posted By:
Subscribe to Oneindia Kannada

ಕಂದಹಾರ್, ಸೆ. 04: ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿರುವ ಜಬುಲ್ ಪ್ರಾಂತ್ಯದಲ್ಲಿ ಭಾನುವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕನಿಷ್ಠ 35 ಮಂದಿ ಸಾವನ್ನಪ್ಪಿದ್ದಾರೆ. ಬಸ್ ಹಾಗೂ ಇಂಧನ ಟ್ಯಾಂಕರ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ 35 ಮಂದಿ ಮೃತಪಟ್ಟಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಕಂದಹಾರ್​ನಿಂದ ಕಾಬೂಲ್​ಗೆ ತೆರಳುತ್ತಿದ್ದ ಬಸ್ಸಿಗೆ ಇಂಧನ ಟ್ಯಾಂಕಿಗೆ ಜಬುಲ್ ಪ್ರಾಂತ್ಯದ ಜಿಲ್ದಕ್ ಬಳಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ.

Afghan road crash inferno leaves 35 dead

ಮಹಿಳೆಯರು, ಮಕ್ಕಳು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದ್ದಾರೆ. 20 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದ್, ಎಲ್ಲರ ಸ್ಥಿತಿ ಗಂಭೀರವಾಗಿದೆ ಎಂದು ಜಬುಲ್ ಪ್ರಾಂತ್ಯದ ಗವರ್ನರ್ ಬಿಸ್ಮಿಲ್ಲಾ ಅಫ್ಘನ್​ವಾಲ್ ಹೇಳಿದ್ದಾರೆ.

ತಾಲಿಬಾನಿ ಉಗ್ರರು ಸಕ್ರಿಯವಾಗಿರುವ ಕಂದಹಾರ್ ಮತ್ತು ಕಾಬೂಲ್ ನಡುವಿನ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಪ್ರದೇಶದಲ್ಲಿ ವಾಹನಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯ ಸಂಗತಿಯಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಬಸ್​ಗಳ ಚಾಲಕರು ಅತಿ ವೇಗದಲ್ಲಿ ಬಸ್ ಚಲಾಯಿಸುವ ಮೂಲಕ ಉಗ್ರರ ದಾಳಿಯಿಂದ ಪಾರಾಗಲು ಯತ್ನಿಸುತ್ತಾರೆ.

ಕಳೆದ ಮೇ ತಿಂಗಳಿನಲ್ಲಿ ಎರಡು ಪ್ಯಾಸೇಂಜರ್ ಬಸ್ ಗಳು ಡಿಕ್ಕಿ ಹೊಡೆದ ಪರಿಣಾಮ 73 ಮಂದಿ ಸಾವನ್ನಪ್ಪಿದ್ದರು. ಪೂರ್ವ ಘಜನಿ ಪ್ರಾಂತ್ಯದಲ್ಲಿ ಈ ದುರ್ಘಟನೆ ನಡೆದಿತ್ತು. ವಿಶ್ವದ ಅಪಾಯಕಾರಿ ಹೆದ್ದಾರಿಗಳಲ್ಲಿ ಜುಬುಲ್ ಪಾಂತ್ರ್ಯದ ಹೆದ್ದಾರಿಯೂ ಒಂದೆನಿಸಿದೆ. (ಎಎಫ್ ಪಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At least 35 people were killed on Sunday when a passenger bus collided with a fuel tanker and burst into flames in southern Afghanistan, in the latest road accident in the war-torn country.
Please Wait while comments are loading...