Breaking: ಬಾಂಗ್ಲಾದೇಶದಲ್ಲಿ ಜನರಿಗೆ ಆವರಿಸಿದ ಕತ್ತಲು
ಢಾಕಾ, ಅಕ್ಟೋಬರ್ 04: ಬಾಂಗ್ಲಾದೇಶದಲ್ಲಿ ಗ್ರಿಡ್ ವೈಫಲ್ಯದಿಂದಾಗಿ ಸುಮಾರು 140 ಮಿಲಿಯನ್ ಜನರು ಕತ್ತಲೆಯಲ್ಲಿ ಕಳೆಯುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನ ವಿದ್ಯುತ್ ಇಲ್ಲದೆ ಮಂಗಳವಾರ ಬಾಂಗ್ಲಾದೇಶ ಜನರು ಪರಿತಪಿಸುವಂತಹ ಸ್ಥಿತಿ ಸೃಷ್ಟಿಯಾಗಿತ್ತು ಎಂದು ಸರ್ಕಾರದ ಪವರ್ ಯುಟಿಲಿಟಿ ಕಂಪನಿ ಮಾಹಿತಿ ನೀಡಿದೆ.
ಪವರ್ ಡೆವಲಪ್‌ಮೆಂಟ್ ಬೋರ್ಡ್ ಪ್ರಕಾರ, ದೇಶದ 80 ಪ್ರತಿಶತಕ್ಕೂ ಹೆಚ್ಚು ಜನರು ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಯ ನಂತರ ಹಠಾತ್ ವಿದ್ಯುತ್ ವ್ಯತ್ಯಯದ ಸಮಸ್ಯೆಯನ್ನು ಎದುರಿಸಿದರು. ಬಾಂಗ್ಲಾದೇಶದ ವಾಯುವ್ಯದ ಕೆಲವು ಸ್ಥಳಗಳನ್ನು ಹೊರತುಪಡಿಸಿ, "ದೇಶದ ಉಳಿದ ಭಾಗಗಳಲ್ಲಿ ವಿದ್ಯುತ್ ಇರಲಿಲ್ಲ" ಎಂದು ಏಜೆನ್ಸಿ ವಕ್ತಾರ ಶಮೀಮ್ ಅಹ್ಸನ್ ತಿಳಿಸಿದರು.
130 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚು ಜನರು ವಿದ್ಯುತ್ ಇಲ್ಲದೆ ಇದ್ದಾರೆ. ದೋಷಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ ಎಂದು ಅಹ್ಸಾನ್ ಹೇಳಿದರು. "ಇದು ಇನ್ನೂ ತನಿಖೆಯಲ್ಲಿದೆ, ತಾಂತ್ರಿಕ ಅಸಮರ್ಪಕ ಕಾರಣ ಸಾಧ್ಯತೆಯಿದೆ," ಎಂದು ಅವರು ಹೇಳಿದರು

ರಾತ್ರಿ 8 ಗಂಟೆ ವೇಳೆಗೆ ಕರೆಂಟ್ ಬರುತ್ತೆ:
22 ದಶಲಕ್ಷಕ್ಕೂ ಹೆಚ್ಚು ಜನರು ವಾಸಿಸುವ ರಾಜಧಾನಿ ಢಾಕಾದಲ್ಲಿ ರಾತ್ರಿ 8 ಗಂಟೆಯ ವೇಳೆಗೆ ವಿದ್ಯುತ್ ಅನ್ನು ಪುನಃಸ್ಥಾಪಿಸಲಾಗುವುದು ಎಂದು ಜೂನಿಯರ್ ತಂತ್ರಜ್ಞಾನ ಸಚಿವ ಜುನೈದ್ ಪಾಲಕ್ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ. ರಷ್ಯಾ-ಉಕ್ರೇನ್ ಆಕ್ರಮಣದ ನಂತರ ಜಾಗತಿಕ ಇಂಧನ ಬೆಲೆಗಳ ಏರಿಕೆ ಪರಿಣಾಮವಾಗಿ ಬಾಂಗ್ಲಾದೇಶವು ಇತ್ತೀಚಿನ ತಿಂಗಳುಗಳಲ್ಲಿ ವಿದ್ಯುತ್ ಬಿಕ್ಕಟ್ಟನ್ನು ಅನುಭವಿಸಿದೆ.
ಬಾಂಗ್ಲಾದೇಶವು ಕೊನೆಯದಾಗಿ ನವೆಂಬರ್ 2014ರಲ್ಲಿ ಒಂದು ದೊಡ್ಡ ಅನಿರೀಕ್ಷಿತ ಬ್ಲ್ಯಾಕೌಟ್‌ಗೆ ಸಾಕ್ಷಿಯಾಯಿತು. ದೇಶದ ಸುಮಾರು ಶೇ.70ರಷ್ಟು ಜನರು ಸುಮಾರು 10 ಗಂಟೆಗಳ ಕಾಲ ವಿದ್ಯುತ್ ಇಲ್ಲದೆ ಹೋದರು.












Click it and Unblock the Notifications