ನೇಪಾಳ: ವಾರದ ನಂತರ ಪತ್ತೆಯಾದ ಭಾರತೀಯ ಪರ್ವತಾರೋಹಿ ಅನುರಾಗ್ ಮಾಲು
ಕಳೆದ ವಾರ ನಾಪತ್ತೆಯಾಗಿದ್ದ ಅನುರಾಗ್ ಮಾಲು ಅವರನ್ನು ಅನ್ನಪೂರ್ಣ ಪರ್ವತದಿಂದ ಜೀವಂತವಾಗಿ ರಕ್ಷಿಸಲಾಗಿದೆ. ಇದನ್ನು ಸೆವೆನ್ ಸಮ್ಮಿಟ್ ಟ್ರೆಕ್ಸ್ ದೃಢಪಡಿಸಿದೆ. ಅನುರಾಗ್ ಮಾಲು ಕಳೆದ ವಾರ ನೇಪಾಳದ ಅನ್ನಪೂರ್ಣ ಪರ್ವತದಿಂದ ಇಳಿಯುತ್ತಿದ್ದಾಗ ನಾಪತ್ತೆಯಾಗಿದ್ದರು.
ಸದ್ಯ ಅವರು ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅನುರಾಗ್ ಸಹೋದರ ಸುಧೀರ್ ಹೇಳಿದ್ದಾರೆ.

ಅನುರಾಗ್ ಮಾಲು
34 ವರ್ಷದ ಅನುರಾಗ್ ಮಾಲು ರಾಜಸ್ಥಾನದ ಕಿಶನ್‌ಗಢ ನಿವಾಸಿ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಅನುರಾಗ್ ಮಾಲು, IV ಶಿಬಿರದಿಂದ ಹಿಂತಿರುಗುತ್ತಿದ್ದಾಗ ಕ್ಯಾಂಪ್ III ರ ಕೆಳಗಿರುವ ಸಂದುಗೆ ಬಿದ್ದಿದ್ದರು. ಇದನ್ನು ಆರೋಹಿಗಳ ದಂಡಯಾತ್ರೆ ಸಂಘಟಕರ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಅನುರಾಗ್ ಮಾಲು 8,000 ಮೀಟರ್‌ಗಳ ಮೇಲಿನ ಎಲ್ಲಾ 14 ಪರ್ವತಗಳನ್ನು ಏರುವ ಕಾರ್ಯಾಚರಣೆಯಲ್ಲಿದ್ದರು.
ಈ ವೇಳೆ ಅವರು ಮಂಜಿನ ಸಂದಿನಲ್ಲಿ ಸಿಕ್ಕಿಬಿದ್ದದ್ದರು ಎಂದು ತಿಳಿದು ಬಂದಿದೆ. ಇದರನ್ನು ಗುರುತಿಸಿದ ರಕ್ಷಣಾ ತಂಡ ಅವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಅನ್ನಪೂರ್ಣ ವಿಶ್ವದ ಹತ್ತನೇ ಅತಿ ಎತ್ತರದ ಪರ್ವತ
ಅನ್ನಪೂರ್ಣ ಪರ್ವತ ವಿಶ್ವದ ಹತ್ತನೇ ಅತಿ ಎತ್ತರದ ಪರ್ವತವಾಗಿದೆ ಮತ್ತು ಪರ್ವತಾರೋಹಿಗಳಿಗೆ ಅತ್ಯಂತ ಅಪಾಯಕಾರಿ ಪರ್ವತಗಳಲ್ಲಿ ಒಂದಾಗಿದೆ. ಅನುರಾಗ್ ಅದನ್ನು ಹತ್ತಲು ಹೋಗಿದ್ದರು. ಅನುರಾಗ್ ಅತ್ಯುತ್ತಮ ಪರ್ವತಾರೋಹಿ, ಅದಕ್ಕೂ ಮುನ್ನ ಅವರು ಅನೇಕ ಪರ್ವತಗಳನ್ನು ಏರಿದ್ದಾರೆ. ಮಾಲು ಅವರಿಗೆ REX ಕರಮ್-ವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.












Click it and Unblock the Notifications