ಒಡತಿ ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಿದ ನಿಯತ್ತಿನ ನಾಯಿ!
ಲಂಡನ್, ನವೆಂಬರ್ 04: ಕಾಮುಕನೊಬ್ಬನಿಂದ ಅತ್ಯಾಚಾರಕ್ಕೊಳಗಾಗುತ್ತಿದ್ದ ತನ್ನ ಒಡತಿಯನ್ನು ಕಾಪಾಡುವ ಮೂಲಕ ನಾತು ನಿಯತ್ತಿನ ಪ್ರಾಣಿ ಎಂಬುದನ್ನು ನಾಯಿಯೊಂದು ಮತ್ತೊಮ್ಮೆ ಸಾಬೀತುಪಡಿಸಿದೆ.
ಈ ಘಟನೆ ನಡೆದಿದ್ದು ಲಂಡನ್ನಿನ ವಿನ್ನೆರ್ಶ್ ಎಂಬಲ್ಲಿ. ತನ್ನ ನಾಯಿಯೊಂದಿಗೆ ವಾಕಿಂಗ್ ಗೆ ಹೊರಟಿದ್ದ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಲು ಕಾಮುಕನೊಬ್ಬ ಪ್ರಯತ್ನಿಸಿದ್ದ. ಎಷ್ಟೇ ಪ್ರತಿರೋಧಿಸಿದರೂ, ಆಕೆಯ ಬಟ್ಟೆಗಳನ್ನು ಹರಿದು ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಆತನ ಮೇಲೆ ಎರಗಿದ ನಾಯಿ, ತನ್ನ ಒಡತಿಯನ್ನು ರಕ್ಷಿಸುವಲ್ಲಿ ಸಫಲವಾಗಿದೆ.

ಆತನ ಮೇಲೆರಗಿ, ಕಚ್ಚಿ, ಆತ ಆ ಸ್ಥಳದಿಂದ ಓಡುವಂತೆ ಮಾಡಿದ ನಾಯಿ ಹತ್ತಿರದಲ್ಲಿದ್ದ ಜನರನ್ನೆಲ್ಲ ಕರೆದು ತನ್ನ ಒಡತಿಯನ್ನು ರಕ್ಷಿಸುವಂತೆ ತನ್ನದೇ ಭಾಷೆಯಲ್ಲಿ ಕರೆದಿದೆ. ನಿರಂತರವಾಗಿ ಬೊಗಳುತ್ತಿದ್ದ ನಾಯಿಯನ್ನು ಕಂಡು ಹತ್ತಿರ ಬಂದು ನೋಡಿದ ಜನರಿಗೆ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಕಾಣಿಸಿದೆ.
ಆಘಾತದಿಂದ ಪ್ರಜ್ಞೆ ಕಳೆದುಕೊಂಡಿದ್ದ ಯುವತಿಯನ್ನು ಜನರೆಲ್ಲ ಸೇರಿ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ತನ್ನ ಯಜಮಾನತಿಯನ್ನು ರಕ್ಷಿಸಿದ ನಾಯಿಯ ನಿಯತ್ತಿನ ಕುರಿತು ಶ್ಲಾಘನೆ ವ್ಯಕ್ತವಾಗಿದೆ.












Click it and Unblock the Notifications