ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ ಬಾಲಕರನ್ನು ರಕ್ಷಿಸಿದ್ದು ಹೇಗೆ?
ಮಾಯ್ ಸೈ, ಜುಲೈ 9: ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಎರಡು ವಾರಗಳಿಂದ ಸಿಲುಕಿರುವ 13 ಮಂದಿಯ ಪೈಕಿ ನಾಲ್ವರು ಬಾಲಕರನ್ನು ಭಾನುವಾರ ರಕ್ಷಿಸಲಾಗಿದೆ.
ಉಳಿದ ಬಾಲಕರು ಮತ್ತು ಅವರ ಫುಟ್ಬಾಲ್ ತಂಡದ ಕೋಚ್‌ಅನ್ನು ಗುಹೆಯಿಂದ ಹೊರಗೆ ಕರೆತಂದು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಫುಟ್ಬಾಲ್ ತಂಡವೊಂದರ 11-16 ವಯಸ್ಸಿನ ಬಾಲಕರು ಮತ್ತು ಅವರ 25 ವರ್ಷದ ಕೋಚ್ ಪ್ರವಾಸಕ್ಕೆಂದು ತೆರಳಿದ್ದಾಗ ಇಲ್ಲಿನ ಬೃಹತ್ ಗುಹೆಯೊಳಗೆ ತೆರಳಿದ್ದರು. ಆದರೆ, ವಿಪರೀತ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಅವರು ಸಿಲುಕಿದ್ದರು.
ನೀರಿನ ಮಟ್ಟ ಅಪಾಯಕಾರಿ ಪ್ರಮಾಣದಲ್ಲಿ ಇರುವುದರಿಂದ ಅವರನ್ನು ಅಲ್ಲಿಂದ ಹೊರಕ್ಕೆ ಕರೆತರಲು ಸಾಕಷ್ಟು ಹರಸಾಹಸಪಡಬೇಕಾಗಿದೆ.

ಇನ್ನೂ ನಾಲ್ಕು ದಿನ ಬೇಕಾಗಬಹುದು
ಈಜು ಪರಿಣತರು ಗುಹೆಯ ಸಂಕೀರ್ಣ ಭಾಗದೊಳಗೆ ಪ್ರವೇಶಿಸಿದ್ದಾರೆ. ನೌಕಾ ಪಡೆಯ ರಕ್ಷಣಾ ತಂಡವು ನಾಲ್ವರು ಬಾಲಕರನ್ನು ರಕ್ಷಿಸಿದ್ದಾಗಿ ಫೇಸ್‌ಬುಕ್ ಪುಟದಲ್ಲಿ ಮಾಹಿತಿ ನೀಡಿದೆ.
ರಕ್ಷಿಸಲಾದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರೀಕ್ಷೆಗಿಂತಲೂ ಉತ್ತಮವಾಗಿ ಕಾರ್ಯಾಚರಣೆ ನಡೆದಿದೆ. ಹೆಚ್ಚು ಆರೋಗ್ಯವಂತಾಗಿರುವವರನ್ನು ಮೊದಲು ಹೊರಗೆ ಕರೆತರಲಾಗಿದೆ. ಮುಂದಿನ ಹಂತದ ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ ಎಂದು ಚಿಯಾಂಗ್ ರೈನ ಹಂಗಾಮಿ ಗವರ್ನರ್ ನರೊಂಗ್ಸಕ್ ಒಸಟನಕೊರ್ನ್ ಹೇಳಿದ್ದಾರೆ.
ಒಟ್ಟು ಎಲ್ಲ 13 ಮಂದಿಯ ರಕ್ಷಣೆಗೆ ಇನ್ನೂ ಎರಡರಿಂದ ನಾಲ್ಕು ದಿನಗಳ ಕಾರ್ಯಾಚರಣೆ ನಡೆಸಬೇಕಾಗಲಿದೆ. ಇದು ಹವಾಮಾನ ಮತ್ತು ಪ್ರವಾಹ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿದೇಶಿ ಮುಳುಗುತಜ್ಞರ ಸಹಾಯ
13 ವಿದೇಶಿ ಮತ್ತು 5 ಥಾಯ್ಲೆಂಡ್ ಮುಳುಗುತಜ್ಞರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರತಿ ಒಬ್ಬ ಬಾಲಕನಿಗೆ ಇಬ್ಬರಂತೆ ಮುಳುಗುತಜ್ಞರ ನೆರವು ನೀಡಲಾಗುತ್ತಿದೆ.
ಗುಹೆಯೊಳಗಿಂದ ಬಾಲಕರು ಮತ್ತು ಅವರ ಕೋಚ್ ಅನ್ನು ಹೊರಗೆ ಕರೆತರುವುದು ಸುಲಭವಾಗಿಲ್ಲ. ಗುಹೆಯ ಒಳಗೆ ಕಗ್ಗತ್ತಲೆ ಕವಿದಿದ್ದು, ಚಿಕ್ಕದಾದ ಕಿಂಡಿಯಲ್ಲಿ ಕೆಸರಿನ ನೀರಿನೊಳಗೆ ಸಾಗುವುದು ಅಪಾಯಕಾರಿಯಾಗಿದೆ. ಅಲ್ಲದೆ ಆಮ್ಲಜನಕದ ಕೊರತೆಯೂ ಇದೆ.
|
ಅಪಾಯಕಾರಿ ಸಾಹಸ
ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ನೌಕಾದಳದ ನಿವೃತ್ತ ಅಧಿಕಾರಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದರು. ನೀರಿನಡಿಯಿಂದ ಮಕ್ಕಳನ್ನು ಹೊರಗೆ ಕರೆತರುವುದು ಬಲು ಅಪಾಯಕಾರಿಯಾಗಿದೆ. ಏಕೆಂದರೆ ಅವರಿನ್ನೂ ಬಾಲಕರಾಗಿರುವುದರಿಂದ ಮತ್ತು ಅವರಿಗೆ ಈಜಿನಲ್ಲಿ ಪರಿಣತಿ ಇಲ್ಲದಿರುವುದರಿಂದ ಇದು ದುಸ್ಸಾಹಸವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಮಕ್ಕಳಿಗೆ ನೀರಿನಲ್ಲಿ ಮುಳುಗಿ ಹೊರಗೆ ಬರುವ ತರಬೇತಿಯನ್ನು ನೀಡಲಾಗುತ್ತಿದೆ.
ಗುಹೆಯ ಒಳಭಾಗದ ಹಾದಿ ಸಾಕಷ್ಟು ತಿರುವುಗಳನ್ನು ಹೊಂದಿದ್ದು, ಕಿರಿದಾದ ಮಾರ್ಗದಲ್ಲಿ ನೆರೆ ಆವರಿಸಿದೆ. ಆದರೆ, ಇದಕ್ಕೂ ಮುಂದೆ ಇದ್ದ ಪ್ರತಿಕೂಲ ಹವಾಮಾನ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದು, ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ನೀರಿನ ಮಟ್ಟ ಇಳಿಕೆಯಾಬಹುದು ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
— Elon Musk (@elonmusk) 8 July 2018 |
ಅಮೆರಿಕದ ಸಬ್‌ಮೆರಿನ್
ಗುಹೆಯೊಳಗೆ ಸಿಲುಕಿ ಸಂಕಷ್ಟದಲ್ಲಿರುವ ಬಾಲಕರ ರಕ್ಷಣೆಗೆ 'ಮಕ್ಕಳ ಗಾತ್ರದ ಸಬ್‌ಮೆರಿನ್'ಗಳನ್ನು ಅಮೆರಿಕ ರವಾನಿಸಲಿದೆ.
ಲಾಸ್ ಏಂಜಲಿಸ್‌ನಲ್ಲಿರುವ ಸ್ಪೇಸ್ ಎಕ್ಸ್ ಮತ್ತು ಟೆಲ್ಸಾ ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ತಮ್ಮ ಬಳಿ ಇರುವ ಮಕ್ಕಳ ಗಾತ್ರದ ಸಬ್‌ಮೆರಿನ್‌ಗಳನ್ನು ಥಾಯ್ಲೆಂಡ್‌ಗೆ ರವಾನಿಸುವುದಾಗಿ ತಿಳಿಸಿದ್ದಾರೆ.
ತಮ್ಮ ಬಳಿ ಇರುವ ಸಬ್‌ಮೆರಿನ್‌ಗಳಿಂದ ಮಕ್ಕಳ ರಕ್ಷಣೆಗೆ ಸಹಾಯವಾಗಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
|
ರಕ್ಷಣಾ ಕಾರ್ಯಾಚರಣೆ ಹೇಗೆ ಮಾಡಬಹುದು?
ಗುಹೆಯೊಳಗಿನಿಂದ ಮಕ್ಕಳನ್ನು ಹೊರಗೆ ಕರೆತರುವ ಕಾರ್ಯ ಹೇಗೆ ಮಾಡಬಹುದು ಎಂಬ ಎಲಾನ್ ಮಸ್ಕ್ ಅವರ ಪ್ಲಾನ್ ಬಿ ಯೋಜನೆ ಇದು. 'ಕಿಡ್ ಸೈಜ್ಡ್ ಸಬ್‌ಮೆರಿನ್' ಬಳಸಿಕೊಂಡು ಅದರ ಒಳಗೆ ಮಕ್ಕಳನ್ನು ಕೂರಿಸಿ ಹೊರಗೆ ತರಬಹುದು.
ಈಗ ಗುಹೆಯೊಳಗೆ ಉಳಿದಿರುವ ಒಂಬತ್ತು ಬಾಲಕರನ್ನು ಈ ರೀತಿ ರಕ್ಷಣೆ ಮಾಡಬಹುದು ಎಂದು ಚಿತ್ರ ಸಹಿತ ವಿವರಿಸಲಾಗಿದೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications