ಟೋಕಿಯೋದಲ್ಲಿ ಪ್ರಬಲ ಭೂಕಂಪ: 6.0 ತೀವ್ರತೆ ದಾಖಲು
ಟೋಕಿಯೋ, ಸೆಪ್ಟೆಂಬರ್ 12: ಜಪಾನ್ ರಾಜಧಾನಿ ಟೋಕಿಯೋ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೋಕಿಯೋ ನಗರದ ಈಶಾನ್ಯ 407ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರಬಿಂದು ಪತ್ತೆಯಾಗಿದೆ. ಬೆಳಗ್ಗೆ 8.14ರ ವೇಳೆ ಭೂಕಂಪ ಸಂಭವಿಸಿದೆ.
ಇನ್ಜು ಭೂಕಂಪನಿಂದ ಯಾವುದೇ ಜೀವಹಾನಿ ಅಥವಾ ಆಸ್ತಿ ಹಾನಿಯಾದ ಕುರಿತು ವರದಿಯಾಗಿಲ್ಲ ಎನ್ನಲಾಗಿದ್ದು, ಸ್ಥಳೀಯ ಆಡಳಿತ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.

ಜಪಾನ್ ತೀವ್ರ ಭೂಕಂಪನ ಕೇಂದ್ರದಲ್ಲಿದ್ದು, ಇಲ್ಲಿ ಭುಕಂಪನಗಳು ತೀರ ಸಾಮಾನ್ಯ. ಭೂಕಂಪಮನ ಮಾತ್ರವಲ್ಲದೇ ಸುನಾಮಿ ಕೂಡ ಜಪಾನ್‌ನಲ್ಲಿ ಸಾಮಾನ್ಯ ನೈಸರ್ಗಿಕ ವಿಪತ್ತಾಗಿದೆ.
Recommended Video
Dubaiನಲ್ಲಿ ಶುರುವಾಯ್ತು Chahal ಮಂಗನಾಟ | Oneindia Kannada












Click it and Unblock the Notifications