ಮೆಕ್ಸಿಕೋದಲ್ಲಿ ಶತಮಾನದ ಭೀಕರ ಭೂಕಂಪ: 61 ಕ್ಕೇರಿದ ಸಾವಿನ ಸಂಖ್ಯೆ
ಮೆಕ್ಸಿಕೋ, ಸೆಪ್ಟೆಂಬರ್ 9: ಮೆಕ್ಸಿಕೋದ ದಕ್ಷಿಣ ಕರಾವಳಿಯಲ್ಲಿ ಸೆ.7 ರಂದು ಸಂಭವಿಸಿದ ಭೀಕರ ಭೂಕಂಪದಲ್ಲಿ ಮಡಿದವರ ಸಂಖ್ಯೆ 61 ಕ್ಕೇರಿದೆ.
ಮೆಕ್ಸಿಕೋ ಕಾಲಮಾನದ ಪ್ರಕಾರ ಸೆ.7 ರಾತ್ರಿ 9:49 ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 8.2 ತೀವ್ರತೆ ದಾಖಲಾಗಿತ್ತು.

ಈ ಭೂಕಂಪ ಶತಮಾನದೀಚೆಗೆ ಮೆಕ್ಸಿಕೋ ಕಂಡ ಅತ್ಯಂತ ಭೀಕರ ಭೂಕಂಪವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಂಭವವಿದೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಎಲ್ಲೆಲ್ಲೂ ಕಟ್ಟಡಗಳು ಕುಸಿದು ಬಿದ್ದಿದ್ದು, ಅವಶೇಷಗಳ ಕೆಳಗೆ ಎಷ್ಟು ಜನ ಸಿಲುಕಿದ್ದಾರೆಂಬ ಕುರಿತು ಮಾಹಿತಿಯಿಲ್ಲ. ಆದ್ದರಿಂದ ಸಾವಿನ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಕಷ್ಟ ಎಂದು ಇಲ್ಲಿನ ಮಾಧ್ಯಮಗಳು ಹೇಳಿವೆ.
1985 ರಲ್ಲಿ ಮೆಕ್ಸಿಕೋದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 10,000 ಕ್ಕೂ ಹೆಚ್ಚು ಜನ ಮೃತರಾಗಿದ್ದರು. ಆ ದುರ್ಘಟನೆಯ ನಂತರ ಮೆಕ್ಸಿಕೋ ಕಂಡ ಅತ್ಯಂತ ಬೀಕರ ಭೂಕಂಪ ಇದಾಗಿದೆ.












Click it and Unblock the Notifications