ಭಾರತದಿಂದ ಕಸಿದಿದ್ದ ಜಾಗವನ್ನು ಚೀನಾಕ್ಕೆ ಪರಭಾರೆ ಮಾಡಿತೇ ಪಾಕ್?
ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಜಿಟ್- ಬಾಲ್ಟಿಸ್ತಾನ್ ಪ್ರಾಂತ್ಯದಲ್ಲಿ ಚೀನಾಕ್ಕೆ ಪರಭಾರೆ ಮಾಡಿರುವ ಪಾಕಿಸ್ತಾನ. ಈ ಪ್ರಾಂತ್ಯದಲ್ಲಿ ಚೀನಾ ಕಂಪನಿಗಳ ಹಾಗೂ ಚೀನಾ ಸೈನಿಕರ ಓಡಾಟದಿಂದಾಗಿ ಅಲ್ಲಿನ ಜನರಿಗೆ ಹೆಚ್ಚಿದ ಆತಂಕ.
ನವದಹೆಲಿ, ಜೂನ್ 6: ಸುಮಾರು 70 ವರ್ಷಗಳ ಹಿಂದೆ ಭಾರತದಿಂದ ಕಸಿದುಕೊಂಡಿದ್ದ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಪ್ರಮುಖ ಭಾಗವಾಗಿದ್ದ ಗಿಲ್ಜಿಟ್-ಬಾಲ್ಟಿಸ್ತಾನ್ ನ ಪ್ರಾಂತ್ಯವನ್ನು ಈಗ ಚೀನಾಕ್ಕೆ ಪರಭಾರೆ ಮಾಡಲು ಪಾಕಿಸ್ತಾನ ಮುಂದಾಗಿದೆ.
ಪಾಕಿಸ್ತಾನದ ಈ ನಡೆಯನ್ನು ವಿರೋಧಿಸಿರುವ ಅಲ್ಲಿನ ಜನರು, ಇದೀಗ ಪಾಕಿಸ್ತಾನ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಪಾಕಿಸ್ತಾನ ಯಾವುದೇ ಘೋಷಣೆ ಮಾಡಿಲ್ಲ.[ತೆಲಂಗಾಣ: ಶಿವಲಿಂಗ ಹುಡುಕಲು ಹೈವೇ ಅಗೆದು ಹಾಳುಗೆಡವಿದ ಜನ]

ಗಿಲ್ಜಿಟ್- ಬಾಲ್ಟಿಸ್ತಾನ್ ನ ಪ್ರಾಂತ್ಯದ ಭೂಮಿಯನ್ನು ಚೀನಾಕ್ಕೆ ಪರಭಾರೆ ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿ ಈಗ ಚೀನಾದ ಕೆಲ ಕಂಪನಿಗಳು ತಮ್ಮ ಕಾರ್ಖಾನೆಗಳನ್ನು ನಿರ್ಮಿಸಲು ಈ ಪ್ರದೇಶದಲ್ಲಿ ಸ್ಥಳ ಗುರುತು ಹಾಕಲು ಆರಂಭಿಸಿವೆ. ಈ ಪ್ರದೇಶವನ್ನು ಉದ್ದೇಶಿತ ಚೀನಾ-ಪಾಕಿಸ್ತಾನ ವಾಣಿಜ್ಯ ಕಾರಿಡಾರ್ (ಸಿಪಿಇಸಿ) ಈ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.[ಕೊನೆಗೂ ಬಿಡುಗಡೆ ಡೇಟ್ ಪಡೆದ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ']
ಅಲ್ಲದೆ, ಚೀನಾದ ಸೇನೆಯು ಈ ಪ್ರಾಂತ್ಯಗಳಲ್ಲಿ ಕವಾಯಿತು ಆರಂಭಿಸಿರುವುದು ಈ ಪ್ರದೇಶವನ್ನು ಚೀನಾ ಆಕ್ರಮಿಸುತ್ತಿರುವುದರ ಸ್ಪಷ್ಟ ಕುರುಹು ಎಂದು ಅಲ್ಲಿನ ಜನರು ಹೇಳಿದ್ದಾರೆ.












Click it and Unblock the Notifications