ಬಾಂಗ್ಲಾದೇಶದಲ್ಲಿ ರೈಲಿಗೆ ಬೆಂಕಿ: 5 ಮಂದಿ ಸಾವು, ಹಲವರಿಗೆ ಗಾಯ- ಗೋದ್ರಾ ಹತ್ಯಾಕಾಂಡ ನೆನಪಿಸಿದ ಘಟನೆ
ಢಾಕಾ ಜನವರಿ 6: ಬಾಂಗ್ಲಾದೇಶದ ಪ್ಯಾಸೆಂಜರ್ ರೈಲಿನಲ್ಲಿ ಶುಕ್ರವಾರ ರಾತ್ರಿ ಬೆಂಕಿ ಹೊತ್ತಿಕೊಂಡಿದ್ದು ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆಂದು ವರದಿಯಾಗಿದೆ.
ರಾಜಧಾನಿ ಢಾಕಾದ ಗೋಪಿಬಾಗ್ ಪ್ರದೇಶದಲ್ಲಿ ಬೆನಾಪೋಲ್ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದೆ. ಪ್ರತಿಪಕ್ಷಗಳ ಬಹಿಷ್ಕಾರದಿಂದಾಗಿ ಅಶಾಂತಿಯಿಂದ ಮುಳುಗಿರುವ ಬಾಂಗ್ಲಾದೇಶದಲ್ಲಿ ಜನವರಿ 7ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ನಡುವೆ ಘಟನೆ ನಡೆದಿರುವುದು ಆತಂಕ ಹೆಚ್ಚಿಸಿದೆ. ಈ ರೈಲು ಢಾಕಾವನ್ನು ಬಾಂಗ್ಲಾದೇಶದ ಪ್ರಮುಖ ಭೂ ಬಂದರು ಬೆನಾಪೋಲ್ಗೆ ಸಂಪರ್ಕಿಸುತ್ತದೆ.

ದಿ ಡೈಲಿ ಸ್ಟಾರ್ ವರದಿಯ ಪ್ರಕಾರ, ಗೋಪಿಬಾಗ್ ಪ್ರದೇಶದಲ್ಲಿ ರಾತ್ರಿ 9.00 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 10.20ರ ವೇಳೆಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ಈ ರೈಲಿನಲ್ಲಿ ಅನೇಕ ಭಾರತೀಯ ಪ್ರಜೆಗಳು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಢಾಕಾಗೆ ಹೋಗುವ ರೈಲಿನ ಕನಿಷ್ಠ ಐದು ಕಂಪಾರ್ಟ್‌ಮೆಂಟ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದು ದುಷ್ಕರ್ಮಿಗಳ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಂಪಾರ್ಟ್‌ಮೆಂಟ್‌ಗಳಲ್ಲಿ ಐವರು ಸಾವನ್ನಪ್ಪಿದ್ದು ಇನ್ನೂ ಹಲವರು ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಭಾನುವಾರ ನಡೆಯಲಿರುವ ನಿರ್ಣಾಯಕ ಸಂಸತ್ತಿನ ಚುನಾವಣೆಗೂ ಮುನ್ನ ಈ ಹಿಂಸಾಚಾರ ಚುನಾವಣಾ ಪೂರ್ವ ಹಂತವನ್ನು ಹಾಳುಮಾಡಿದೆ.
ಪ್ರಧಾನ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮತ್ತು ಅದರ ಮಿತ್ರಪಕ್ಷಗಳು ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣ ಬಹಿಷ್ಕರಿಸುವಂತೆ ಕರೆ ನೀಡಿದ್ದು, ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆ ಮತ್ತು "ಮುಕ್ತ ಮತ್ತು ನ್ಯಾಯಯುತ ಚುನಾವಣೆ"ಗಾಗಿ ಸರ್ಕಾರವನ್ನು ರಚಿಸುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications