Earthquake: ಪಪುವಾ ನ್ಯೂ ಗಿನಿಯಾದಲ್ಲಿ ಪ್ರಬಲ ಭೂಕಂಪ: 7.0 ತೀವ್ರತೆ ದಾಖಲು, ಸುನಾಮಿ ಎಚ್ಚರಿಕೆ!
ಆಸ್ಟ್ರೇಲಿಯಾ(ಸಿಡ್ನಿ)ಏಪ್ರಿಲ್ 3: ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚಾಗಿ ಭೂಕಂಪ ನಿರಂತರವಾಗಿ ಅನುಭವವಾಗುತ್ತಿದ್ದು, ಮನುಕುಲವೇ ಭಯದಲ್ಲಿದೆ. ಸೋಮವಾರ ಬೆಳಗ್ಗೆ ಸಿಡ್ನಿದ ಪಪುವಾ ನ್ಯೂಗಿನಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ
ಟಿಬೆಟ್ ಮತ್ತು ಆಸ್ಟ್ರೇಲಿಯಾದ ಸಮೀಪವಿರುವ ಪಪುವಾ ನ್ಯೂಗಿನಿಯಾದಲ್ಲಿ ಸೋಮವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ. ಟಿಬೆಟ್‌ನ ಶಿಜಾಂಗ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.2 ಅಳತೆಯ ಭೂಕಂಪ ಸಂಭವಿಸಿದರೆ, ವಾಯುವ್ಯ ಪಪುವಾ ನ್ಯೂಗಿನಿಯಾದಲ್ಲಿ 7.0 ಅಳತೆಯ ಪ್ರಬಲ ಭೂಕಂಪ ಸಂಭವಿಸಿದೆ.

ಪಪುವಾ ನ್ಯೂಗಿನಿಯಾದಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಭೂಕಂಪ ಸಂಭವಿಸಿದ್ದು, ಭೂಕಂಪವು ಕರಾವಳಿ ಪಟ್ಟಣವಾದ ವೆವಾಕ್‌ನಿಂದ 97 ಕಿಲೋಮೀಟರ್ (60 ಮೈಲುಗಳು) 62 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಮಾಹಿತಿ ನೀಡಿದೆ.
ಪಪುವಾ ನ್ಯೂಗಿನಿಯಾ ಪ್ರದೇಶವು ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದರೂ, ಇಲ್ಲಿ ವಾಸಿಸುವ ಜನರಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು USGS ಹೇಳಿದೆ. ಅಲ್ಲದೇ ದ್ರವೀಕರಣ ಎಂದು ಕರೆಯಲ್ಪಡುವ ನೆಲದ ಈ ಸಡಿಲಗೊಳಿಸುವಿಕೆಯು ಗಣನೀಯವಾಗಿ ನೆಲದ ಕುಸಿತಕ್ಕೆ ಕಾರಣವಾಗಬಹುದು ಎಂದು ಭೂಕಂಪಶಾಸ್ತ್ರ ಸಂಸ್ಥೆ ಹೇಳಿದೆ.
ಇಂಡೋನೇಷ್ಯಾ ಗಡಿಯಿಂದ ಪೂರ್ವಕ್ಕೆ 100 ಕಿಲೋಮೀಟರ್ ದೂರದಲ್ಲಿರುವ ಪಪುವಾ ನ್ಯೂಗಿನಿಯಾ ದ್ವೀಪದಲ್ಲಿ ಈ ಭೂಕಂಪವು ಇಡೀ ಪ್ರದೇಶವನ್ನು ನಡುಗಿಸಿದೆ ಎಂದು ವರದಿಯಾಗಿದೆ.

ನ್ಯೂ ಬ್ರಿಟನ್ ಹೆಚ್ಚು ಭೂಕಂಪ ಸಂಭವಿಸಿದ ಪ್ರದೇಶವಾಗಿದೆ. ಇದು ಪೂರ್ವ ಪಪುವಾ ನ್ಯೂಗಿನಿಯಾದ ದ್ವೀಪಸಮೂಹದ ಭಾಗವಾಗಿದೆ. ಈ ಹಿಂದೆ ಫೆಬ್ರವರಿ ಅಂತ್ಯದಲ್ಲಿಯೂ 6.2 ತೀವ್ರತೆಯ ಭೂಕಂಪ ಸಂಭವಿಸಿತ್ತು.












Click it and Unblock the Notifications