ಟ್ರಂಪ್ ಬಲವಂತವಾಗಿ ನನ್ನ ಅಂಗಾಂಗ ಸ್ಪರ್ಶಿಸಿದ್ದಾರೆ: ಮಹಿಳೆ ದೂರು

Posted By:
Subscribe to Oneindia Kannada

ವಾಷಿಂಗ್ಟನ್, ಅಕ್ಟೋಬರ್, 21: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಮಹಿಳೆಯರ ದೂರುಗಳು ಮುಂದುವರೆದಿವೆ.

ಟ್ರಂಪ್ ಅದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗಿನಿಂದ ದಿನಕೊಬ್ಬರಂತೆ ಮಹಿಳೆಯರು ಟ್ರಂಪ್ ವಿರುದ್ಧ ದೂರು ನೀಡುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಕರೆನಾ ವರ್ಜಿನಿಯಾ(45) ಎಂಬ ಯೋಗ ಶಿಕ್ಷಕಿಯೊಬ್ಬರು ದೂರು ನೀಡಿದ್ದಾರೆ. [ಟ್ರಂಪ್ ಲೈಂಗಿಕ ಪುರಾಣವನ್ನು ಬಿಚ್ಚಿಟ್ಟ ಮಹಿಳಾಮಣಿಗಳು!]

45 Years old Yoga teacher claims trump groped her at 1988 Tennis

ಈ ಕುರಿತು ಮಾಹಿತಿ ನೀಡಿರುವ ಅವರು "ಹದಿನೆಂಟು ವರ್ಷದ ಹಿಂದೆ (1998) ಯುಎಸ್ ಒಪನ್ ಟೆನ್ನಿಸ್ ಟೂರ್ನಿಯಲ್ಲಿ ಆಟಗಾರರಿಗೆ ಟ್ರೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ, ಟ್ರಂಪ್ ನನ್ನ ಜತೆ ಅಸಹ್ಯವಾಗಿ ಮಾತನಾಡಿ ಬಲವಂತವಾಗಿ ನನ್ನ ದೇಹದ ಅಂಗಾಂಗಳನ್ನು ಸ್ಪರ್ಶಿಸಿದ್ದರು ಎಂದು ಆರೋಪಿಸಿದ್ದಾರೆ.

ನನ್ನ ಕುರಿತು ಮತ್ತೊಬ್ಬ ವ್ಯಕ್ತಿಯೊಂದಿಗೆ ಮಾತನಾಡಿದ ಟ್ರಂಪ್ " ಆ ಮಹಿಳೆಯನ್ನು ನೋಡು ಎಷ್ಟು ಸುಂದರವಾಗಿದ್ದಾಳೆ, ಇಂತಹ ಸುಂದರಿಯನ್ನು ನಾನು ಎಂದೂ ನೋಡಿಲ್ಲ" ಎಂದು ಕಾಮೆಂಟ್ ಮಾಡಿದ್ದರು ಎಂದು ಮಹಿಳೆ ಹೇಳಿದ್ದಾರೆ.

ಆ ಸಂದರ್ಭದಲ್ಲಿ ನನ್ನ ವಯಸ್ಸು 27. ಅವರು ಬಲವಂತವಾಗಿ ನನ್ನ ಅಂಗಾಂಗಗಳನ್ನು ಸ್ಪರ್ಶಿಸುತ್ತಿದ್ದಾಗ ಏನೂ ಮಾಡಲಾಗದೆ ಅಸಹಾಯಕಳಾಗಿ ಬಿಟ್ಟಿದ್ದೆ ಎಂದು ಹೇಳಿದ್ದಾರೆ.

ಆದರೆ ಟ್ರಂಪ್ ಬೆಂಬಲಿಗರು ಮಹಿಳೆಯ ಆರೋಪವನ್ನು ಅಲ್ಲಗೆಳೆದಿದ್ದು, ಟ್ರಂಪ್ ಅವರನ್ನು ಸೋಲಿಸುವ ಉದ್ದೇಶದಿಂದ ಮಹಿಳೆಯರು ಈ ರೀತಿ ಆರೋಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Another woman came forward Thursday claiming that Donald Trump groped her and made inappropriate sexual remarks, adding to accusations of nine other women that have emerged in recent days.
Please Wait while comments are loading...