ಹಿಂದೂ ಮಹಾಸಾಗರದಲ್ಲಿ ಭೂಕಂಪ: ಆಸ್ಟ್ರೇಲಿಯಾಕ್ಕೆ ಸುನಾಮಿ ಭೀತಿ

ಪರ್ತ್,ಡಿಸೆಂಬರ್, 05: ಇತ್ತ ತಮಿಳುನಾಡಲ್ಲಿ ಮಳೆ ಲಕ್ಷಾಂತರ ಜನರನ್ನು ಬೀದಿಗೆ ತಂದಿದ್ದರೆ, ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಶನಿವಾರ ಮುಂಜಾನೆ 4.30ರ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿದೆ.

ರಿಕ್ಟರ್ ಮಾಪಕದಲ್ಲಿ 7.1 ಭೂಕಂಪ ದಾಖಲಾಗಿದ್ದು, ಆಸ್ಟ್ರೇಲಿಯಾ ಕರಾವಳಿ ಭಾಗಕ್ಕೆ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯನ್ ಸುನಾಮಿ ಮಾಹಿತಿ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಪರ್ತ್​ನಿಂದ ಅಂದಾಜು 2,860 ಕಿಲೋ ಮೀಟರ್ ದೂರದಲ್ಲಿ ಕಂಪನ ಕೇಂದ್ರೀಕೃತವಾಗಿದ್ದು, ಸುಮಾರು 10 ಕಿಲೋ ಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಯುಎಸ್ ಭೂವಿಜ್ಞಾನ ಸಮೀಕ್ಷಾ ಕೇಂದ್ರ ಮಾಹಿತಿ ನೀಡಿದೆ.[ನಡುಗಿದ ಹಿಂದೂಕುಷ್ ಪರ್ವತ, ಜಮ್ಮು ಕಾಶ್ಮೀರದಲ್ಲೂ ಭೂಕಂಪ]

earth

ಕಳೆದ ತಿಂಗಳು ಹಿಂದುಕೂಷ್ ಪರ್ವತ ಭಾಗದಲ್ಲಿ ಸಂಭವಿಸಿದ್ದ ಭೂಕಂಪ ಅಪಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಭಾರೀ ಅನಾಹುತ ಮಾಡಿತ್ತು. ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪ ಲಕ್ಷಾಂತರ ಜನರ ಪ್ರಾಣ ಬಲಿ ಪಡೆದಿತ್ತು. ಅಲ್ಲದೇ ಉತ್ತರ ಭಾರತ ಮತ್ತು ಅಂಡಮಾನ್ ನಿಕೋಬಾರ್ ದ್ವೀಪದಲ್ಲೂ ಕಳೆದ ತಿಂಗಳು ಸಣ್ಣ ಪ್ರಮಾಣದಲ್ಲಿ ಭೂಕಂಪ ಸಂಭವಿಸಿತ್ತು.[ಭೂಕಂಪದ ಅಸಲಿ ಕಾರಣ ಪತ್ತೆ ಹಚ್ಚಿದ ಮೌಲಾನಾ!]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+