Get Updates
Get notified of breaking news, exclusive insights, and must-see stories!

ಕೊಲಂಬಿಯಾದ ವಸತಿ ಪ್ರದೇಶದಲ್ಲಿ ಸಣ್ಣ ವಿಮಾನ ಪತನ: 8 ಜನರ ಸಾವು

ಬೊಗೋಟಾ: ಎಂಟು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವೊಂದು ಕೊಲಂಬಿಯಾದ ಮೆಡೆಲಿನ್ ನಗರದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ಸೋಮವಾರ ಮಾಹಿತಿ ನೀಡಿದ್ದಾರೆ.

ವಿಮಾನವು ಸೋಮವಾರ ಬೆಳಿಗ್ಗೆ ಒಲಯಾ ಹೆರೆರಾ ನಿಲ್ದಾಣದಿಂದ ಟೇಕ್‌ಆಪ್‌ ಆಗಿದೆ. ಟೇಕ್‌ಆಪ್‌ ಆದ ಸ್ಪಲ್ಪ ಸಮಯದಲ್ಲೇ ಮೆಡೆಲಿನ್‌ ನಗರದ ವಸತಿ ಪ್ರದೇಶದಲ್ಲಿರುವ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಕಾರಣ ಈ ಅಪಘಾತ ಸಂಭವಿಸಿದೆ.

ಅಪಘಾತ ಸಂಭವಿಸಿದ ಜಾಗದಲ್ಲಿ ದಟ್ಟವಾದ ಕಪ್ಪು ಹೊಗೆ ಕಾಣಿಸಿಕೊಂಡಿದ್ದು, ಇದಕ್ಕೆ ಎಂಜಿನ್‌ ವೈಫಲ್ಯವೇ ಕಾರಣ ಎಂದು ತಿಳಿದುಬಂದಿದೆ.

8 Killed As Small Plane Crashes Into Residential Area In Colombia

ವಿಮಾನದಲ್ಲಿದ್ದ ಎಂಟು ಜನರಲ್ಲಿ ಆರು ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಸೇರಿದ್ದಾರೆ ಎಂದು ವಿಮಾನ ನಿಲ್ದಾಣದ ಟ್ವಿಟ್ವರ್‌ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.

ವಿಮಾನ ಡಿಕ್ಕಿ ಹೊಡೆದ ಮನೆಯಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಕೊಲಂಬಿಯಾದ ಎರಡನೇ ಅತಿ ದೊಡ್ಡ ನಗರ ಮೆಡೆಲಿನ್‌. ಇಲ್ಲಿನ ಬೆಲೆನ್‌ ರೊಸೆಲ್ಸ್‌ ಸೆಕ್ಟರ್‌ನಲ್ಲಿ ವಿಮಾನ ದುರಂತ ಸಂಭವಿಸಿದೆ. ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರ ಸನ್ನದ್ಧವಾಗಿದೆ ಎಂದು ಮೇಯರ್‌ ಡೇನಿಯಲ್‌ ಕ್ವಿಂಟೆರೋ ಟ್ವೀಟ್‌ ಮಾಡಿದ್ದಾರೆ.

ಅಪಘಾತಕ್ಕೀಡಾದ ವಿಮಾನವು ಮೆಡೆಲಿನ್‌ನಿಂದ ಚೊಕೊ ಪ್ರದೇಶದ ಪಿಝಾರೊ ಪಟ್ಟಣಕ್ಕೆ ಪ್ರಯಾಣ ಬೆಳೆಸಿತ್ತು.

ವಿಮಾನದ ಟೇಕ್‌ಆಫ್‌ ಸಂದರ್ಭದಲ್ಲೇ ಎಂಜಿನ್‌ ವೈಫಲ್ಯ ಕಾಣಿಸಿಕೊಂಡಿತು. ಪೈಲಟ್‌ಗಳ ಸತತ ಪ್ರಯತ್ನದ ನಂತರವೂ ಒಲಯಾ ಹೆರೆಯಾ ನಿಲ್ದಾನಕ್ಕೆ ಹಿಂತಿರುಗಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊ ಪ್ರಕಾರ, ವಿಮಾನವು ಮನೆಯೊಂದಕ್ಕೆ ಅಪ್ಪಳಿಸಿದೆ. ಮನೆಯ ಮಹಡಿ ಭಗ್ನಗೊಂಡಿದೆ. ಕುಸಿದ ಇಟ್ಟಿಗೆ ಗೋಡೆಗಳ ನಡುವೆ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಮೆಡೆಲಿನ್ ನಗರವು ಕಿರಿದಾದ ಕಣಿವೆಯಲ್ಲಿದೆ, ಆಂಡಿಸ್ ಪರ್ವತಗಳಿಂದ ಆವೃತವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+