Georgia Indians Death: ಜಾರ್ಜಿಯಾ ರೆಸಾರ್ಟ್‌ನಲ್ಲಿ 12 ಭಾರತೀಯರ ಶವಪತ್ತೆ: ಸಾವಿಗೆ ಕಾರಣ?
ನವದೆಹಲಿ, ಡಿಸೆಂಬರ್ 16: ಈಸ್ಟರ್ನ್ ಯುರೋಪಿನ ಪ್ರಮುಖ ದೇಶಗಳಲ್ಲಿ ಒಂದಾಗಿರುವ ಜಾರ್ಜಿಯಾದಲ್ಲಿ ಕೆಲವು ಭಾರತೀಯರು ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಇಲ್ಲಿನ ಮೌಂಟೇನ್ ರೆಸಾರ್ಟ್ ಗುಡೌರಿಯ ರೆಸ್ಟೋರೆಂಟ್‌ನಲ್ಲಿ 12 ಭಾರತೀಯರು ಶವವಾಗಿ ಪತ್ತೆಯಾಗಿದ್ದಾರೆ. ವಿಚಿತ್ರವೆಂದರೆ ಅವರ ದೇಹದಲ್ಲಿ ಹೇಗೆ ಸತ್ತಿರಬಹುದು ಎಂಬುದರ ಯಾವುದೇ ಚಿಹ್ನೆಗಳು ಇಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಸಚಿವಾಲಯವು ಭಾರತೀಯರ ಸಾವನ್ನು ಖಚಿತಪಡಿಸಿದೆ.
ಇಲ್ಲಿನ ರೆಸಾರ್ಟ್‌ನಲ್ಲಿ ಸಿಕ್ಕ ಭಾರತೀಯರ ಶವಗಳ ಪ್ರಾಥಮಿಕ ತಪಾಸಣೆಯಲ್ಲಿ ಶವಗಳ ಮೇಲೆ ಯಾವುದೇ ಗಾಯಗಳು, ಹಿಂಸೆ ಇನ್ನಿತರ ಹಲ್ಲೆಯ ಚಿಹ್ನೆಗಳು ಕಂಡು ಬಂದಿಲ್ಲ. ಮೃತರು ರೆಸಾರ್ಟ್‌ನಲ್ಲಿ ಕಾರ್ಬನ್ ಮಾನಾಕ್ಸೈಡ್ ವಿಷವಾಯು ಸೇವಿಸಿ ಮೃತಪಟ್ಟಿರಬಹುದೆಂದು ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿಕೆ ಮಾಹಿತಿ ನೀಡಿದೆ. ಈ ಕುರಿತು ಪೊಲೀಸರ ಮಾಹಿತಿಯ ಅಂಶಗಳನ್ನು ಉಲ್ಲೇಖಿಸಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಈ 12 ಮಂದಿ ಮೃತರು ಭಾರತೀಯ ಪ್ರಜೆಗಳು ಎಂದು ಟಿಬಿಲಿಸಿಯಲ್ಲಿರುನ ಭಾರತೀಯ ಮಿಷನ್ ದೃಢಪಡಿಸಿದೆ. ಇನ್ನೂ ಆ ದೇಶ ಸಚಿವಾಲಯದ ಮಾಹಿತಿ ಪ್ರಕಾರ, 11 ಮಂದಿ ವಿದೇಶಿಯರು ಮತ್ತು ಒಬ್ಬರು ಇಲ್ಲಿನ ಪ್ರಜೆ ಎಂದು ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಗ್ಯಾಸ್ ಲೀಕ್ ಆಗಿ ಮೃತಪಟ್ಟಿರಲು ಸಾಕಷ್ಟು ಕಾರಣಗಳು ಇವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಜಾರ್ಜಿಯಾದ ಗುಡೌರಿಯಲ್ಲಿ ರೆಸಾರ್ಟ್‌ನ ಎರಡನೇ ಮಹಡಿಯಲ್ಲಿ ಭಾರತೀಯರ ಮೃತದೇಹ ಪತ್ತೆಯಾಗಿವೆ. ಮಲಗುವ ಕೋಣೆಯಲ್ಲಿ ಮಲಗಿದ್ದಂತೆಯೇ ಶವಗಳು ಪತ್ತೆಯಾಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಜಾರ್ಜಿಯಾ ಭಾರತೀಯ ಮಿಷನ್, ಭಾರತೀಯ ಮೃತರ ದುಃಖತಪ್ತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ. ರೆಸಾರ್ಟ್ ಮೃತಪಟ್ಟ ನಮ್ಮ ಪ್ರಜೆಗಳ ವಿವರಗಳನ್ನು ಪಡೆಯಲು ಸ್ಥಳೀಯ ಅಧಿಕಾರಿಗಳೊಂದಿಗೆ ಮಿಷನ್ ಸಂಪರ್ಕದಲ್ಲಿದೆ. ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ಸಾವಿನ ಕುರಿತು ಕ್ಷಣ ಕ್ಷಣದ ಮಾಹಿತಿಯನ್ನು, ತನಿಖೆ ಕುರಿತು ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರುಕ್ರಿಮಿನಲ್ ಕೋಡ್‌ನ ಕಲಂ 116 ರ ಅಡಿಯಲ್ಲಿ ತನಿಖೆ ಮುಂದುವರೆಸಿದ್ದಾರೆ. ರೆಸಾರ್ಟ್ ನಿರ್ಲಕ್ಷ್ಯದಿಂದ ಇಂತದ್ದೊಂದು ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ರೆಸಾರ್ಟ್ ಒಳಾಂಗಣ ಪ್ರದೇಶದಲ್ಲಿ ವಿದ್ಯುತ್ ಜನರೇಟರ್ ಇಡಲಾಗಿದೆ. ಶುಕ್ರವಾರ ರಾತ್ರಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಬಳಿಕ ಘಟನೆ ನಡೆದಿರಬಹುದು ಅಂತಲೂ ಶಂಕಿಸಲಾಗಿದೆ.
ಇಷ್ಟೊಂದು ಜನರ ಸಾವಿಗೆ ನಿಖರ ಕಾರಣ ಪತ್ತೆಗೆ ಫೋರೆನ್ಸಿಕ್ ವೈದ್ಯಕೀಯ ಪರೀಕ್ಷೆ, ತಜ್ಞರನ್ನು ನೇಮಿಸಲಾಗಿದೆ. ನಾಳೆ ಮಂಗಳವಾರ ಡಿಸೆಂಬರ್ 17ರಂದು ಈ ಕುರಿತು ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.












Click it and Unblock the Notifications