ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ: ಆಸ್ಪತ್ರೆಯಲ್ಲಿದ್ದ 2000 ಮಾಸ್ಕ್ ಕಳ್ಳತನ

|
Google Oneindia Kannada News

ಫ್ರೆಂಚ್, ಮಾರ್ಚ್ 4: ಚೀನಾದಿಂದ ವಿಶ್ವಾದ್ಯಂತ ಹರಡುತ್ತಿರುವ ಭಯಾನಕ ಕೊರೊನಾ ವೈರಸ್ ಈಗ ಹಲವು ದೇಶಗಳಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಜಗತ್ತಿನಾದ್ಯಂತ ಸುಮಾರು 93 ಸಾವಿರಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದಿದ್ದು, 3203ಕ್ಕೂ ಅಧಿಕ ಜನರ ಸಾವನ್ನಪ್ಪಿದ್ದಾರೆ.

ಮಾಸ್ಕ್ ಧರಿಸುವುದರಿಂದ ಕೊರೊನಾ ವೈರಸ್‌ನಿಂದ ತಪ್ಪಿಸಿಕೊಳ್ಳಬಹುದು ಎಂಬ ಸಲಹೆ ಹಿನ್ನೆಲೆ ಜನಸಾಮಾನ್ಯರು ಮಾಸ್ಕ್ ಮೊರೆ ಹೋಗುತ್ತಿದ್ದಾರೆ. ಜಗತ್ತಿನಾದ್ಯಂತ ಮಾಸ್ಕ್ ಗಾಗಿ ಹಾಹಾಕಾರ ಶುರುವಾಗಿದೆ. ಭಾರತದಲ್ಲೂ ಮಾಸ್ಕ್ ಗಾಗಿ ಭಾರಿ ಬೇಡಿಕೆ ಉಂಟಾಗಿದೆ.

ಕೊರೊನಾ ವೈರಸ್: ಯಾವ ದೇಶದಲ್ಲಿ ಎಷ್ಟು ಪ್ರಕರಣ, ಎಷ್ಟು ಸಾವು?ಕೊರೊನಾ ವೈರಸ್: ಯಾವ ದೇಶದಲ್ಲಿ ಎಷ್ಟು ಪ್ರಕರಣ, ಎಷ್ಟು ಸಾವು?

ಇದನ್ನೇ ಬಂಡವಾಳವಾಗಿಸಿಕೊಂಡಿರುವ ಖದೀಮರು ಮಾಸ್ಕ್ ಗಳನ್ನು ಕಳ್ಳತನ ಮಾಡಲು ಆರಂಭಿಸಿದ್ದಾರೆ. ದಕ್ಷಿಣ ಫ್ರೆಂಚ್ ನಗರದ ಮಾರ್ಸಿಲ್ಲೆ ಆಸ್ಪತ್ರೆಯಲ್ಲಿ ಸುಮಾರು 2000 ಮಾಸ್ಕ್ ಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

2000 Face Mask Stolen From French Hospital

ಮಾಸ್ಕ್ ಗಳು ಕಳ್ಳತನ ಆಗಿರುವ ಕಾರಣ ಆಸ್ಪತ್ರೆ ಅಧಿಕಾರಿಗಳು ಆಂತರಿಕ ತನಿಖೆ ನಡೆಸಲು ಮುಂದಾಗಿದ್ದಾರಂತೆ. ಪ್ರಸ್ತುತ ಪರಿಸ್ಥಿತಿ ನಿಭಾಯಿಸಲು ಆಸ್ಪತ್ರೆಯಲ್ಲಿ ಅಗತ್ಯ ಮಾಸ್ಕ್ ಗಳು ಲಭ್ಯವಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದುವರೆಗೂ ಫ್ರೆಂಚ್‌ನಲ್ಲಿ 204 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ. ನಾಲ್ಕು ಜನರು ಕೊರೊನಾಗೆ ಬಲಿಯಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಕೊರೊನಾ ಭೀತಿ: ಸಿಲಿಕಾನ್ ಸಿಟಿಯಲ್ಲಿ ದುಬಾರಿ ಆಯ್ತು ಮಾಸ್ಕ್ ಬೆಲೆಕೊರೊನಾ ಭೀತಿ: ಸಿಲಿಕಾನ್ ಸಿಟಿಯಲ್ಲಿ ದುಬಾರಿ ಆಯ್ತು ಮಾಸ್ಕ್ ಬೆಲೆ

ಇನ್ನು ಭಾರತದಲ್ಲೂ ಮಾಸ್ಕ್ ಗಳಿಗಾಗಿ ಭಾರಿ ಹಾಹಾಕಾರ ಶುರುವಾಗಿದೆ. ಅಗತ್ಯ ಸಂಖ್ಯೆಯ ಮಾಸ್ಕ್ ಗಳಲ್ಲು ಇಲ್ಲದ ಕಾರಣ, ಜನರು ಮಾಸ್ಕ್ ಗಳನ್ನು ಕೊಳ್ಳಲು ಮುಗಿಬಿದ್ದಿದ್ದಾರೆ. ಕೆಲವೇ ಕೆಲವು ಮೆಡಿಕಲ್ ಶಾಪ್ ಗಳಲ್ಲಿ ಮಾತ್ರ ಮಾಸ್ಕ್ ಲಭ್ಯವಿದ್ದು, ಬೆಲೆ ಕೂಡ ಹೆಚ್ಚು ಮಾಡಿದ್ದಾರೆ.

English summary
Around 2000 face mask have been stolen from southren french hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X